ವಿಶ್ವಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ತನ್ನ ಕ್ಲಾಸಿಕ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿದ್ದ, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಅಬ್ಬರದ ಆಟದಿಂದಲೇ ಹೆಸರುವಾಸಿಯಾಗಿದ್ದ ಸ್ಮಿತ್, ಇನ್ನು ಮುಂದೆ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸ್ಟೀವನ್ ಸ್ಮಿತ್ ಭಾರತ ವಿರುದ್ಧ ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ ನಿವೃತ್ತಿ ಘೋಷಿಸಿದ್ದಾರೆ. ಇವರ ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ.
ಆಸ್ಟ್ರೇಲಿಯಾದ ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಮುನ್ನಡೆಸಿದ್ದರು. ಇವರು ಬಹುದಿನಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಐಸಿಸಿ ಟೂರ್ನಿಯಲ್ಲಿ ಮುನ್ನಡೆಸುವ ಅವಕಾಶವನ್ನು ಪಡೆದರು. ಇವರು ಮುಂದಾಳತ್ವದಲ್ಲಿ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸವಿತ್ತು. ಆದರೆ ಭರವಸೆಯ ವೇಗದ ಬೌಲರ್‌ಗಳ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಿತು. ಟೂರ್ನಿಯಲ್ಲಿ ಯುವ ಪಡೆಯನ್ನು ಮುನ್ನಡೆಸಿದ ಸ್ಮಿತ್, ತಂಡವನ್ನು ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಫೈನಲ್ ವರೆಗೆ ಕೊಂಡೊಯ್ದರು ಫೈನಲ್‌ಗೆ ತಂಡವನ್ನು ತಲುಪಿಸುವಲ್ಲಿ ವಿಫಲರಾದರು.

ಮಾರ್ಡನ್ ಡೇ ಕ್ರಿಕೆಟ್‌ನ ಖ್ಯಾತ ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಳ್ಳುವ ಸ್ಟೀವನ್ ಸ್ಮಿತ್ ನಿವೃತ್ತಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇವರ ದಿಢೀರ ನಿವೃತ್ತಿ ನಿರ್ಧಾರ ವಿಶ್ವಕ್ರಿಕೆಟ್‌ಗೆ ತುಂಬ ಲಾರದ ನಷ್ಟವಾಗಿದೆ. ಒತ್ತಡದ ಸನ್ನಿವೇಶದಲ್ಲಿ ಸಲೀಸಾಗಿ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬೌಲ್ ಮಾಡುವ ಕ್ಷಮತೆಯನ್ನು ಹೊಂದಿರುವ ಆಟಗಾರ ಅಚ್ಚರಿಯ ನಿರ್ಧಾರ ನಿಜಕ್ಕೂ ಅಭಿಮಾನಿಗಳಿಗೆ ನೋವು ತಂದಿದೆ.
ಸ್ಟೀವನ್ ಸ್ಮಿತ್ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರೂ ಹೌದು. ಇವರು ಐಸಿಸಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದ ಪ್ಲೇಯರ್. ಇವರು ಈಗಾಗಲೇ ಆಡಿರುವ 170 ಏಕದಿನ ಪಂದ್ಯಗಳಲ್ಲಿ 12 ಶತಕ ಹಾಗೂ 35 ಅರ್ಧಶತಕದ ನೆರವಿನಿಂದ 5800 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 43.28 ಆಗಿದೆ.

ಆಸ್ಟ್ರೇಲಿಯಾ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೇ ಯಾಗಿದ್ದ ಸ್ಪಿನ್ ಬೌಲಿಂಗ್ ಎದುರಿಸುವುದು ಸ್ಟೀವನ್ ಸ್ಮಿತ್‌ಗೆ ನೀರು ಕುಡಿದಷ್ಟೇ ಸುಲಭವಾಗಿತ್ತು. ಸೆಮಿಫೈನಲ್ ಪಂದ್ಯದಲ್ಲೂ ಇವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಇವರು 96 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿದರು. ಇವರು ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ಅಟ್ಯಾಕ್‌ನ್ನು ಕೆಚ್ಚೆದೆಯಿಂದ ಮೆಟ್ಟಿನಿಂತು ಬ್ಯಾಟ್ ಮಾಡಿ ತಂಡಕ್ಕೆ ನೆರವಾದರು.
ಸ್ಟೀವನ್ ಸ್ಮಿತ್ ಅವರಿಗೆ ಭಾರತದ ವಿರುದ್ಧ ಆಡುವುದು ಎಂದರೆ ತುಂಬ ಇಷ್ಟ. ಇವರು ಭಾರತದ ವಿರುದ್ಧ ಆಡಿದ 30 ಪಂದ್ಯಗಳಲ್ಲಿ 1383 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 53 ಆಗಿದೆ. ಇದರಲ್ಲಿ 5 ಶತಕ ಹಾಗೂ 7 ಅರ್ಧಶತಕಗಳು ಸೇರಿವೆ.