AUS vs SA T20: ಗ್ಲೇನ್ ಮ್ಯಾಕ್ಸ್‌ವೆಲ್ ಅಬ್ಬರದ ಆಟ: ಆಸೀಸ್‌ಗೆ ಸರಣಿ
ಭರವಸೆಯ ಆಟಗಾರರಾದ ಗ್ಲೇನ್ ಮ್ಯಾಕ್ಸ್‌ವೆಲ್ (62 ರನ್) ಹಾಗೂ ಮಿಚೆಲ್ ಮಾರ್ಶ್ (54 ರನ್) ಅವರು ಬಾರಿಸಿದದ ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ 3ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಆಸೀಸ್ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ವಶಕ್ಕೆ ಪಡೆದುಕೊಂಡಿದೆ.
ಈ ಪದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭವನ್ನು ಕಾಣುವಲ್ಲಿ ಸಫಲರಾದರು. ಐಡೇನ್ ಮಾರ್ಕ್ರಮ್ (1), ರಯಾನ್ ರಿಕಲ್ಟನ್ (13) ಉತ್ತಮ ಆರಂಭವನ್ನು ನೀಡಲಿಲ್ಲ. ಲ್ಹುವಾನ್-ಡ್ರೆ ಪ್ರಿಟೋರಿಯಸ್ (24) ರನ್ ಕಲೆಹಾಕುವಲ್ಲಿ ವಿಫಲರಾದರು. ಸ್ಫೋಟಕ ಆಟಗಾರ ಡೇವಾಲ್ಡ್ ಬ್ರೆವಿಸ್ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು.

ನಾಲ್ಕನೇ ವಿಕೆಟ್‌ಗೆ ಡೇವಾಲ್ಡ್ ಬ್ರೆವಿಸ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 29 ಎಸೆತಗಳಲ್ಲಿ 61 ರನ್ ಸಿಡಿಸಿತು. ಬ್ರೆವಿಸ್ 1 ಬೌಂಡರಿ, 6 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದರು. ಸ್ಟಬ್ಸ್ 23 ಎಸೆತಗಳಲ್ಲಿ 25 ರನ್ ಸೇರಿಸಿದರು. ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 3 ಬೌಂಡರಿ ನೆರವಿನಿಂದ ಅಜೇಯ 38 ರನ್ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 172 ರನ್ ಸೇರಿಸಿತು. ಆಸ್ಟ್ರೇಲಿಯಾ ಪರ ನಥನ್ ಎಲ್ಲಿಸ್ 3, ಆಡಂ ಜಂಪಾ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಕಬಳಿಸಿದರು.
ಭರ್ಜರಿ ಆರಂಭ
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಮಿಚೆಲ್ ಮಾರ್ಚ್ ಹಾಗೂ ಟ್ರಾವಿಸ್ ಹೆಡ್ (19) ಜೋಡಿ 7.6 ಓವರ್‌ಗಗಳಲ್ಲಿ 66 ರನ್ ಜೊತೆಯಾಟ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಜೋಶ್ ಇಂಗ್ಲಿಂಷ್ ಹಾಗೂ ಕ್ಯಾಮರೂನ್ ಗ್ರೀನ್ ರನ್ ಕಲೆ ಹಾಕುವಲ್ಲಿ ವಿಫಲರಾದರು.ಆರಂಭಿಕ ಮಿಚೆಲ್ ಮಾರ್ಶ್ 3 ಬೌಂಡರಿ, 5 ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿದರು. ಟೀಮ್ ಡೇವಿಡ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 17 ರನ್ ಬಾರಿಸಿದರು. ಇನ್ನು 8 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 62 ರನ್ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 173 ರನ್ ಕಲೆ ಹಾಕಿತು.

ಆಸ್ಟ್ರೇಲಿಯಾ ಪರ ನಥನ್ ಎಲ್ಲಿಸ್ 3, ಆಡಂ ಜಂಪಾ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಕಬಳಿಸಿದರು. ಮೂರನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಗ್ಲೇನ್ ಮ್ಯಾಕ್ಸ್‌ವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಟೀಮ್ ಡೇವಿಡ್ ತಮ್ಮದಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications