For Quick Alerts
ALLOW NOTIFICATIONS  
For Daily Alerts
 

ಮಾನಸಿಕ ಒತ್ತಡಕ್ಕೆ ಮತ್ತೋರ್ವ ಕ್ರಿಕೆಟರ್ ವಿರಾಮ

ಆಸ್ಟ್ರೇಲಿಯಾ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಆರೋಗ್ಯದ ಕಾರಣ ನೀಡಿ ತಾತ್ಕಾಲಿಕವಾಗಿ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಮ್ಯಾಕ್ಸ್‌ವೆಲ್ ಈ ನಿರ್ಧಾರದ ನಂತರ ಕ್ರಿಕೆಟ್‌ ಆಟಗಾರರ ಮಾನಸಿಕ ಆರೋಗ್ಯ ಹಾಗೂ ಒತ್ತಡಗಳ ಕುರಿತಾಗಿ ಸಾಕಷ್ಟು ಚರ್ಚೆ ನಡೆದಿದೆ. ಇದರ ಬೆನ್ನಿಗೇ ಆಸ್ಟ್ರೇಲಿಯಾದ ಮತ್ತಿಬ್ಬರು ಆಟಗಾರರು ಇದೇ ಕಾರಣವನ್ನು ನೀಡಿ ತಾತ್ಕಾಲಿಕ ವಿರಾಮವನ್ನು ಪಡೆದುಕೊಂಡಿದ್ರು. ಈ ಲಿಸ್ಟ್‌ಗೆ ಇದೀಗ ಮೊತ್ತೋರ್ವ ಕ್ರಿಕೆಟರ್‌ ಸೇರ್ಪಡೆಯಾಗಿದ್ದಾರೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಆಲ್ರೌಂಡರ್ ಸೋಫೀ ಮೊಲಿನೆಕ್ಸ್‌ ಇದೀಗ ಮಾನಸಿಕ ಆರೋಗ್ಯದ ಕಾರಣವನ್ನು ನೀಡಿ ವಿರಾಮವನ್ನು ಬಯಸಿದ್ದಾರೆ.ಮಹಿಳಾ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್‌ ರೆನೆಗೇಡ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮೊನೆಲಿಕ್ಸ್‌ ಈಗಾಗಲೇ ತಂಡದ ಮ್ಯಾನೇಜ್‌ಮೆಂಟ್‌ಗೆ ಈ ವಿಚಾರವಾಗಿ ಮನವಿಯನ್ನು ಮಾಡಿದ್ದು ಮ್ಯಾನೇಜ್‌ಮೆಂಟ್‌ ಕೂಡ ಈ ಮನವಿಗೆ ಪೂರಕವಾಗಿ ಸ್ಪಂದಿಸಿ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ.

Aussie cricketer takes break over mental health

ರೆನೆಗೇಡ್ಸ್‌ ತಂಡದ ಮುಖ್ಯ ಕೋಚ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ತಂಡ ಸಂಪೂರ್ಣ ಸಹಕಾರವನ್ನು ಮೊಲಿನೆಕ್ಸ್‌ಗೆ ನೀಡಲಿದೆ. ಅವರಿಗೆ ಬೇಕಾದ ಸಮಯಾವಕಾಶ ನೀಡುತ್ತಿದ್ದು, ತಂಡ ಮೊಲಿನೆಕ್ಸ್ ಜೊತೆಗಿರಲಿದೆ ಎಂದಿದ್ದಾರೆ. ಮೊಲಿನೆಕ್ಸ್ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡವನ್ನು 1 ಟೆಸ್ಟ್‌ 3 ಏಕದಿನ 17 ಟಿಟ್ವೆಂಟಿ ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ.

ಮಾರ್ಕಸ್‌ ಟ್ರೆಸ್ಕೋಥಿಸ್ 2016ರಲ್ಲಿ ಮಾನಸಿಕ ಸಮಸ್ಯೆಯ ಕಾರಣವನ್ನು ನೀಡಿ ವಿಶ್ರಾಂತಿಯನ್ನು ಬಯಸಿದ್ದರು. ಆದರೆ ಆ ಸಂದರ್ಭದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಮ್ಯಾಕಕ್ಸ್‌ವೆಲ್ ಹೇಳಿಕೆಯ ಬಳಿಕ ಈ ವಿಚಾರಕ್ಕೆ ಪೂರಕವಾದ ಧ್ವನಿ ಕೇಳಿ ಬರುತ್ತಿದೆ. ಭಾರತೀಯ ತಂಡದ ನಾಯಕ ವಿರಾಟ್‌ ಕೊಹ್ಲಿ ಕೂಡ ತಾನು ಮಾನಸಿಕ ಒತ್ತಡವನ್ನು ಅನುಭವಿಸಿದ ಸಂದರ್ಭವನ್ನು ನೆನಪಿಸಿಕೊಂಡಿದ್ದರು. ಇಂಗ್ಲೆಂಡ್ ತಂಡದ ಆಟಗಾರ ಮೊಯಿನ್ ಅಲಿ ಕೂಡ ಹೇಳಿಕೆಯನ್ನು ನೀಡಿದ್ದಾರೆ.

Story first published: Friday, November 22, 2019, 16:39 [IST]
Other articles published on Nov 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+