ಭಾರತ ಪ್ರವಾಸವನ್ನು ಬೆಳೆಸಲಿದೆ ಆಸ್ಟ್ರೇಲಿಯಾ: ತಂಡ ಪ್ರಕಟ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಪಂದ್ಯಗಳು ನಡೆದಾಗಲೆಲ್ಲಾ ಎಲ್ಲರ ಗಮನ ಸೆಳೆದಿರುತ್ತದೆ. ಬಲಿಷ್ಠ ತಂಡಗಳ ಕಾದಾಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿರುತ್ತಾರೆ. ಈಗ ಮತ್ತೊಮ್ಮೆ ಆಸೀಸ್ ಹಾಗೂ ಭಾರತ ತಂಡಗಳು ಕಾದಾಟ ನಡೆಸಲಿವೆ. ಈ ಫೈಟ್‌ಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ "ಎ" ತಂಡ ಭಾರತಕ್ಕೆ ಆಗಮಿಸಲಿದೆ. ಈ ವೇಳೆ ಆಸ್ಟ್ರೇಲಿಯಾ "ಎ" ತಂಡದ ಪರ ಸ್ಟಾರ್ ಆಟಗಾರರು ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ವಿರುದ್ಧ ಆಸ್ಟ್ರೇಲಿಯಾ ಕಿರಿಯರ ತಂಡವನ್ನು ಘೋಷಿಸಲಾಗಿದೆ. ಆಸ್ಟ್ರೇಲಿಯಾ ತಂಡದಲ್ಲಿ ಸ್ಯಾಮ್ ಕಾನ್ಸ್ಟಾಸ್ ಸ್ಥಾನ ಪಡೆದಿದ್ದಾರೆ. ಈ ಸರಣಿಯ ವೇಳೆ ಅನಧಿಕೃತ ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಅನಧಿಕೃತ ಟೆಸ್ಟ್ ಪಂದ್ಯಗಳು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಆಡುವ ಸಾಧ್ಯತೆ ಇದ್ದು, ಏಕದಿನ ಪಂದ್ಯಗಳಿಗೆ ಕಾನ್ಪುರದ ಗ್ರೀನ್ ಪಾರ್ಕ್ ಸಾಕ್ಷಿಯಾಗಲಿದೆ. ಈ ಸರಣಿಯ ವೇಳೆ ಎಲ್ಲರ ಕಣ್ಣುಗಳು ಆಸ್ಟ್ರೇಲಿಯಾದ ಸ್ಯಾಮ್ ಕಾನ್ಸ್ಟಾಸ್ ಅವರ ಮೇಲೆ ನೆಟ್ಟಿರಲಿವೆ. ಇವರು ಈಗಾಗಲೇ ಆಸ್ಟ್ರೇಲಿಯಾ ತಂಡದ ಆಡಿದ ಅನುಭವ ಹೊಂದಿದ್ದಾರೆ.

ಸ್ಯಾಮ್ ಕಾನ್ಸ್ಟಾಸ್ ಲಯವನ್ನು ಗಮನದಲಿಟ್ಟುಕೊಂಡು ಅವರಿಗೆ ಭಾರತ "ಎ" ವಿರುದ್ಧದ ಸರಣಿಗೆ ಅವಕಾಶ ನೀಡಲಾಗಿದೆ. ಇವರು ಫಾರ್ಮ್‌ಗೆ ಮರಳುವುದು ಅವಶ್ಯಕವಾಗಿದೆ. ಆಸ್ಟ್ರೇಲಿಯಾ ಸದ್ಯ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡುತ್ತಿದೆ. ಆದರೆ ಆಸ್ಟ್ರೇಲಿಯಾದ ಕಣ್ಣುಗಳು ಆಶಸ್ ಸರಣಿಯ ಮೇಲೆ ನೆಟ್ಟಿವೆ. ಹೀಗಾಗಿ ಸ್ಯಾಮ್ ಕಾನ್ಸ್ಟಾಸ್ ಫಾರ್ಮ್ ಕಂಡು ಕೊಳ್ಳುವುದು ಅನಿವಾರ್ಯವಾಗಿದೆ. ಆಶಸ್ ಸರಣಿಗಾಗಿ ತಂಡವನ್ನು ಪ್ರಕಟಿಸುವ ಮುನ್ನ ಇವರ ಫಾರ್ಮ್‌ನ್ನು ಕಾಯ್ದು ನೋಡುತ್ತಿದೆ. ಆಶಸ್ ಸರಣಿ ಇನ್ನು ದೂರವಿದ್ದರೂ ಸಹ ಆಸೀಸ್ ತನ್ನ ಸಿದ್ಧತೆಗಳನ್ನು ಆರಂಭಿಸಿದೆ.
ಭವಿಷ್ಯದ ಕನಸು
ಸ್ಯಾಮ್ ಕಾನ್ಸ್ಟಸ್ ಅವರನ್ನು ಆಸ್ಟ್ರೇಲಿಯಾ ಭವಿಷ್ಯದ ಆಟಗಾರ ಎಂದು ಕರೆಯಲಾಗುತ್ತದೆ. 19 ವರ್ಷದ ಸ್ಯಾಮ್ ಕಾನ್ಸ್ಟಸ್ ಆಡಿದ 5 ಪಂದ್ಯಗಳಲ್ಲಿ 163 ರನ್ ಸಿಡಿಸಿದ್ದಾರೆ. ಈ ವೇಳೆ 1 ಅರ್ಧಶತಕ ಮಾತ್ರ ಸಿಡಿಸಿದ್ದಾರೆ. ಆಸೀಸ್ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ ಮತ್ತು ನಾಥನ್ ಮೆಕ್‌ಸ್ವೀನಿ ಅವರಿಗೂ ತಂಡದಲ್ಲಿ ಸ್ಥಾನ ನೀಡಿದೆ. ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಜ್ಯಾಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ತನ್ವೀರ್ ಸಂಘ ಅವರಿಗೆ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ.

ನಾಲ್ಕು ದಿನಗಳ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಎ ತಂಡ: ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲ್ಲಿ, ಜ್ಯಾಕ್ ಎಡ್ವರ್ಡ್ಸ್, ಆರನ್ ಹಾರ್ಡಿ, ಕ್ಯಾಂಪ್‌ಬೆಲ್ ಕೆಲ್ಲಾವೇ, ಸ್ಯಾಮ್ ಕಾನ್ಸ್ಟಾಸ್, ನಾಥನ್ ಮೆಕ್‌ಸ್ವೀನಿ, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಫರ್ಗಸ್ ಓ'ನೀಲ್, ಆಲಿವರ್ ಪೀಕ್, ಜೋಶ್ ಫಿಲಿಪ್, ಕೋರಿ ರೊಚ್ಚಿಯೋಲಿ, ಲಿಯಾಮ್ ಸ್ಕಾಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications