Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐರ್ಲೆಂಡ್‌ ಮಣಿಸಿದ ಆಸ್ಟ್ರೇಲಿಯಾ ಶುಭಾರಂಭ

ಕೊಲಂಬೊ: ನಾಥನ್ ಎಲ್ಲಿಸ್ ಹಾಗೂ ಆಡಮ್ ಜಂಪಾ ಅವರ ಬಿಗುವಿನ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯದಲ್ಲಿ 67 ರನ್‌ಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿ ಶುಭಾರಂಭವನ್ನು ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಟ್ರಾವಿಸ್ ಹೆಡ್‌ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಜೋಶ್‌ ಇಂಗ್ಲಿಷ್‌ ಹಾಗೂ ಕ್ಯಾಮರೂನ್‌ ಗ್ರೀನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯ ಆಟಕ್ಕೆ ಬ್ರೇಕ್‌ ಹಾಕುವಲ್ಲಿ ವಿಫಲರಾದರು. 23 ಎಸೆತಗಳಲ್ಲಿ 49 ರನ್‌ ಜೊತೆಯಾಟ ನೀಡಿತು. ಕ್ಯಾಮರೂನ್‌ ಗ್ರೀನ್‌ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 21 ರನ್‌ ಸಿಡಿಸಿದರು. ಜೋಶ್‌ ಇಂಗ್ಲಿಷ್‌ 17 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 37 ರನ್‌ ಬಾರಿಸಿದರು. ಅಪಾಯಕಾರಿ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (9) ರನ್‌ ಬರ ಅನುಭವಿಸಿದರು.

Australia

5ನೇ ವಿಕೆಟ್‌ಗೆ ಮ್ಯಾಟ್ ರೆನ್ಶಾ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಜೋಡಿ 61 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮ್ಯಾಟ್ ರೆನ್ಶಾ 37 ರನ್‌ ಸಿಡಿಸಿದರೆ, ಸ್ಟೋಯ್ನಿಸ್ 45 ರನ್‌ ಬಾರಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್‌ ಸೇರಿಸಿತು.

ಐರ್ಲೆಂಡ್‌ ಬ್ಯಾಟರ್‌ಗಳ ರನ್‌ ಬರ

ಐರ್ಲೆಂಡ್‌ ಬ್ಯಾಟರ್‌ಗಳು ಆಸ್ಟ್ರೇಲಿಯಾ ಅನುಭವಿ ಬೌಲರ್‌ಗಳ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಐರ್ಲೆಂಡ್‌ ಬ್ಯಾಟರ್‌ಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆದ ಆಸೀಸ್ ಬೌಲರ್‌ಗಳು ಆರ್ಭಟ ನಡೆಸಿದರು. ನಾಯಕ ಪಾಲ್ ಸ್ಟಿರ್ಲಿಂಗ್ (1), ರಾಸ್ ಅಡೈರ್ (12), ಹ್ಯಾರಿ ಟೆಕ್ಟರ್ (0), ಕರ್ಟಿಸ್ ಕ್ಯಾಂಪರ್ (4), ಬೆನ್ ಕ್ಯಾಲಿಟ್ಜ್ (2), ಗ್ಯಾರೆತ್ ಡೆಲಾನಿ (11) ರನ್‌ ಕಲೆ ಹಾಕುವಲ್ಲಿ ವಿಫಲರಾದರು. 7ನೇ ವಿಕೆಟ್‌ಗೆ ಲೋರ್ಕನ್ ಟಕರ್ ಹಾಗೂ ಜಾರ್ಜ್ ಡಾಕ್ರೆಲ್ ಜೋಡಿ 46 ರನ್‌ ಸೇರಿಸಿತು. ಲೋರ್ಕನ್ ಟಕರ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್ ಬಾರಿಸಿದರೆ, ಜಾರ್ಜ್ ಡಾಕ್ರೆಲ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 41 ರನ್ ಚಚ್ಚಿದ್ದರು. ಐರ್ಲೆಂಡ್‌ 16.5 ಓವರ್‌ಗಳಲ್ಲಿ 115 ರನ್‌ ಸೇರಿಸಿ ಆಲೌಟ್ ಆಯಿತು.

Australia

ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್‌ ಬಿಗುವಿನ ದಾಳಿ ನಡೆಸಿ 4 ವಿಕೆಟ್‌ ಕಬಳಿಸಿದರು. ಸ್ಪಿನ್ ಬೌಲರ್‌ ಆಡಂ ಜಂಪಾ 4 ವಿಕೆಟ್‌ ಉರುಳಿಸಿದರು. ನಾಥನ್ ಎಲ್ಲಿಸ್ ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

ಐರ್ಲೆಂಡ್ ತಂಡ ತನ್ನ ಮುಂದಿನ ಪಂದ್ಯವನ್ನು ಫೆ.14 ರಂದು ಓಮನ್‌ ವಿರುದ್ಧ, ಫೆ.17 ರಂದು ಜಿಂಬಾಬ್ವೆ ವಿರುದ್ಧ ಪಂದ್ಯವನ್ನು ಆಡಲಿದೆ. ಐರ್ಲೆಂಡ್‌ ಆಡಿರುವ 2 ಪಂದ್ಯಗಳಲ್ಲಿ 2 ಸೋಲು ಕಂಡಿದೆ.

Story first published: Wednesday, February 11, 2026, 20:14 [IST]
Other articles published on Feb 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+