ಶ್ರೀಲಂಕಾ ಪ್ರವಾಸಕ್ಕೆ ಆಸಿಸ್ ತಂಡ ಪ್ರಕಟ: ಐಪಿಎಲ್‌ನಲ್ಲಿ ವಿಫಲವಾದ ಸ್ಟಾರ್‌ಗಿಲ್ಲ ಟಿ20 ತಂಡದಲ್ಲಿ ಸ್ಥಾನ!

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮುಂದಿನ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು ಮೂರು ಮಾದರಿಯ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ಆಟಗಾರರ ಬಳಗವನ್ನು ಪ್ರಕಟಿಸಲಾಗಿದ್ದು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟಿ20 ತಂಡದಿಂದ ಹೊರಗುಳಿದಿದ್ದಾರೆ.
ಶ್ರೀಲಂಕಾ ವಿರುದ್ಧದ ಈ ಸರಣಿ ಜೂನ್ 7ರಂದು ಆರಂಭವಾಗಲಿದೆ. ಈ ಪ್ರವಾಸದಲ್ಲಿ ಮೂರು ಟಿ20, ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸಿಸ್ ಹಾಗೂ ಲಂಕಾ ಪಡೆಗಳು ಮುಖಾಮುಖಿಯಾಗಲಿದೆ. ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂ, ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಾಗೂ ಗಾಲೆ ಕ್ರೀಡಾಂಗಣದಲ್ಲಿ ಈ ಸಂಪೂರ್ಣ ಸರಣಿ ಆಯೋಜನೆಯಾಗಲಿದೆ.
ಇನ್ನು ಐಪಿಎಲ್‌ನ್ಲಲಿ ಭಾಗಿಯಾಗುವ ಕಾರಣ ಪಾಕಿಸ್ತಾನ ಪ್ರವಾಸದಿಂದ ಹೊರಗುಳಿದಿದ್ದ ಬಹುತೇಕ ಆಟಗಾರರು ಶ್ರೀಲಂಕಾ ವಿರುದ್ಧಧ ಈ ಸರಣಿಗೆ ಲಭ್ಯವಾಗಿದ್ದಾರೆ. ಅಲ್ಲದೆ ಸ್ಪಿನ್ನರ್ ಆಡಂ ಜಂಪಾ ಅವರ ಪತ್ನಿ ಮಗುವಿಗೆ ಜನ್ಮ ನೀಡಲಿರುವ ಕಾರಣ ಆಸಿಸ್ ಅನುಭವಿ ಸ್ಪಿನ್ನರ್ ಕೂಡ ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ಇನ್ನು ಜಸ್ಟಿನ್ ಲ್ಯಾಂಗರ್ ಕೋಚ್ ಹುದ್ದೆಯನ್ನು ತೊರೆದ ಬಳಿಕ ಆಂಡ್ರ್ಯೋ ಮೆಕ್‌ಡೊನಾಲ್ಡ್ ಆಸ್ಟ್ರೇಲಿಯಾ ತಂಡದ ಪೂರ್ಣಪ್ರಮಾಣದ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಟಿ20 ತಂಡದಲ್ಲಿಲ್ಲ ಪ್ಯಾಟ್ ಕಮ್ಮಿನ್ಸ್
ಈ ಬಾರಿಯ ಐಪಿಎಲ್‌ನಲ್ಲಿ ಕೊಲ್ಕತ್ತಾ ಪರವಾಗಿ ಆಡುತ್ತಿರುವ ಪ್ಯಾಟ್ ಕಮ್ಮಿನ್ಸ್ ಆರಂಭದಲ್ಲಿ ಸ್ಪೋಟಕ ಅರ್ಧ ಶತಕ ಸಿಡಿಸಿ ಸುದ್ದಿಯಾಗಿದ್ದರು. ಆದರೆ ನಂತರ ಬೌಲಿಂಗ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಪ್ರಕಟವಾಗಿರುವ ಆಸಿಸ್ ತಂಡದಲ್ಲಿ ಪ್ಯಾಟ್ ಕಮ್ಮಿನ್ಸ್ ಹೆಸರಿಲ್ಲ. ಅನುಭವಿ ವೇಗಿಗೆ ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ರಾಂತಿ ನೀಡಲು ಬಯಸಿರುವುದು ಇದಕ್ಕೆ ಕಾರಣ. ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಪ್ಯಾಟ್ ಕಮ್ಮಿನ್ಸ್ ಮರಳಲಿದ್ದು ಟೆಸ್ಟ್ ಸರಣಿಯಲ್ಲಿ ಆಸಿಸ್ ಪಡೆಯ ನಾಯಕತ್ವ ಕೂಡ ವಹಿಸಿಕೊಳ್ಳಲಿದ್ದಾರೆ.
ಐಪಿಎಲ್ 202: ಇಂದು ಲಕ್ನೋ vs ಪಂಜಾಬ್ ಹಣಾಹಣಿ: ಕನ್ನಡಿಗರ ಸವಾಲ್‌ನಲ್ಲಿ ಗೆಲ್ಲೋರು ಯಾರು?

ಆಸ್ಟ್ರೇಲಿಯಾ ಟಿ20 ತಂಡ ಹೀಗಿದೆ
ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜ್ಯೆ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್

ಆಸ್ಟ್ರೇಲಿಯಾ ಏಕದಿನ ತಂಡ
ಆರೋನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಮಿಚೆಲ್ ಸ್ವೆಪ್ಸನ್

ಆಸ್ಟ್ರೇಲಿಯಾ ಟೆಸ್ಟ್ ತಂಡ
ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೀಪ್ಸನ್, ಡೇವಿಡ್ ವಾರ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications