ಸಿಡ್ನಿ, ಮಾರ್ಚ್ 31: ಈ ಹಿಂದೆ ಕೊಹ್ಲಿ ಜತೆ ಪಂದ್ಯವಾಡುತ್ತಿದ್ದಾಗ, ಮಾತಿನ ಚಕಮಕಿ ನಡೆದಿತ್ತು. ಆ ಸಂದರ್ಭದಲ್ಲಿ ವಿಕೆಟ್ ಕಿತ್ತು, ಕೊಹ್ಲಿಗೆ ತಿವಿಯೋಣ ಎನ್ನುವಷ್ಟು ರೋಷ ಉಕ್ಕಿ ಬಂದಿತ್ತು. ಆದರೆ, ಅಂಪೈರ್ ಅಡ್ಡ ಬಂದಿದ್ದರಿಂದ ಕೋಪ ನಿಯಂತ್ರಿಸಿಕೊಂಡೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಎಡ್ ಕೋವನ್ ಮಾರ್ಚ್ 31ರಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿದೆ. ಸರಣಿಯುದ್ದಕ್ಕೂ ಕೊಹ್ಲಿ ಪಡೆ ಹಾಗೂ ಸ್ಮಿತ್ ಪಡೆ ನಡುವೆ ವಾಕ್ಸಮರ ನಡೆದಿತ್ತು. ಮೈದಾನದ ಆಚೆಗೂ ಇದು ಹಬ್ಬಿದ್ದು, ಈಗಲೂ ಆಸ್ಟ್ರೇಲಿಯಾದ ಮಾಜಿ ಆಟಗಾರರು ಹೇಳಿಕೆ ನೀಡುವುದು ಕ್ಷಮೆಯಾಚಿಸುವುದು ಮುಂದುವರೆದಿದೆ.
ಟೆಸ್ಟ್ ಪಂದ್ಯವೊಂದರ ವೇಳೆ ವಿರಾಟ್ ಕೊಹ್ಲಿ ನನ್ನ ಬಳಿ ಅನುಚಿತವಾಗಿ ವರ್ತಿಸಿದ್ದರು. ನನ್ನನ್ನು ನೋಡಿ ಗದರಿ, ಏನೋ ಒಂದು ಪದ ಬಳಸಿದ್ದರು, ಆದರೆ, ನನಗೆ ತಕ್ಷಣಕ್ಕೆ ಏನೆಂದು ಅರ್ಥವಾಗಿರಲಿಲ್ಲ.
