Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಆಸೀಸ್ ಸೋಲಿಸಿ ಭಾರತ ಇತಿಹಾಸ ನಿರ್ಮಿಸುತ್ತೆ ಅನ್ನೋ ಭೀತಿ ನನ್ನದು'

Aussie coach Langer fears history-chasing India are smelling blood

ಅಡಿಲೇಡ್, ಡಿಸೆಂಬರ್ 5: ಗುರುವಾರ (ಡಿಸೆಂಬರ್ 6) ಆಸ್ಟ್ರೆಲಿಯಾದ ಅಡಿಲೇಡ್ ನಲ್ಲಿ ಪ್ರವಾಸಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಎದುರುಗೊಳ್ಳಲಿದೆ. ಈ ಸರಣಿಯಲ್ಲಿ ಭಾರತ ಮೊದಲ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಲಿದೆ ಎಂಬ ಭಯ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಅವರದ್ದಂತೆ. ಹೀಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಒಬ್ಬ ಕೋಚ್ ಆಗಿ ನಾನು ಭಾರತವನ್ನು ಬೆಂಬಲಿಸುತ್ತೇನೆ. ಆದರೆ ಇತ್ತೀಚೆಗೆ ದುರ್ಬಲ ತಂಡವಾಗಿ ಕರೆಸಿಕೊಂಡಿರುವ ಆಸ್ಟ್ರೇಲಿಯಾ, ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನ ಅಗ್ರ ಸ್ಥಾನಿಗ ಭಾರತದೆದುರು ಮತ್ತೆ ಸೋಲುವ ಅಸಹಾಯಕತೆಯ ಸುಳಿವು ನನಗೆ ಕೊಂಚ ಭೀತಿ ಹುಟ್ಟಿಸುತ್ತಿದೆ ಎಂದು ಲ್ಯಾಂಗರ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಸೆನ್ (ಎಸ್‌ಇಎನ್‌) ರೇಡಿಯೋ ಸ್ಟೇಷನ್ ನಲ್ಲಿ ಮಾತನಾಡುತ್ತ ಜಸ್ಟಿನ್, 'ಭಾರತದ್ದು ನಿಜಕ್ಕೂ ಒಳ್ಳೆ ತಂಡ. ಅವರ ತಂಡದಲ್ಲಿ ಒಂದಿಷ್ಟು ಶ್ರೇಷ್ಠ ಆಟಗಾರರಿದ್ದಾರೆ. ನಾವು ಭಾರತ ತಂಡವನ್ನು, ಅದರಲ್ಲಿರುವ ಆಟಗಾರರನ್ನು ಅಷ್ಟೇ ಗೌರವಾದರದಿಂದ ಕಾಣುತ್ತೇವೆ' ಎಂದರು.

'ಈ ಹಿಂದೆ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಅಂಥ ದೊಡ್ಡ ಯಶಸ್ಸು ಕಂಡ ಉದಾಹರಣೆಯಿಲ್ಲ. ನಾವೂ ಅಲ್ಲಿ ಗೆದ್ದಿದ್ದಿಲ್ಲ. ಆದರೆ ಈ ಬಾರಿ ನಾವು ಸೋತು ಭಾರತ ಇತಿಹಾಸ ನಿರ್ಮಿಸಲು ಅವಕಾಶ ಮಾಡಿಕೊಡುವ ಸ್ಥಿತಿಯಲ್ಲಿದ್ದೇವೆ. ಹಾಗಂತ ಇಂಥ ಸಂದರ್ಭದಲ್ಲಿ ಗೆಲ್ಲಲೇಬೇಕನ್ನೋ ಒತ್ತಡದಲ್ಲಿ ಅವರೂ ಇರಬಹುದು' ಎಂದು ಲ್ಯಾಂಗರ್ ಹೇಳಿದರು.

ಭಾರತ ತಂಡ ಈ ಟೆಸ್ಟ್ ಸರಣಿ ಗೆದ್ದರೆ ಆಸೀಸ್ ನೆಲದಲ್ಲಿ ಚೊಚ್ಚಲ ಸರಣಿ ಗೆಲುವಿನ ಸಂಭ್ರಮಾಚರಿಸಲಿದೆ. ಅತ್ತ ಆಸ್ಟ್ರೇಲಿಯಾದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ನಿಷೇಧಕ್ಕೀಡಾಗಿರುವುದರಿಂದ ಅವರ ಬೆಂಬಲ ಇಲ್ಲದ್ದು ಆಸೀಸ್‌ಗೆ ಮೈನಸ್ ಆಗಿಯೂ ಪರಿಣಮಿಸಿದೆ. ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ಕೋಚ್ ಒಬ್ಬರಲ್ಲಿ ಮೂಡಬಹುದಾದ ಸಹಜ ಅನಿಸಿಕೆಗಳು ಲ್ಯಾಂಗರ್ ಅವರಲ್ಲೂ ವ್ಯಕ್ತಗೊಂಡಿವೆ.

Story first published: Wednesday, December 5, 2018, 20:19 [IST]
Other articles published on Dec 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+