ಆವತ್ತು ಕೊಹ್ಲಿ 'ಪಂಚಿಂಗ್ ಬ್ಯಾಗ್'ನಂತೆ ಅನ್ನಿಸಿತ್ತು ಎಂದ ಆಸೀಸ್ ಕೋಚ್!

ಸಿಡ್ನಿ, ಮಾರ್ಚ್ 18: ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಪಾಲಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆಸ್ಟ್ ಪ್ಲೇಯರ್ ಅನ್ನೋದು ನಿಜವೆ. ಆದರೆ ಮೈದಾನದಲ್ಲಿ ಕೊಹ್ಲಿ ಆಕ್ರಮಣಕಾರಿಯಾಗಿ ಬದಲಾದರೆ ಎದುರಾಳಿಗೆ ಅಷ್ಟೇ ತೊಂದರೆಯೂ ಇದೆ ಅನ್ನೋದು ಲ್ಯಾಂಗರ್‌ಗೆ ಚೆನ್ನಾಗಿ ಗೊತ್ತಿದೆ. ಕೊಹ್ಲಿಯ ರೌದ್ರರೂಪ ಮತ್ತು ಅದರಿಂದ ತನ್ನ ತಂಡ ಸಂಕಷ್ಟಕ್ಕೀಡಾಗಿದ್ದ ಕ್ಷಣವೊಂದನ್ನು ಲ್ಯಾಂಗರ್ ಸ್ಮರಿಸಿಕೊಂಡಿದ್ದಾರೆ.
ಅಂದಿನ ಪಂದ್ಯದಲ್ಲಿ ಕೊಹ್ಲಿಯನ್ನು ಕಂಡಾಗೆಲ್ಲ ಜಸ್ಟಿನ್ ಲ್ಯಾಂಗರ್‌ಗೆ ಆತನೊಂಧು ಪಂಚಿಂಗ್ ಬ್ಯಾಗ್ ಅನ್ನಿಸುವಷ್ಟರ ಮಟ್ಟಿಗೆ ಜಿದ್ದಾಜಿದ್ದಿ ಭಾವ ಮೂಡಿತ್ತಂತೆ. ಕೊಹ್ಲಿ ತನ್ನ ಚರ್ಮದಡಿಯೊಳಗೆ ನುಗ್ಗಿಬಿಟ್ಟಿದ್ದಾನೆ ಎನ್ನಿಸಿಬಿಟ್ಟಿತಂತೆ.
ಜಸ್ಟಿನ್ ಲ್ಯಾಂಗರ್‌ಗೆ ಹಾಗೆ ಅನ್ನಿಸಲು ಕಾರಣವೂ ಇದೆ. ಅಂದಿನ ಸರಣಿ ಗೆಲುವು ಆಸ್ಟ್ರೇಲಿಯಾ ಪಾಲಿಗೆ ಅಷ್ಟರ ಮಟ್ಟಿಗೆ ಮುಖ್ಯವಾಗಿತ್ತು. ಆದರೆ ಆವತ್ತು ಆಗಿದ್ದೇ ಬೇರೆ!

ಭಾರತ-ಆಸ್ಟ್ರೇಲಿಯಾ ಸರಣಿ
ಜಸ್ಟಿನ್ ಲ್ಯಾಂಗರ್ ನೆನಪಿಸಿಕೊಂಡ ಪಂದ್ಯ ನಡೆದಿದ್ದು ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದಾಗ, 2018-19ರಲ್ಲಿ. ಅದರಲ್ಲೂ ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯ ವೇಳೆ. ಈ ಸರಣಿಯಲ್ಲಿ ಭಾರತ 2-1ರ ಗೆಲುವನ್ನಾಚರಿಸುವುದರೊಂದಿಗೆ ಇತಿಹಾಸ ನಿರ್ಮಿಸಿತ್ತು.

ಏನಾಗಿದ್ದು ಆ ದಿನ?
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಅಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿತ್ತು. ಟಿಮ್ ಪೈನೆ ನಾಯಕತ್ವದ ಆಸ್ಟ್ರೇಲಿಯಾ ಟೆಸ್ಟ್ ತಂಡ ಆ ವೇಳೆ ಸಂಕಷ್ಟದಲ್ಲಿತ್ತು. ಯಾಕೆಂದರೆ ಆ ಹೊತ್ತಿನಲ್ಲಿ ಆಸೀಸ್‌ನ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟಿವ್ ಸ್ಮಿತ್, ಬಾಲ್ ಟ್ಯಾಂಪರಿಂಗ್‌ನಲ್ಲಿ ಪಾಲ್ಗೊಂಡು ನಿಷೇಧಕ್ಕೀಡಾಗಿದ್ದರು. ತಂಡ ದುರ್ಬಲವಾಗಿದ್ದರಿಂದ ಕೊಹ್ಲಿಪಡೆಯನ್ನು ಕೆಣಕದಿರಲು ಲ್ಯಾಂಗರ್ ಬಳಗ ಅಂದು ನಿರ್ಧರಿಸಿತ್ತು.

ತಿರುಗಿ ಹೋರಾಡುವ ಸ್ಥಿತಿಯಲ್ಲಿರಲಿಲ್ಲ
'ಆ ಮದ್ಯಾಹ್ನ ನನಗೆ ಕೊಹ್ಲಿ ಪಂಚಿಂಗ್ ಬ್ಯಾಗ್ ಅನ್ನಿಸಿದ್ದನ್ನು ನೆನಪಿಸಿಕೊಳ್ಳಬಲ್ಲೆ. ನಾವು ಆ ವೇಳೆ ತಿರುಗಿ ಹೋರಾಡುವ ಸ್ಥಿತಿಯಲ್ಲಿರಲಿಲ್ಲ. ಅಂಥ ಕ್ಷಣ ನಾಯಕರ ವಿಚಾರದಲ್ಲಿ ನಾವು ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಅಲ್ಲದೆ ನಾವಾಗ 1-0ಯ ಸರಣಿ ಹಿನ್ನಡೆಯಲ್ಲಿ ಬೇರೆ ಇದ್ದೆವು,' ಎಂದು ಲ್ಯಾಂಗರ್ ಪರ್ತ್‌ನಲ್ಲಿ ನಡೆದಿದ್ದ ಇತ್ತಂಡಗಳ ಟೆಸ್ಟ್ ಕ್ಷಣವನ್ನು ಸ್ಮರಿಸಿಕೊಂಡರು.

ಕೊಹ್ಲಿ ಸಂಭ್ರಮ ವಿಚಿತ್ರ ಭಾವ ಮೂಡಿಸಿತ್ತು
ಮಾತು ಮುಂದುವರೆಸಿದ ಲ್ಯಾಂಗರ್, 'ಪಂದ್ಯದ ದ್ವಿತೀಯ ಇನ್ನಿಂಗ್ಸ್ ವೇಳೆ ನಮ್ಮ ಒಂದಿಷ್ಟು ಬ್ಯಾಟ್ಸ್‌ಮನ್‌ಗಳು ಔಟಾದಾಗ ಕೊಹ್ಲಿ ಸಂಭ್ರಮಾಚರಿಸಿದ್ದು ನೋಡಿ ಕೊಹ್ಲಿ ನನ್ನ ಚರ್ಮದಡಿಗೆ ನುಗ್ಗುತ್ತಿದ್ದಾನೆ ಅನ್ನಿಸಿತ್ತು. ಹೀಗಾಗಿ ಕೊಹ್ಲಿಯನ್ನು ಎದುರುಗೊಳ್ಳುವಂತೆ ನಮ್ಮ ಆಟಗಾರರಿಗೆ ತಿಳಿಸಿದ್ದೆ. ಆದರೆ ನಿಂದನೆ ಮತ್ತು ಅಣಕ ನಡುವಿನ ಗೆರೆ ದಾಟದಿರದಂತೆ ಆಟಗಾರರಿಗೆ ಸೂಚಿಸಿದ್ದೆ. ಯಾಕೆಂದರೆ ನಿಂದನೆಗೆ ನಮ್ಮಲ್ಲಿ ಅವಕಾಶವಿಲ್ಲ,' ಎಂದರು. ಅಂದ್ಹಾಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 146 ರನ್‌ನಿಂದ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications