AUS vs SL Test: ಶ್ರೀಲಂಕಾದಲ್ಲಿ 23 ವರ್ಷಗಳ ಬಳಿಕ ಇತಿಹಾಸ ಬರೆದ ಆಸ್ಟ್ರೇಲಿಯಾ
ಶ್ರೀಲಂಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ಇತಿಹಾಸ ಬರೆದಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಇನಿಂಗ್ಸ್ ಹಾಗೂ 242 ರನ್‌ಗಳಿಂದ ಆತಿಥೇಯ ಲಂಕಾ ತಂಡವನ್ನು ಮಣಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಉಸ್ಮಾನ್ ಖವಾಜ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಈ ಸರಣಿಯ ಎರಡನೇ ಟೆಸ್ಟ್ ಗಾಲೆಯಲ್ಲಿ ಫೆಬ್ರವರಿ 6 ರಿಂದ ಆರಂಭವಾಗಲಿದೆ.
ಶನಿವಾರ ನಡೆದ ಆಟದಲ್ಲಿ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಂದ ಆಟ ಮುಂದುವರಿಸಿ, 165 ರನ್‌ಗಳಿಗೆ ಸರ್ವಪತನ ಕಂಡಿತು. ಫಾಲೋ ಆನ್ ಹೆರಲ್ಪಟ್ಟಿದ್ದರಿಂದ ಲಂಕಾ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಸಿತು. ಈ ವೇಳೆಯೂ ಲಂಕಾ ತಂಡ ಅಚ್ಚರಿಯ ಆಟವನ್ನು ಏನು ಆಡಲಿಲ್ಲ. ಪರಿಣಾಮ ತವರಿನಲ್ಲಿ ಹೀನಾಯ ಸೋಲು ಕಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡ ವಿದೇಶಿ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಅತಿದೊಡ್ಡ ಗೆಲುವು ದಾಖಲಿಸಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ನಾಲ್ಕನೇ ಅತಿದೊಡ್ಡ ಗೆಲುವು.

ಸ್ಪಿನ್ ಮ್ಯಾಜಿಕ್
ಆಸ್ಟ್ರೇಲಿಯಾ ಪರ ಸ್ಪಿನ್ ಬೌಲರ್‌ಗಳು ಎರಡೂ ಇನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಆಸೀಸ್ ಪರ ಮ್ಯಾಥ್ಯೂ ಕುಹ್ನೆಮನ್ ಎರಡೂ ಇನಿಂಗ್ಸ್‌ಗಳಲ್ಲೂ ಲಂಕಾ ಬೌಲರ್‌ಗಳನ್ನು ಕಾಡಿದರು. ಲಂಕಾ ತಂಡದ ಪರ ಮೊದಲ ಇನಿಂಗ್ಸ್‌ನಲ್ಲಿ ದಿನೇಶ್ ಚಾಂಡಿಮಲ್ ಅವರು 72 ರನ್‌ಗಳ ಅಮೋಘ ಆಟವನ್ನು ಆಡಿದರು. ಇವರನ್ನು ಹೊರತು ಪಡಿಸಿದರೆ ಉಳಿದ ಬ್ಯಾಟರ್‌ಗಳು ನಿರಾಸೆಯನ್ನು ಅನುಭವಿಸಿದರು.
ಫಾಲೋ ಆನ್ ಪಡೆದು ಎರಡನೇ ಇನಿಂಗ್ಸ್ ಆರಂಭಿಸಿದ ಲಂಕಾ ತಂಡದ ಬ್ಯಾಟರ್‌ಗಳು, ಎರಡನೇ ಇನಿಂಗ್ಸ್‌ನಲ್ಲೂ ವೈಫಲ್ಯ ಅನುಭವಿಸಿದರು. ಇವರು ಪ್ರವಾಸಿ ತಂಡದ ಅನುಭವಿ ಬೌಲರ್‌ಗಳು ತೋಡಿದ ಖೆಡ್ಡಾಗೆ ಬಲಿಯಾಗುತ್ತಾ ಸಾಗಿದರು. ಆತಿಥೇಯ ತಂಡದ ಪರ ಜೊತೆಯಾಟಗಳು ಬಾರದೇ ಇರುವುದು ತಂಡಕ್ಕೆ ಹಿನ್ನಡೆ ಆಯಿತು. ಎರಡನೇ ಇನಿಂಗ್ಸ್‌ನಲ್ಲಿ ಮೂರನೇ ವಿಕೆಟ್‌ಗೆ ಆಂಜಿಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಂಡಿಮಲ್ ಜೋಡಿ 85 ಎಸೆತಗಳಲ್ಲಿ 69 ರನ್ ಸಿಡಿಸಿದರು. 6ನೇ ವಿಕೆಟ್‌ಗೆ ಧನಂಜಯ್ ಡಿಸಿಲ್ವಾ ಹಾಗೂ ಕುಸಾಲ್ ಮೆಂಡಿಸ್ 88 ಎಸೆತಗಳಲ್ಲಿ 65 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಸೂಚನೆಯನ್ನು ನೀಡಲೇ ಇಲ್ಲ.
ಆಸೀಸ್ ಪರ ಮ್ಯಾಥ್ಯೂ ಕುಹ್ನೆಮನ್ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರೆ, ನಾಥನ್ ಲಿಯಾನ್ 3 ವಿಕೆಟ್ ಕಬಳಿಸಿದರು. ಇನ್ನು ಎರಡನೇ ಇನಿಂಗ್ಸ್‌ನಲ್ಲೂ ಈ ಇಬ್ಬರೂ ಸ್ಪಿನ್ ಬೌಲರ್‌ಗಳು ತಲಾ ನಾಲ್ಕು ವಿಕೆಟ್ ಪಡೆದರು. ಈಗಾಗಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಸತತ ಎರಡನೇ ಬಾರಿ ಪ್ರವೇಶ ಪಡೆದಿರುವ ಆಸ್ಟ್ರೇಲಿಯಾಕ್ಕೆ ಇದು ಅನೌಪಚಾರಿಕ ಪಂದ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications