ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ಶ್ರೀಲಂಕಾ ಟೆಸ್ಟ್ ಸರಣಿ: ಮೊದಲ ಪಂದ್ಯದ Live ಸ್ಕೋರ್, ಪ್ಲೇಯಿಂಗ್ XI

Aus vs SL test series, 1st test day 1 Live score, Toss report and Playing XI details, Galle

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗಿದ್ದು ಮೊದಲ ಪಂದ್ಯಕ್ಕೆ ಚಾಲನೆ ದೊರೆತಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಬೌಲಿಂಗ್ ದಾಳಿ ಆರಂಭಿಸಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಬಲಿಷ್ಠ ಆಟಗಾರರೊಂದಿಗೆ ಈ ಎರಡು ತಂಡಗಳು ಕೂಡ ಕಣಕ್ಕಿಳಿದಿರುವ ಕಾರಣ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಗಾಯಗೊಂಡಿದ್ದ ಟ್ರೆವಿಸ್ ಹೆಡ್ ಚೇತರಿಸಿಕೊಂಡಿದ್ದು ಈ ಪಂದ್ಯಕ್ಕೆ ಲಭ್ಯವಾಗಿದ್ದಾರೆ, ಆಸ್ಟ್ರೇಲಿಯಾ ತಂಡ ಇಬ್ಬರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದು ಆಲ್‌ರೌಂಡರ್ ಸ್ಪಿನ್ನರ್‌ಗಳು ಕೂಡ ಸಾಥ್ ನೀಡಲಿದ್ದಾರೆ. ಇನ್ನು ಶ್ರೀಲಂಕಾ ತಂಡ ಓರ್ವ ವೇಗಿ ಹಾಗೂ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ.

Live ಸ್ಕೋರ್‌ಕಾರ್ಡ್ ಹೀಗಿದೆ

1
53770

Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್

ವೈಟ್‌ಬಾಲ್ ಸರಣಿಯಲ್ಲಿ ಪೈಪೋಟಿ

ವೈಟ್‌ಬಾಲ್ ಸರಣಿಯಲ್ಲಿ ಪೈಪೋಟಿ

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ವೈಟ್‌ಬಾಲ್ ಸರಣಿ ಈಗಾಗಲೇ ಅಂತ್ಯವಾಗಿದೆ. ಆಸ್ಟ್ರೇಲಿಯಾದ ಶ್ರಿಲಂಕಾ ಪ್ರವಾಸದಲ್ಲಿ ಮೊದಲಿಗೆ ಟಿ20 ಸರಣಿಯಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು ಚುಟುಕು ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ವಶಕ್ಕೆ ಪಡೆದಿತ್ತು. ಬಳಿಕ ನಡೆದ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ ಅದ್ಭುತ ಪ್ರದರ್ಶನ ನೀಡಿ 3-2 ಅಂತರದಿಂದ ಸರಣಿ ವಶಕ್ಕೆ ಪಡೆದುಕೊಂಡಿದೆ. ಹೀಗಾಗಿ ಟೆಸ್ಟ್ ಸರಣಿಯ ಮೇಲೆಯೂ ಶ್ರಿಲಂಕಾ ತಂಡ ಆತ್ಮವಿಶ್ವಾಸದಿಂದ ಇದೆ.

ಟೆಸ್ಟ್ ಮಾದರಿಯಲ್ಲಿ ಆಸಿಸ್ ಉತ್ತಮ ಪ್ರದರ್ಶನ

ಟೆಸ್ಟ್ ಮಾದರಿಯಲ್ಲಿ ಆಸಿಸ್ ಉತ್ತಮ ಪ್ರದರ್ಶನ

ಆದರೆ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾಗೆ ಆಸ್ಟ್ರೇಲಿಯಾದಿಂದ ಮತ್ತಷ್ಟು ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ಕಳೆದ ಜನವರಿಯಿಂದೀಚೆಗೆ ಆಸ್ಟ್ರೇಲಿಯಾ ಅತ್ಯುತ್ತಮ ಪ್ರದರ್ಶನ ನಿಡುತ್ತಿದ್ದು ಆಶ್ ಸರಣಿಯಲ್ಲಿ 4-0 ಅಂತರದ ಗೆಲುವು ಸಾಧಿಸಿದರೆ ಪಾಕಿಸ್ತಾನದ ವಿರುದ್ಧ 1-0 ಅಂತರದಿಂದ ಸರಣಿ ಗೆದ್ದಿದೆ. ನಾಯಕನಾಗಿ ಆಯ್ಕೆಯಾದ ಬಳಿಕ ಪ್ಯಾಟ್ ಕಮ್ಮಿನ್ಸ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಆಡುವ ಬಳಗ

ಆಸ್ಟ್ರೇಲಿಯಾ ಆಡುವ ಬಳಗ

ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್

ಯುಜುವೇಂದ್ರ ಚಹಾಲ್ ಗೆ ಚಳಿ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈಗ ಫುಲ್ ಟ್ರೋಲ್ | Oneindia Kannada
ಶ್ರೀಲಂಕಾ ಆಡುವ ಬಳಗ

ಶ್ರೀಲಂಕಾ ಆಡುವ ಬಳಗ

ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಾಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಜೆಫ್ರಿ ವಾಂಡರ್ಸೆ, ಲಸಿತ್ ಎಂಬುಲ್ಡೆನಿಯಾ, ಅಸಿತ ಫೆರ್ನಾಂಡೊ

Story first published: Wednesday, June 29, 2022, 11:01 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X