ಆಸ್ಟ್ರೇಲಿಯಾ ಸದ್ಯ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಮೊದಲು ಟಿ20 ಪಂದ್ಯಗಳನ್ನು ಆಡಿದ್ದ ಕಾಂಗರೂ ಪಡೆ ಈಗ ಏಕದಿನ ಸರಣಿಗೆ ಸನ್ನದ್ಧವಾಗಿದೆ. ಈ ಸರಣಿಗೆ ಉಭಯ ತಂಡಗಳನ್ನು ಪ್ರಕಟಿಸಲಾಗಿದೆ. ಆಸೀಸ್ ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸಿದರೆ, ಇಂಗ್ಲೆಂಡ್ ತಂಡದ ಪಟ್ಟವನ್ನು ಹ್ಯಾರಿ ಬ್ರೂಕ್ಸ್‌ಗೆ ಕಟ್ಟಲಾಗಿದೆ.
ಆಸ್ಟ್ರೇಲಿಯಾ ಏಕದಿನ ತಂಡದಲ್ಲಿ ಮಹಾಲಿ ಬಿಯರ್ಡ್‌ಮನ್‌ರನ್ನು ಸ್ಟ್ಯಾಂಡ್‌ಬೈ ಆಟಗಾರ ಎಂದು ಸೇರಿಸಿಕೊಳ್ಳಲಾಗಿದೆ. ಆಸೀಸ್ ತಂಡಕ್ಕೆ ಗಾಯಗೊಂಡ ಆಟಗಾರರ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಯ್ದಿರಿಸಿದ ಆಟಗಾರರ ರೂಪದಲ್ಲಿ ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡಕ್ಕೆ ಕಾಟ ನೀಡಿದ್ದ ವೇಗಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಣೆ ಹಾಕಿದೆ.

2024ರಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಮಹಾಲಿ ಬಿಯರ್ಡ್‌ಮನ್ ಅಮೋಘ ಬೌಲಿಂಗ್ ದಾಳಿ ನಡೆಸಿದ್ದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಇವರು ಭಾರತ ತಂಡವನ್ನು ಕಾಡಿದ್ದರು. ಇವರ ಮಾರಕ ದಾಳಿಗೆ ಟೀಮ್ ಇಂಡಿಯಾ ಯುವ ಬ್ಯಾಟರ್‌ಗಳು ಕಂಗಾಲಾದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮಹಾಲಿ ಬಿಯರ್ಡ್‌ಮನ್ ಆಸ್ಟ್ರೇಲಿಯಾ ಪರ 7 ಓವರ್ ಗಳಲ್ಲಿ 15 ರನ್ ನೀಡಿ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಿಂಚಿದರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಈವರೆಗೆ ಒಟ್ಟು 156 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆಸೀಸ್ 88 ರಲ್ಲಿ ಗೆಲುವಿನ ಕೇಕೆ ಹಾಕಿದರೆ, ಇಂಗ್ಲೆಂಡ್ 63ರಲ್ಲಿ ಜಯ ಸಾಧಿಸಿದೆ. ಎರಡು ಪಂದ್ಯಗಳು ಟೈ ಆಗಿದ್ದು, ಮೂರು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿಲ್ಲ. ಇವರು ತವರಿನಲ್ಲಿ ನಡೆಯಲಿರುವ ಭಾರತ ವಿರುದ್ಧ ಬಾರ್ಡರ್ ಗವಾಸ್ಕರ್ ಸರಣಿಗೆ ಅಭ್ಯಾಸ ನಡೆಸಿದ್ದಾರೆ. ಇವರು ಗಾಯದ ಸಮಸ್ಯೆಯಿಂದ ಸ್ಕಾಟ್ಲೆಂಡ್ ವಿರುದ್ಧ ಸರಣಿಯನ್ನು ಆಡಿರಲಿಲ್ಲ. ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್ ಮತ್ತು ರಿಲೆ ಮೆರೆಡಿತ್ ಗಾಯಕ್ಕೆ ತುತ್ತಾಗಿದ್ದಾರೆ.

ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಬೆನ್ ಡ್ವಾರ್ಶುಯಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕ್ಯಾಮರೂನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಸೇಂಟ್ ಮ್ಯಾಥ್ಯೂ ಸ್ಮಿ ಶಾರ್ಟ್ ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ. ಮೀಸಲು: ಮಹಾಲಿ ಬಿಯರ್ಡಮಾ