Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ವಿರುದ್ಧದ ಸೆಮೀಸ್‌ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ: ಭರವಸೆಯ ಆಲ್‌ರೌಂಡರ್‌ ಎಂಟ್ರಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಸೆಮಿಫೈನಲ್‌ ಪಂದ್ಯ ಮಂಗಳವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಲು, ಉಭಯ ತಂಡಗಳು ಇನ್ನಿಲದ ಕಸರತ್ತು ನಡೆಸಿವೆ. ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ. ಈ ಮೂಲಕ ಅಗ್ರ ಸ್ಥಾನೀಯವಾಗಿ ಸೆಮಿಫೈನಲ್‌ ಹಂತ ಪ್ರವೇಶಿಸಿದೆ. ಆಸ್ಟ್ರೇಲಿಯಾ "ಬಿ" ಗುಂಪಿನಿಂದ ಎರಡನೇ ಸ್ಥಾನೀಯವಾಗಿ ನಾಲ್ಕರ ಘಟ್ಟಕ್ಕೆ ಎಂಟ್ರಿ ನೀಡಿದೆ.

ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಕ್ಕೆ ಪೆಟ್ಟು ಬಿದ್ದಿದೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಶಾರ್ಟ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈಗ ಭಾರತದ ವಿರುದ್ಧದ ಸೆಮಿಫೈನಲ್‌ ಫೈಟ್‌ಗೂ ಮುನ್ನ ಆಸ್ಟ್ರೇಲಿಯಾ ಮ್ಯಾಥ್ಯೂ ಶಾರ್ಟ್ ಅವರ ಬದಲಿ ಆಟಗಾರನನ್ನು ಘೋಷಿಸಿದೆ.

Australia Adds Young All-Rounder Connor Connolly to Squad Ahead of Semi-Final Clash Against India

ಯುವ ಆಲ್‌ರೌಂಡರ್‌ ಯಾರು?

ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಗಾಯಗೊಂಡಿರುವ ಆರಂಭಿಕ ಬ್ಯಾಟರ್‌ ಮ್ಯಾಥ್ಯೂ ಶಾರ್ಟ್‌ ಬದಲಿಗೆ ಆಸೀಸ್ ಆಲ್‌ರೌಂಡರ್‌ ಕಾನರ್ ಕಾನೊಲಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 21 ವರ್ಷದ ಯುವ ಆಲ್‌ರೌಂಡರ್‌ ಈಗಾಗಲೇ ಆಸ್ಟ್ರೇಲಿಯಾ ಪರ 3 ಏಕದಿನ ಪಂದ್ಯ, 1 ಟೆಸ್ಟ್‌ ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಇವರನ್ನು ಆಸ್ಟ್ರೇಲಿಯಾ ತಂಡ ಮೀಸಲು ಆಟಗಾರನಾಗಿ ತಂಡವನ್ನು ಸೇರಿಕೊಂಡಿದ್ದರು. ಭಾರತದ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಇವರಿಗೆ ಅವಕಾಶ ನೀಡಲಾಗಿದೆ. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಇವರ ಆಗಮನ ತಂಡಕ್ಕೆ ಹೆಚ್ಚುವರಿ ಬೌಲಿಂಗ್ ಆಯ್ಕೆಯನ್ನು ನೀಡಬಹುದಾಗಿದೆ.

ಏಕದಿನ ವಿಶ್ವಕಪ್‌ನಲ್ಲಿ ಐದು ಬಾರಿ ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಆಸ್ಟ್ರೇಲಿಯಾ, ಚಾಂಪಿಯನ್ಸ್ ಟ್ರೋಫಿಯನ್ನು 2009ರಲ್ಲಿ ಕೊನೆಯ ಬಾರಿಗೆ ಗೆದ್ದಿತ್ತು. ಈ ಬಾರಿ ಆಸೀಸ್‌ಗೆ ಬಿಗ್‌ ಚಾಲೆಂಜ್‌ ಫೈನಲ್‌ಗೂ ಮುನ್ನವೇ ಎದುರಾಗಲಿದೆ. ಹೀಗಾಗಿ ಸೆಮಿಫೈನಲ್‌ ಪಂದ್ಯದ ಮೇಲೆ ಆಸೀಸ್ ಚಿತ್ತ ನೆಟ್ಟಿದೆ. 16 ವರ್ಷಗಳ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಕೌಟ್ ತಲುಪುವಲ್ಲಿ ಯಶಸ್ವಿಯಾಗಿದೆ.

Australia Adds Young All-Rounder Connor Connolly to Squad Ahead of Semi-Final Clash Against India

ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಹಂತದ ಪಂದ್ಯಗಳು ಫಿಕ್ಸ್‌ ಆಗಿವೆ. ಮೊದಲ ಸೆಮಿಫೈನಲ್‌ ಮಾರ್ಚ್ 4 ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ದುಬೈನಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್‌ ಪಂದ್ಯ ಮಾರ್ಚ್‌ 5 ರಂದು ಲಾಹೋರ್‌ದಲ್ಲಿ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಈ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

1
7-2025

ಆಸ್ಟ್ರೇಲಿಯಾ ಕ್ರಿಕೆಟ್ ತಂಡ: ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೇಕ್ ಫ್ರೇಜ್ ಮೆಕ್‌ಗುರ್ಕ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಕೂಪರ್ ಕಾನೊಲಿ, ಆಡಮ್ ಜಂಪಾ.

Story first published: Monday, March 3, 2025, 10:12 [IST]
Other articles published on Mar 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+