For Quick Alerts
ALLOW NOTIFICATIONS  
For Daily Alerts
 

ENG vs AUS: ಐದನೇ ಪಂದ್ಯಕ್ಕೆ ಮಳೆ ಕಾಟ: ಪಂದ್ಯ ಗೆದ್ದು ಸರಣಿ ವಶಕ್ಕೆ ಪಡೆದ ಆಸೀಸ್

ಐದನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 49 ರನ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ, ಐದು ಪಂದ್ಯಗಳ ಸರಣಿಯನ್ನು 3-2 ರಿಂದ ತನ್ನದಾಗಿಸಿಕೊಂಡಿದೆ. ಈ ಮೂಲಕ ಇಂಗ್ಲೆಂಡ್ ತವರಿನಲ್ಲಿ ಸರಣಿ ಸೋಲಿನ ನೋವನ್ನು ಕಂಡಿದೆ.

ಮಳೆ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49.2 ಓವರ್‌ಗಳಲ್ಲಿ 309 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸೀಸ್ 20.4 ಓವರ್‌ಗಳಲ್ಲಿ 2 ವಿಕೆಟ್‌ಗೆ 165 ರನ್‌ಗಳಿಸಿ ಮುನ್ನುಗುತ್ತಿದ್ದಾಗ ಮಳೆ ಕಾಟ ನೀಡಿತು. ಆಗ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಡಕ್‌ವರ್ತ್ ಲೂಯಿಸ್ ನಿಯಮದಂತೆ ಪ್ರವಾಸಿ ಆಸೀಸ್ ಈ ಪಂದ್ಯವನ್ನು ಗೆದ್ದಿತು.

Australia Clinch ODI Series 3-2 After Rain-Hit Victory Over England in Fifth Match

ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಆಸೀಸ್‌, ಮೂರು ಹಾಗೂ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿತ್ತು. ನಿರ್ಣಾಯಕ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸೀಸ್‌ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿತ್ತು. ಇಂಗ್ಲೆಂಡ್ ತಂಡದ ಆರಂಭಿಕ ಫಿಲ್ ಸಾಲ್ಟ್‌ ಹಾಗೂ ಬೆನ್‌ ಡಕೆಟ್‌ 7 ಓವರ್‌ಗಳಲ್ಲಿ 58 ರನ್‌ ಸೇರಿಸಿದರು. ಫಿಲ್‌ ಸಾಲ್ಟ್‌ 5 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 45 ರನ್‌ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ವಿಲ್‌ ಜಾಕ್ಸ್‌ ಸೊನ್ನೆ ಸುತ್ತಿದ್ದರು.

Australia Clinch ODI Series 3-2 After Rain-Hit Victory Over England in Fifth Match

ಶತಕದ ಜೊತೆಯಾಟ

ಮೂರನೇ ವಿಕೆಟ್‌ಗೆ ಬೆನ್ ಡಕೆಟ್‌ ಹಾಗೂ ನಾಯಕ ಹ್ಯಾರಿ ಬ್ರೂಕ್‌ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಆಸೀಸ್ ಬೌಲರ್‌ಗಳು ವಿಫಲರಾದರು. ಮೂರನೇ ವಿಕೆಟ್‌ಗೆ ಈ ಜೋಡಿ 132 ರನ್‌ ಸೇರಿಸಿತು. ಹ್ಯಾರಿ ಬ್ರೂಕ್‌ ಮೂರು ಬೌಂಡರಿ, 7 ಸಿಕ್ಸರ್ ಸಹಾಯದಿಂದ 72 ರನ್‌ ಸಿಡಿಸಿ ಔಟ್ ಆದರು.

ಉಳಿದಂತೆ ಯಾವೊಬ್ಬ ಬ್ಯಾಟರ್‌ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಆದೀಲ್‌ ರಶೀದ್ 36 ರನ್‌ ಗಳಿಸಿ ಅಬ್ಬರಿಸಿದರು. ಬೆನ್ ಡಕೆಟ್‌ ಆರ್ಭಟ ಜೋರಾಗಿತ್ತು. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 13 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ. ಇವರು 107 ರನ್‌ ಬಾರಿಸಿ ಮಿಂಚಿದರು.

ಮ್ಯಾಥ್ಯೂ ಶಾರ್ಟ್ ಅರ್ಧಶತಕ

ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಮೊದಲ ವಿಕೆಟ್‌ಗೆ ಮ್ಯಾಥ್ಯೂ ಶಾರ್ಟ್ ಹಾಗೂ ಟ್ರಾವಿಸ್ ಹೆಡ್‌ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 7.1 ಓವರ್‌ಗಳಲ್ಲಿ 78 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ಮ್ಯಾಥ್ಯೂ ಶಾರ್ಟ್ 30 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 58 ರನ್‌ ಸಿಡಿಸಿ ಔಟ್ ಆದರು. ಟ್ರಾವಿಸ್ ಹೆಡ್‌ 31, ಸ್ವೀವನ್‌ ಸ್ಮಿತ್‌ ಅಜೇಯ 36 ರನ್ ಬಾರಿಸಿದರು.

20.4 ಓವರ್‌ಗಳಲ್ಲಿ ಆಸೀಸ್ 2 ವಿಕೆಟ್‌ಗೆ 165 ರನ್‌ ಸೇರಿಸಿದ್ದಾಗ ಮಳೆ ಪಂದ್ಯಕ್ಕೆ ಕಾಟ ನೀಡಿತು. ಪರಿಣಾಮ ಪಂದ್ಯವನ್ನು ಸ್ಥಗಿತ ಗೊಳಿಸಲಾಯಿತು. ಅಲ್ಲದೆ ಡಕ್‌ವರ್ತ್‌ ಲೂಯಿಸ್ ನಿಯಮದಂತೆ ಆಸೀಸ್ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು.

Story first published: Monday, September 30, 2024, 7:31 [IST]
Other articles published on Sep 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+