ಆಸ್ಟ್ರೇಲಿಯಾ ಕ್ರಿಕೆಟ್ ಕೋಚ್ ಡರೇನ್ ಲೆಹ್ಮನ್ ರಾಜೀನಾಮೆ

Posted By:
Australia cricket couch Daren Lehmann resigns

ಚೆಂಡು ವಿರೂಪ ಪ್ರಕರಣ ಆಸ್ಟ್ರೇಲಿಯಾದ ಕ್ರಿಕೆಟ್ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಸ್ಟೀವ್ ಸ್ಮಿತ್, ಡೆವಿಡ್ ವಾರ್ನರ್, ಬ್ಯಾಂಕ್ರೋಫ್ಟ್ ಅವರ ನಿಷೇಧದ ನಂತರ ಈಗ ಮುಖ್ಯ ಕೋಚ್ ಡರೇನ್ ಲೆಹ್ಮನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಇಂದು ಈ ವಿಷಯ ಸ್ಪಷ್ಟಪಡಿಸಿರುವ ಲೆಹ್ಮನ್ ಅವರು ಶುಕ್ರವಾರದಿಂದ ಆರಂಭವಾಗುವ ದ.ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ನಂತರ ಕೋಚ್ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.

ಚೆಂಡು ವಿರೂಪ ಪ್ರಕರಣದಲ್ಲಿ ಡರೆನ್ ಲೆಹ್ಮನ್ ಅವರೂ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಇದೆ. ಅವರ ಆದೇಶದಂತೆಯೇ 12ನೇ ಆಟಗಾರನೊಬ್ಬ ಸ್ಯಾಂಡ್ ಪೇಪರ್‌ ಅನ್ನು ಅಂಗಳದೊಳಗೆ ಕೊಂಡು ಹೋಗಿ ಬ್ಯಾಂಕ್ರೋಫ್ಟ್‌ಗೆ ಹಸ್ತಾಂತರಿಸಿದ್ದ ಎನ್ನಲಾಗಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕೆಮೆರಾನ್ ಬ್ಯಾಂಕ್ರೋಫ್ಟ್ ಅವರುಗಳ ವಿರುದ್ಧ ಕ್ರಮ ಕೈಗೊಂಡಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ಆರೋಪಿಗಳಲ್ಲೊಬ್ಬರಾದ ಡರೆನ್ ಲೆಹ್ಮನ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೂ ಸಹ ಈಗ ಲೆಹ್ಮನ್ ಅವರೇ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.

'ನಾನು ನನ್ನ ಕುಟುಂಬದೊಂದಿಗೆ ಮಾತನಾಡಿದ್ದೇನೆ, ನನ್ನ ಆಪ್ತೇಷ್ಟರೊಂದಿಗೂ ಚರ್ಚೆ ಮಾಡಿ ಈ ನಿರ್ಣಯ ಕೈಗೊಂಡಿದ್ದೇನೆ, ಕೋಚ್ ಹುದ್ದೆಯಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಎನಿಸುತ್ತದೆ' ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾ ತಂಡದಲ್ಲಿ ಆಲ್‌ರೌಂಡರ್‌ ಆಗಿ ಗುರುತಿಸಿಕೊಂಡಿದ್ದ ಡರೆನ್ ಲೆಹ್ಮನ್ ಅವರು 2013 ರಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್ ಹುದ್ದೆಗೇರಿದ್ದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 29, 2018, 18:45 [IST]
Other articles published on Mar 29, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ