Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final 2025: ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಫೈನಲ್‌ ಫೈಟ್‌: ಏನು ಹೇಳುತ್ತದೆ ಅಂಕಿ ಅಂಶ

2025ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಲಾರ್ಡ್ಸ್ ನಲ್ಲಿ ಜೂನ್‌ 11 ರಿಂದ ನಡೆಯಲಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲಲು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಈ ಟ್ರೋಫಿಗೆ ಮುತ್ತಿಡುವ ಕನಸನ್ನು ಆಸ್ಟ್ರೇಲಿಯಾ ಹೊಂದಿದ್ದರ, ಐಸಿಸಿ ಟ್ರೋಫಿಯನ್ನು ಮೊದಲ ಬಾರಿಗೆ ಜಯಿಸುವ ಕನಸಿನಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ. ಈಗಾಗಲೇ ಈ ಪಂದ್ಯಕ್ಕಾಗಿ ಉಭಯ ತಂಡಗಳನ್ನು ಘೋಷಿಸಲಾಗಿದೆ. ಪ್ಯಾಟ್‌ ಕಮಿನ್ಸ್‌ ಆಸೀಸ್ ತಂಡವನ್ನು ಮುನ್ನಡೆಸಿದರೆ, ಟೆಂಬು ಬವುಮಾ ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕಳೆದ ಟೆಸ್ಟ್‌ ವಿಶ್ವಚಾಂಪಿಯನ್‌ ಶಿಪ್‌ನ ಫೈನಲ್‌ನ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದ ತಂಡಗಳು ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈಗಾಗಲೇ ಉಭಯ ತಂಡಗಳು 101 ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು ಇದರಲ್ಲಿ ಆಸ್ಟ್ರೇಲಿಯಾ 54 ಪಂದ್ಯಗಳನ್ನು ಗೆದ್ದಿವೆ. ದಕ್ಷಿಣ ಆಫ್ರಿಕಾ ತಂಡ 26 ಪಂದ್ಯಗಳಲ್ಲಿ ಜಯ ಸಾಧಿಸಿದೆ. 21 ಪದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ. ಈ ಅಂಕಿ ಅಂಶಗಳನ್ನು ನೋಡಿದಾಗ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದ್ದು ಸ್ಪಷ್ಟವಾಗಿ ತಿಳಿಯುತ್ತದೆ.

Australia and South Africa Set for World Test Championship Final Showdown at Lord s

ಆಸ್ಟ್ರೇಲಿಯಾ ತಂಡಕ್ಕೆ ವಿಶ್ವ ಟೆಸ್ಟ್‌ ಚಾಂಪಿನ್‌ಶಿಪ್‌ ಆಡಿದ ಅನುಭವ ಇದೆ. 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈಲ್‌ನಲ್ಲಿ ಆಸ್ಟ್ರೇಲಿಯಾ, ಭಾರತವನ್ನು ಮಣಿಸಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಸಂಭ್ರಮಿಸಿತ್ತು. ಆದರೆ ದಕ್ಷಿಣ ಆಫ್ರಿಕಾಕ್ಕೆ ಇದು ಮೊದಲ ಪ್ರಯತ್ನ. ಈ ಪ್ರಯತ್ನದಲ್ಲಿ ಆಫ್ರಿಕಾ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದೆ. ಇನ್ನು ಆಸ್ಟ್ರೇಲಿಯಾಈ ಟ್ರೋಫಿಯನ್ನು ಉಳಿಸಿಕೊಳ್ಳವಲ್ಲಿ ಸಫಲವಾಗುತ್ತದಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಸ್ಟಾರ್‌ ಆಟಗಾರರೇ ಬಲ

ಉಭಯ ತಂಡಗಳನ್ನು ಅವಲೋಕಿಸಿದಾಗ ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಬಲ್ಲ ಆಟಗಾರರು ಈ ತಂಡದಲ್ಲಿಇದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಟ್ರಾವಿಸ್ ಹೆಡ್‌, ಸ್ಟೀವನ್ ಸ್ಮಿತ್‌ ಅವರಂತಹ ಹೆಸರಾಂತ ಬ್ಯಾಟರ್‌ಗಳು ಇದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ತೆಂಬು ಬವುಮಾ, ಐಡೇನ್‌ ಮಾರ್ಕ್ರಾಮ್‌ ಅವರಂತಹ ಅನುಭವಿ ಆಟಗಾರರು ಇದ್ದಾರೆ. ಆದರೆ ಎರಡೂ ತಂಡಗಳನ್ನು ಒಮ್ಮೆ ನೋಡಿದಾಗ, ಇವರ ಬೌಲಿಂಗ್ ಅಟ್ಯಾಕ್‌ ಅಮೋಘವಾಗಿದೆ. ಹೀಗಾಗಿ ಫೈನಲ್‌ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Australia and South Africa Set for World Test Championship Final Showdown at Lord s

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್, ಮ್ಯಾಟ್ ಕುಹ್ನೆಮನ್, ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಬ್ಯೂ ವೆಬ್‌ಸ್ಟರ್,

ದಕ್ಷಿಣ ಆಫ್ರಿಕಾ ತಂಡ : ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರಿನ್, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಡಾನ್ ಪ್ಯಾಟರ್ಸನ್, ಕೇಶವ್ ಮಹಾರಾಜ್, ಸೆನುರನ್ ಮುತ್ತುಸಾಮಿ, ಟೋನಿ ಡಿ ಜೋರ್ಜಿ, ರಯಾನ್ ರಿಕಲ್ಟನ್, ಐಡೆನ್ ಮಾರ್ಕ್ರಾಮ್

Story first published: Saturday, June 7, 2025, 19:14 [IST]
Other articles published on Jun 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+