ಕ್ರಿಕೆಟ್: ಸತತ 7 ಸೋಲುಗಳ ಬಳಿಕ ಕೊನೆಗೂ ಗೆದ್ದ ಆಸ್ಟ್ರೇಲಿಯಾ

ಅಡಿಲೇಡ್, ನವೆಂಬರ್ 9: ಏಕದಿನ ಪಂದ್ಯಗಳಲ್ಲಿ ಸತತ ಏಳು ಸೋಲುಗಳಿಂದ ಕಂಗೆಟ್ಟಿದ್ದ ಆಸ್ಟ್ರೇಲಿಯಾ, ಕೊನೆಗೂ ಗೆಲುವಿನ ನಿಟ್ಟುಸಿರುಬಿಟ್ಟಿದೆ.
ಅಡಿಲೇಡ್‌ನಲ್ಲಿ ಶುಕ್ರವಾರ ನಡೆದ ಎರಡನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಏಳು ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 48.3 ಓವರ್‌ಗಳಲ್ಲಿ 231 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸಾಧಾರಣ ಗುರಿ ನೀಡಿತು.
ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಗಳಿಸಿದ 47 ರನ್ ಅತ್ಯಧಿಕ ಸ್ಕೋರ್ ಎನಿಸಿತು. ನಾಯಕ ಆರೋನ್ ಫಿಂಚ್ (41) ಮತ್ತು ಕ್ರಿಸ್ ಲಿನ್ (44) ತಂಡ ಇನ್ನೂರರ ಗಡಿ ದಾಟುವಲ್ಲಿ ನೆರವಾದರು.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ (4-54) ಡ್ವಾಯ್ನ್ ಪ್ರೆಟೊರಿಸ್ (3-32) ಮತ್ತು ಡೇಲ್ ಸ್ಟೇಯ್ನ್ (2-31) ಉತ್ತಮ ದಾಳಿ ಸಂಘಟಿಸಿದರು.
ಸಾಮಾನ್ಯ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಆತಿಥೇಯರ ವೇಗಕ್ಕೆ ನಲುಗಿದರು. ಡೇವಿಡ್ ಮಿಲ್ಲರ್ (51) ಮತ್ತು ನಾಯಕ ಫಾಫ್ ಡುಪ್ಲೆಸಿಸ್ (47) ಮಾತ್ರ ಹೋರಾಟ ಮನೋಭಾವ ಪ್ರದರ್ಶಿಸಿದರು. ನಿರಂತರವಾಗಿ ವಿಕೆಟ್ ಕಳೆದುಕೊಂಡ ಹರಿಣಗಳು, ಗೆಲುವಿನ ದಡ ಸಮೀಪ ಬಂದು ಎಡವಿದರು.
ಆಸ್ಟ್ರೇಲಿಯಾದ ವೇಗಿಗಳಾದ ಮಾರ್ಕಸ್ ಸ್ಟೋನಿಸ್ (3-35), ಜೋಶ್ ಹ್ಯಾಜಲ್‌ವುಡ್ (2-42) ಮತ್ತು ಮಿಚೆಲ್ ಮಾರ್ಷ್ (2-51) ದಕ್ಷಿಣ ಆಫ್ರಿಕಾಕ್ಕೆ ಮಾರಕವಾದರು.
ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದ್ದು, ಭಾನುವಾರ (ನ.11) ಹೋಬರ್ಟ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯ ನಿರ್ಣಾಯಕವಾಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆರು ವಿಕೆಟ್‌ಗಳ ಗೆಲುವು ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications