For Quick Alerts
ALLOW NOTIFICATIONS  
For Daily Alerts
 

David Warner: ವಾರ್ನರ್‌ಗೆ ಗೆಲುವಿನ ಗಿಫ್ಟ್‌ ನೀಡಿದ ಆಸೀಸ್‌, ಕೊನೆಯ ಟೆಸ್ಟ್‌ನಲ್ಲಿ ಹೃದಯ ಸ್ಪರ್ಷಿ ಬೀಳ್ಕೊಡುಗೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಗೆ ಫ್ಯಾನ್ಸ್‌ ಹಾಗೂ ಎದುರಾಳಿ ತಂಡದ ಆಟಗಾರರಿಂದ ಹೃದಯ ಸ್ಪರ್ಷಿ ಬೀಳ್ಕೊಡುಗೆ ಸಿಕ್ಕಿದೆ. ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಮ್ಯಾಚ್ ವಿನ್ನಿಂಗ್ ಫರ್ಫಾಮೆನ್ಸ್‌ ನೀಡಿ ಜಯದಲ್ಲಿ ಮಿಂಚಿದ್ದಾರೆ.

ವಾರ್ನರ್ ಬ್ಯಾಟಿಂಗ್ ಮಾಡಲು ಡ್ರೆಸ್ಸಿಂಗ್ ರೂಮ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆ ತಟ್ಟಿದರು. ನಂತರ ಅವರ ಸಹ ಓಪನರ್ ಉಸ್ಮಾನ್ ಖವಾಜಾ ಬಂದು ಮೈದಾನಕ್ಕೆ ಹೋಗುವ ಮೊದಲು ಇಬ್ಬರೂ ತಬ್ಬಿಕೊಂಡರು. ನಂತರ ಮೈದಾನಕ್ಕಿಳಿದ ಬಳಿಕ ಪಾಕಿಸ್ತಾನಿ ಆಟಗಾರರು ವಾರ್ನರ್‌ಗೆ 'ಗಾರ್ಡ್ ಆಫ್ ಆನರ್' ನೀಡಿದರು. ಆಗ ವಾರ್ನರ್ ಪಾಕ್ ಆಟಗಾರರು ಮತ್ತು ಫೀಲ್ಡ್ ಅಂಪೈರ್ ಅಭಿನದಂನೆ ಸ್ವೀಕರಿಸಿದರು.

Aussies Gift Warner a Victory: Heartwarming Farewell in His Final Test

ಸಿಡ್ನಿಯಲ್ಲಿ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ವಾರ್ನರ್ 57 ರನ್ ಗಳಿಸಿ ವಾರ್ನರ್ ಅಬ್ಬರಿಸಿದರು. ಎಡಗೈ ಬ್ಯಾಟ್ಸ್‌ಮನ್ ವಾರ್ನರ್ ಅವರ ಸ್ಫೋಟಕ ಅರ್ಧಶತಕದ ಆಧಾರದ ಮೇಲೆ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು ಮತ್ತು 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು.

ವಾರ್ನರ್ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕವನ್ನು ಬಾರಿಸಲಿಲ್ಲ. ಆದರೆ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಇನ್ನು ಮುಂದೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸುವುದಿಲ್ಲ. ಬಹು ದಿನಗಳ ಮುಂಚೆಯೆ ವಾರ್ನರ್ ಪಾಕ್‌ ವಿರುದ್ಧದ ಟೆಸ್ಟ್‌ ಸರಣಿ ನನ್ನ ಕೊನೆಯ ಟೆಸ್ಟ್‌ ಸರಣಿ ಎಂದು ಘೋಷಿಸಿದ್ದರು. ಹೊಸ ವರ್ಷದ ಆರಂಭದಲ್ಲಿ ಏಕದಿನ ಕ್ರಿಕೆಟ್‌ಗೂ ವಾರ್ನರ್ ವಿದಾಯ ಹೇಳಿದರು.

ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 34 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಎರಡನೇ ಇನ್ನಿಂಗ್ಸ್‌ನಲ್ಲಿ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅವಧಿಯಲ್ಲಿ ಅವರು 7 ಬೌಂಡರಿಗಳನ್ನು ಬಾರಿಸಿದರು. ವಾರ್ನರ್ ತಮ್ಮ 37ನೇ ಟೆಸ್ಟ್ ಅರ್ಧಶತಕವನ್ನು ಪೂರ್ಣಗೊಳಿಸಿದ ನಂತರ, ಅವರ ಪತ್ನಿ ಮತ್ತು ಮಗಳು ಎದ್ದುನಿಂತು ಅವರನ್ನು ಪ್ರೋತ್ಸಾಹಿಸಿದರು.

Aussies Gift Warner a Victory: Heartwarming Farewell in His Final Test

ವಾರ್ನರ್ ತಮ್ಮ ವೃತ್ತಿಜೀವನದಲ್ಲಿ 111 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೊನೆಯ ಪಂದ್ಯವು ಅವರ ವೃತ್ತಿಜೀವನದ 112 ನೇ ಟೆಸ್ಟ್ ಪಂದ್ಯವಾಗಿದೆ. ಇದುವರೆಗೆ ಆಡಿರುವ 111 ಟೆಸ್ಟ್‌ಗಳ 203 ಇನ್ನಿಂಗ್ಸ್‌ಗಳಲ್ಲಿ ವಾರ್ನರ್ 44.58 ಸರಾಸರಿಯಲ್ಲಿ 8695 ರನ್ ಗಳಿಸಿದ್ದಾರೆ. ಈ ಈ ವೇಳೆ 26 ಶತಕಗಳು ಮತ್ತು 36 ಅರ್ಧ ಶತಕ ಸೇರಿವೆ. ಇದರಲ್ಲಿಅಜೇಯ 335 ರನ್ ಅವರ ಗರಿಷ್ಠ ಸ್ಕೋರ್.

ವಾರ್ನರ್ ಡಿಸೆಂಬರ್ 2011 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಮಾಡಿದರು. ಕೊನೆಯ ಟೆಸ್ಟ್‌ಗೂ ಮುನ್ನ ವಾರ್ನರ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು 2023 ರ ವಿಶ್ವಕಪ್‌ನ ಫೈನಲ್‌ನಲ್ಲಿ ತಮ್ಮ ಕೊನೆಯ ODI ಪಂದ್ಯವನ್ನು ಆಡಿದರು.

Story first published: Saturday, January 6, 2024, 9:23 [IST]
Other articles published on Jan 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+