
ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಈಗಾಗಲೇ ಸಾಕಷ್ಟು ಆಟಗಾರರು ಗಾಯಗೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕ ಮತ್ತೊಂದು ಗಾಯದ ಆತಂಕದಲ್ಲಿದೆ. ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಬೆನ್ನು ನೋವಿನಿಂದ ಬಳಲುತ್ತಿದ್ದು ಮಂಗಳವಾರ ಅಭ್ಯಾಸದಿಂದ ಹೊರಗುಳಿದಿದ್ದಾರೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಗೆ ಈ ಬಗ್ಗೆ ವರದಿ ಮಾಡಿದ್ದು ಸ್ಟೀವ್ ಸ್ಮಿತ್ ಬೆಳಗ್ಗೆ ಸುಮಾರು ಹತ್ತು ನಿಮಿಷಗಳ ಕಾಲ ಅಭ್ಯಾಸವನ್ನು ನಡೆಸಿದ್ದಾರೆ. ಅದಾದ ಬಳಿಕ ಅವರು ಮೈದಾನವನ್ನು ತೊರೆದಿದ್ದಾರೆ ಎಂದು ವರದಿ ಮಾಡಿದೆ. ಆದರೆ ಸ್ಮಿತ್ ಬೆನ್ನುನೋವಿನ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿದ್ದು "ಅಭ್ಯಾಸದ ಸಂದರ್ಭದಲ್ಲಿ ಸ್ಮಿತ್ ಬೆನ್ನುನೋವಿಗೆ ಒಳಗಾಗಿದ್ದಾರೆ. ನೋವಿಗೆ ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬುಧವಾರದ ವರೆಗೂ ಸ್ಮಿತ್ ಅಭ್ಯಾಸಕ್ಕೆ ಮರಳುವ ಸಾಧ್ಯತೆಯಿಲ್ಲ" ಎಂದು ಈ ಹೇಳಿಕೆಯಲ್ಲಿ ವರದಿಯಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಈಗಾಲೇ ಡೇವಿಡ್ ವಾರ್ನರ್ ಸೇರಿದಂತೆ ಪ್ರಮುಖ ಆಟಗಾರರು ಕೂಡ ಗಾಯದಿಂದ ಬಳಲುತ್ತಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್, ಡೇವಿಡ್ ವಾರ್ನರ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಆರೋನ್ ಫಿಂಚ್ ಮೋಯ್ಸಿಸ್ ಹೆನ್ರಿಕ್ಯುಸ್, ವಿಲ್ ಪುಕೋವ್ಸ್ಕಿ, ಕ್ಯಾಮರೂನ್ ಗ್ರೀನ್, ಜ್ಯಾಕ್‌ಬನ್ ಬರ್ಡ್, ಹ್ಯಾರಿ ಕಾನ್ವೇ, ಶಾನ್ ಅಬಾಟ್ ಈ ಎಲ್ಲರೂ ಗಾಯಗೊಂಡಿದ್ದು ಕೆಲವರು ಚೇತರಿಕೆ ಕಂಡಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಪುಕೋವ್ಸ್ಕಿ ಬದಲಿಗೆ ಮೋಯ್ಸಿಸ್ ಹೆನ್ರಿಕ್ಯುಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ವಾರ್ನರ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮಾರ್ಕಸ್ ಹ್ಯಾರಿಸ್ ಕರೆಯನ್ನು ಪಡೆದಿದ್ದಾರೆ. ವಾರ್ನರ್ ಹಾಗೂ ಪುಕೋವ್ಸ್ಕಿ ಇಬ್ಬರೂ ಡಿಸೆಂಬರ್ 26ರಿಂದ ಆರಂಬಚವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.