ನಾಲ್ಕು ದಿನಗಳ ಪಂದ್ಯ, ಆಸೀಸ್ ವಿರುದ್ಧ ಭಾರತಕ್ಕೆ ಸೋಲು
ಬ್ರಿಸ್ಬೇನ್, ಸೆ. 12: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ ಭಾರತ ಎ ತಂಡಕ್ಕೆ ನಿರಾಶೆಯಾಗಿದೆ. ಭಾರತದ ಕೈಯಿಂದ ಗೆಲುವನ್ನು ಆಸ್ಟ್ರೇಲಿಯಾ ಎ ತಂಡ ಕಸಿದುಕೊಂಡಿದೆ. ಎಬಿ ಫೀಲ್ಡ್ ನಲ್ಲಿ ನಡೆದ ಪಂದ್ಯದ ಕೊನೆ ದಿನದಲ್ಲಿ ಆಸೀಸ್ ತಂಡ 3 ವಿಕೆಟ್‌ಗಳಿಂದ ಜಯ ದಾಖಲಿಸಿದೆ.
ನಮನ್ ಓಜಾ ನೇತೃತ್ವದ ತಂಡ ನೀಡಿದ್ದ 159 ರನ್ ಸವಾಲನ್ನು ಆಸೀಸ್ ಚೇಸ್ ಮಾಡಿತು. ಕ್ಯಾಮರೋನ್ ಬ್ಯಾನ್‌ಕ್ರಾಫ ಅಜೇಯ 58 ಅರ್ಧಶತಕದ ನೆರವಿನಿಂದ 7ವಿಕೆಟ್‌ಗೆ 161ರನ್ ಗಳಿಸಿ ಗೆಲುವು ಸಾಧಿಸಿತು.

ಜೇಕಬ್ ವೆಬ್‌ಸ್ಟರ್(30) 5ನೇ ವಿಕೆಟ್‌ಗೆ ಬ್ಯಾನ್‌ಕ್ರಾಫ ಜತೆ ಅಮೂಲ್ಯ 57 ರನ್ ಜತೆಯಾಟವಾಡಿದ್ದು ನಿರ್ಣಾಯಕವಾಯಿತು. ಭಾರತದ ಪರ ವೇಗಿ ಶಾರ್ದೂಲ್ ಠಾಕೂರ್(42ಕ್ಕೆ3) ಹಾಗೂ ಮತ್ತು ವರುಣ್ ಆರೊನ್(52ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಅಂತಿಮ ದಿನ ವಿಫಲರಾದರು.
ಭಾರತ ಎ: 230 ಮತ್ತು 156, ಆಸ್ಟ್ರೇಲಿಯಾ ಎ: 228ಮತ್ತು 57.3 ಓವರ್‌ಗಳಲ್ಲಿ 7ವಿಕೆಟ್‌ಗೆ 161(ಬ್ಯಾನ್‌ಕ್ರಾಫ 58, ವೆಬ್‌ಸ್ಟರ್ 30, ಹ್ಯಾಂಡ್ಸ್‌ಕೊಂಬ್ 24, ಶಾರ್ದೂಲ್ 42ಕ್ಕೆ3, ವರುಣ್ 52ಕ್ಕೆ 2, ಹಾರ್ದಿಕ್ ಪಾಂಡ್ಯ 30ಕ್ಕೆ 1, ಜಯಂತ್ ಯಾದವ್ 19ಕ್ಕೆ 1).
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Australia A beat India A
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications