Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Perth Test: ಪರ್ತ್‌ ಪಿಚ್‌ ಕಂಡು ಆಸೀಸ್ ಮಂದಹಾಸ: ಭಾರತ ಚಿಂತಾ-ಕ್ರಾಂತ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿ ನವೆಂಬರ್‌ 22ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್‌ಗೆ ಪರ್ತ್‌ ಪಿಚ್‌ ಸಂಪೂರ್ಣ ಸಿದ್ಧವಾಗಿದೆ. ಈ ಪಿಚ್‌ ಕಂಡು ಆತಿಥೇಯ ತಂಡ ಕ್ಯಾಂಪ್‌ನಲ್ಲಿ ಪಂದ್ಯ ಗೆದ್ದ ಮಂದಹಾಸ ಮೂಡಿದೆ. ಆದರೆ ಭಾರತ ತಂಡದ ಮ್ಯಾನೇಜ್ಮೆಟ್ ಮುಖದಲ್ಲಿ ಚಿಂತೆಯ ರೇಖೆಗಳು ಮೂಡಿವೆ. ಮೊದಲಿನಿಂದಲೂ ಭಾರತೀಯ ಬ್ಯಾಟರ್‌ಗಳಿಗೆ ಬೌನ್ಸಿ ಪಿಚ್‌ಗಳು ಎಂದರೆ ಕಬ್ಬಿಣದ ಕಡಲೆ.

ಟೀಮ್ ಇಂಡಿಯಾಗೆ ಈ ಸರಣಿ ತುಂಬ ಮಹತ್ವದಾಗಿದೆ. ಈ ಸರಣಿಯಲ್ಲಿ ಗೆಲುವು ಸಾಧಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ ಫೈನಲ್‌ಗೆ ಏರುವ ಕನಸು ಕಾಣುತ್ತಿದೆ. ಆಸೀಸ್‌ ನೆಲದಲ್ಲಿ ಟೀಮ್ ಇಂಡಿಯಾ ಕನಿಷ್ಠ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈ ವೇಳೆ ಟೀಮ್ ಇಂಡಿಯಾಗೆ ಪ್ರತಿಯೊಂದು ಪಂದ್ಯವೂ ಮಹತ್ವದಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಕನಿಷ್ಠ ನಾಲ್ಕು ಪಂದ್ಯಗಳಲ್ಲಾದ್ರೂ ಜಯ ಸಾಧಿಸಬೇಕಾದ ಅನಿವಾರ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಚಿಂತೆಯನ್ನು ಪರ್ತ್‌ ಪಿಚ್‌ ದ್ವಿಗುಣ ಮಾಡಿದೆ.

Aussies Confident on Bouncy Perth Pitch as India Faces Tough Border-Gavaskar Series Challenge

ಪರ್ತ್‌ ಟೆಸ್ಟ್‌ ಪಿಚ್‌

ಆಸ್ಟ್ರೇಲಿಯಾ ಬಾರ್ಡರ್‌ ಗವಾಸ್ಕರ್ ಸರಣಿಯ ಮೊದಲ ಪಂದ್ಯಕ್ಕೆ ಪರ್ತ್‌ ಮೈದಾನವನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಕಾರಣ ಆಸ್ಟ್ರೇಲಿಯಾದ ಲೆಕ್ಕಾಚಾರ. ಈ ಪಿಚ್‌ನಲ್ಲಿ ಒಮ್ಮೆಯೂ ಆಸೀಸ್ ಸೋತೆ ಇಲ್ಲ. ಈ ಮೈದಾನದಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಆಸೀಸ್ ಜಯ ಸಾಧಿಸಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ 360 ರನ್‌ ಗಳ ಜಯ ದಾಖಲಿಸಿದ್ದು, ದೊಡ್ಡ ಅಂತರದ ಗೆಲುವಾಗಿದೆ. ಪ್ರವಾಸಿ ತಂಡಕ್ಕೆ ಭಯ ಹುಟ್ಟಿಸಲು ಈ ಪಿಚ್‌ ಆಯ್ಕೆ ಮಾಡಿದ ಹಾಗೆ ಕಾಣುತ್ತದೆ.

ಪರ್ತ್‌ನಲ್ಲಿ ಮಳೆ

ಪರ್ತ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮೊದಲ ಟೆಸ್ಟ್‌ಗಾಗಿ ಪಿಚ್‌ನ ಸಿದ್ಧತೆಯ ಮೇಲೆ ಪರಿಣಾಮ ಬೀರಿದೆ ಎಂದು ಪಿಚ್ ಕ್ಯುರೇಟರ್ ಐಸಾಕ್ ಮೆಕ್‌ಡೊನಾಲ್ಡ್ ಹೇಳಿದ್ದಾರೆ. ಇದರಿಂದಾಗಿ ಪಿಚ್‌ ತಾವು ಅಂದುಕೊಂಡತೆ ವರ್ತನೆ ಮಾಡುವ ಸಾಧ್ಯತೆ ಕಡಿಮೆ. ಈ ಪಿಚ್‌ನಿಂದ ಬೌಲರ್‌ಗಳು ಕೊಂಚ ಬೌನ್ಸ್ ಪಡೆಯಲಿದ್ದಾರೆ. ಮಳೆ ಆದ ಕಾರಣ ಪಿಚ್ ನಿರ್ಮಾಣ ಕಾರ್ಯಕ್ಕೆ ಅಡಚಣೆ ಆಗಿದೆ.

Aussies Confident on Bouncy Perth Pitch as India Faces Tough Border-Gavaskar Series Challenge

ಮೊದಲ ಟೆಸ್ಟ್‌ಗೆ ನಿರ್ಮಾಣಾವಾದ ಪರ್ತ್‌ ಪಿಚ್‌ನಲ್ಲಿ ಹುಲ್ಲು ಇರಲಿದ್ದು, ಇದು ಬ್ಯಾಟರ್‌ಗಳ ಚಿಂತೆಯನ್ನು ದ್ವಿಗುಣ ಮಾಡಿದೆ. ಹುಲ್ಲು ಇರುವ ಪಿಚ್‌ನಲ್ಲಿ ಚೆಂಡು ಬಿದ್ದ ತಕ್ಷಣ ವೇಗವಾಗಿ ಹೋಗುತ್ತದೆ. ಟೀಮ್ ಇಂಡಿಯಾ ಮೊದಲ ಟೆಸ್ಟ್‌ ಪಂದ್ಯಕ್ಕೆ ಯಾವ ಲೆಕ್ಕಾಚಾರದೊಂದಿಗೆ ಕಣಕ್ಕೆ ಇಳಿಯಲಿದೆ ಎಂಬ ಕುತೂಹಲ ಮೂಡಿಸಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಒಬ್ಬ ಸ್ಪಿನ್ ಬೌಲರ್‌ಗೆ ಮಾತ್ರ ನೀಡುವ ಸಾಧ್ಯತೆ ಇದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ ಅವರೊಂದಿಗೆ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬ ಪ್ರಶ್ನೆಗೆ ನವೆಂಬರ್‌ 22ರಂದು ಟಾಸ್‌ ವೇಳೆ ಉತ್ತರ ಸಿಗಲಿದೆ.

Story first published: Wednesday, November 20, 2024, 20:45 [IST]
Other articles published on Nov 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+