For Quick Alerts
ALLOW NOTIFICATIONS  
For Daily Alerts
 

Ashes Test: ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ ಭರ್ಜರಿ ಜಯ: ಇಂಗ್ಲೆಂಡ್ ಸೋಲು

ಬ್ರಿಸ್ಬೇನ್‌: ಭರವಸೆಯ ಬೌಲರ್‌ಗಳಾದ ಮಿಚೆಲ್‌ ಸ್ಟಾರ್ಕ್‌ ಅವರ ಬಿಗುವಿನ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ಆಶಸ್‌ ಟೆಸ್ಟ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಆಸ್ಟ್ರೇಲಿಯಾ 5 ಪಂದ್ಯಗಳ ಆಶಸ್‌ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ ಈ ಸರಣಿಯಲ್ಲಿ ಕಂ ಬ್ಯಾಕ್‌ ಮಾಡುವ ಕನಸಿನಲ್ಲಿದೆ.

ಭಾನುವಾರ ನಡೆದ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 134 ರನ್‌ಗಳಿಂದ ಆಟ ಮುಂದುವರಿಸಿದೆ. ಏಳನೇ ವಿಕೆಟ್‌ಗೆ ವಿಲ್‌ ಜಾಕ್ಸ್‌ ಹಾಗೂ ಬೆನ್‌ ಸ್ಟೋಕ್ಸ್‌ ಜೋಡಿ ಭರ್ಜರಿ ಪ್ರದರ್ಶನ ನೀಡಿದರು. 128 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಜೋಡಿ ಆಧಾರವಾಯಿತು. ಈ ಜೋಡಿ 221 ಎಸೆತಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ವಿಫಲರಾದರು. ವಿಲ್‌ ಜಾಕ್ಸ್‌ 92 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 41 ರನ್‌ ಬಾರಿಸಿ ಮಿಂಚಿದರು.

Australia beats England by 8 wickets in 2nd Test takes 2-0 lead in Ashes series

ಇಂಗ್ಲೆಂಡ್ ತಂಡದ ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 241 ರನ್‌ಗಳಿಗೆ ಆಲೌಟ್ ಆದರು. ನಾಯಕ ಬೆನ್‌ ಸ್ಟೋಕ್ಸ್‌ 152 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 50 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಆಸ್ಟ್ರೇಲಿಯಾದ ಪರ ಮೈಕೆಲ್ ನೆಸರ್ 5 ವಿಕೆಟ್‌ ಪಡೆದು ಮಿಂಚಿದರು. ಸ್ಕಾಟ್ ಬೋಲ್ಯಾಂಡ್ ಹಾಗೂ ಮಿಚೆಲ್‌ ಸ್ಟಾರ್ಕ್‌ ತಲಾ 2 ವಿಕೆಟ್‌ ಪಡೆದರು. ಆಸ್ಟ್ರೇಲಿಯಾಕ್ಕೆ 65 ರನ್‌ಗಳ ಗುರಿಯನ್ನು ನೀಡಿತು.

ಸ್ಮಿತ್ ಅಬ್ಬರದ ಆಟ

65 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭಿಕರಾದ ಟ್ರಾವಿಸ್‌ ಹೆಡ್‌ (22) 2 ಬೌಂಡರಿ, 1 ಸಿಕ್ಸರ್ ನೆರವಿನಿಂದ ತಂಡಕ್ಕೆ ಆಧಾರವಾದರು. ಮಾರ್ನಸ್‌ ಲಂಬುಶೇನ್‌ (3) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಆರಂಭಿಕರಾದ ಜೇಕ್ ವೆದರಾಲ್ಡ್ 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್‌ ನೆರವಿನಿಂದ ಅಜೇಯನ್‌ ಸಿಡಿಸಿದರು. ನಾಯಕ ಸ್ಟೀವನ್‌ ಸ್ಮಿತ್‌ ತಂಡಕ್ಕೆ ಆಧಾರವಾದರು. ಇವರು 9 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ ಅಜೇಯ 23 ರನ್‌ ಬಾರಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 69 ರನ್‌ ಸಿಡಿಸಿ ತಂಡ ತಂಡಕ್ಕೆ ಆಧಾರವಾದರು.

Australia beats England by 8 wickets in 2nd Test takes 2-0 lead in Ashes series

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಜಯದ ಕನಸು ಕಾಣುತ್ತಿದೆ.

Story first published: Sunday, December 7, 2025, 20:12 [IST]
Other articles published on Dec 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+