AUS vs SL World Cup Match: ಆಸ್ಟ್ರೇಲಿಯಾ vs ಶ್ರೀಲಂಕಾ ಹೆಡ್-ಟು-ಹೆಡ್ ದಾಖಲೆ; ಸಂಭಾವ್ಯ ಆಡುವ 11ರ ಬಳಗ
ಸೋಮವಾರ, ಅಕ್ಟೋಬರ್ 16ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನ 14ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಶ್ರೀಲಂಕಾವನ್ನು ಎದುರಿಸಲಿದೆ.
ಇದು ಹೊನಲು ಬೆಳಕಿನ ಪಂದ್ಯವಾಗಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ. ಉಭಯ ತಂಡಗಳು ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದು, ವಿಶ್ವಕಪ್‌ನ ತಮ್ಮ ಅಭಿಯಾನಕ್ಕೆ ಭಯಾನಕ ಆರಂಭವನ್ನು ಹೊಂದಿವೆ.
ಆಸ್ಟ್ರೇಲಿಯಾ ತಂಡವು ತಮ್ಮ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಆರು ವಿಕೆಟ್‌ಗಳ ಸೋಲಿನ ನಂತರ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ ಪಂದ್ಯದಲ್ಲಿ ರನ್‌ಗಳ (134) ಅಂತರದ ಅತಿದೊಡ್ಡ ಸೋಲು ಅನುಭವಿಸಿತು.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲು ಬೌಲಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 311 ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಆಧುನಿಕ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತವಲ್ಲ. ಆದಾಗ್ಯೂ, ಆಸ್ಟ್ರೇಲಿಯಾ 177 ರನ್‌ಗಳಿಗೆ ಆಲೌಟ್ ಆಗಿ ಸತತ ಎರಡನೇ ಪಂದ್ಯದಲ್ಲಿಯೂ ಬ್ಯಾಟಿಂಗ್ ವಿಫಲವಾಯಿತು.
15 ಸದಸ್ಯರ ತಂಡದಲ್ಲಿ ಏಕೈಕ ಮುಂಚೂಣಿ ಸ್ಪಿನ್ನರ್ ಮಾತ್ರ ಇರಬೇಕೆಂಬ ಆಸ್ಟ್ರೇಲಿಯಾ ತಂಡ ನಿರ್ಧಾರದ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ.
ಮತ್ತೊಂದೆಡೆ, ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಗಾಯದ ಕಾರಣದಿಂದಾಗಿ ವಿಶ್ವಕಪ್‌ನಿಂದ ಹೊರಗುಳಿಯುವುದರೊಂದಿಗೆ ದೊಡ್ಡ ಹಿನ್ನಡೆ ಅನುಭವಿಸಿದೆ. ಇದೀಗ ತಂಡದ ಸಾರಥ್ಯವನ್ನು ಆರಂಭಿಕ ಬ್ಯಾಟರ್ ಕುಸಲ್ ಮೆಂಡಿಸ್ ವಹಿಸಿಕೊಳ್ಳಲಿದ್ದಾರೆ.

ಶ್ರೀಲಂಕಾ ತಂಡ ತಮ್ಮ ಹಿಂದಿನ ಎರಡೂ ಪಂದ್ಯಗಳಲ್ಲಿ ಬ್ಯಾಟ್‌ನೊಂದಿಗೆ 300 ರನ್ ಗಳಿಸಿದ್ದಾರೆ. ಆದರೆ ಸಮಸ್ಯೆಯೆಂದರೆ ಅವರ ಬೌಲಿಂಗ್. ದ್ವೀಪ ರಾಷ್ಟ್ರ ಬೌಲರ್‌ಗಳ ತುಂಅಬ ದುಬಾರಿಯಾಗುತ್ತಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ vs ಶ್ರೀಲಂಕಾ ಹೆಡ್-ಟು-ಹೆಡ್ ದಾಖಲೆ
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಏಕದಿನ ಪಂದ್ಯಗಳಲ್ಲಿ 102 ಬಾರಿ ಮುಖಾಮುಖಿಯಾಗಿದ್ದು, ಈ ಹೋರಾಟದಲ್ಲಿ ಕಾಂಗರೂ ಪಡೆ 63-35 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವೆ ಯಾವುದೇ ಸಮಬಲದ ಮುಖಾಮುಖಿಯಾಗಿಲ್ಲ. ಇದರಲ್ಲಿ ನಾಲ್ಕು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.
ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ vs ಶ್ರೀಲಂಕಾ ಹೆಡ್-ಟು-ಹೆಡ್ ದಾಖಲೆ
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 10 ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ ಎಂಟು ಪಂದ್ಯಗಳನ್ನು ಗೆದ್ದಿದೆ ಮತ್ತು ಶ್ರೀಲಂಕಾ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶವನ್ನು ಕಂಡಿಲ್ಲ.

1996ರಲ್ಲಿ ಲಾಹೋರ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತಂಡ ಏಕೈಕ ಗೆಲುವು ಸಾಧಿಸಿದೆ. 2007ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು ಗಮನಾರ್ಹ.
ಆಸ್ಟ್ರೇಲಿಯಾ vs ಶ್ರೀಲಂಕಾ ಕೊನೆಯ 5 ಏಕದಿನ ಪಂದ್ಯಗಳ ಫಲಿತಾಂಶ
ಜೂನ್ 2022ರಲ್ಲಿ ದ್ವೀಪ ರಾಷ್ಟ್ರದಲ್ಲಿ ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆತಿಥೇಯ ಶ್ರೀಲಂಕಾ ನಿಕಟವಾಗಿ ಪೈಪೋಟಿ ನೀಡಿ 3-2 ಅಂತರದಿಂದ ಸರಣಿ ಗೆದ್ದರು.
ಆಸ್ಟ್ರೇಲಿಯಾ vs ಶ್ರೀಲಂಕಾ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹೇಝಲ್‌ವುಡ್
ಶ್ರೀಲಂಕಾ ತಂಡ: ಪಾಥುಮ್ ನಿಸ್ಸಾಂಕಾ, ಕುಸಾಲ್ ಪೆರೆರಾ, ಕುಸಲ್ ಮೆಂಡಿಸ್ (ನಾಯಕ/ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದುನಿತ್ ವೆಲ್ಲಲಾಗೆ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications