Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಓಮನ್‌ ವಿರುದ್ಧ ಆಸ್ಟ್ರೇಲಿಯಾಗೆ 9 ವಿಕೆಟ್‌ ಜಯ

ಪಲ್ಲೆಕೆಲೆ: ಈಗಾಗಲೇ ಟಿ20 ವಿಶ್ವಕಪ್‌ ಲೀಗ್ ಹಂತದಿಂದ ಹೊರ ನಡೆದಿರುವ ಆಸ್ಟ್ರೇಲಿಯಾ ತನ್ನ ಲೀಗ್‌ನ ಕೊನೆಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಓಮನ್‌ ತಂಡವನ್ನು ಮಣಿಸಿ ಟೂರ್ನಿಗೆ ಗೆಲುವಿನ ವಿದಾಯ ನೀಡಿದೆ. ಆಸ್ಟ್ರೇಲಿಯಾದ ಜಯದಲ್ಲಿ ನಾಯಕ ಮಿಚೆಲ್‌ ಮಾರ್ಷ್ ಹಾಗೂ ಲೆಗ್ ಸ್ಪಿನ್ ಬೌಲರ್ ಆಡಂ ಜಂಪಾ ಮಿಂಚಿದರು. ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಆಸ್ಟ್ರೇಲಿಯಾ ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಸೋಲು ಕಂಡಿದ್ದು, 4 ಅಂಕವನ್ನು ಕಲೆ ಹಾಕಿ ಮೂರನೇ ಸ್ಥಾನ ಪಡೆದಿದೆ.

ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ತಂಡಗಳು ತಮ್ಮ ತಮ್ಮ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವುದು ಅನಿವಾರ್ಯವಾಗಿತ್ತು. ಬಿ ಗುಂಪಿನಲ್ಲಿ ಜಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ. ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಪ್ರಯಾಣ ಲೀಗ್‌ ಹಂತಕ್ಕೆ ಮುಕ್ತಾಯವಾಗಿದೆ.

Australia

ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಓಮನ್ ತಂಡದ ಬ್ಯಾಟರ್‌ಗಳು ಆಸ್ಟ್ರೇಲಿಯಾ ಬೌಲರ್‌ಗಳ ಬಿಗುವಿನ ದಾಳಿ ಎದುರಿಸುವಲ್ಲಿ ವಿಫಲರಾದರು. ಓಮನ್ ತಂಡದ ಅಮೀರ್ ಕಲೀಮ್‌ ಇನ್ನಿಂಗ್ಸ್‌ ಮೊದಲ ಎಸೆತದಲ್ಲಿ ಔಟ್ ಆದರು. ಒಮನ್ ತಂಡದ ಪರ ಯಾವೊಬ್ಬ ಬ್ಯಾಟರ್‌ ಬಿಗ್ ಇನಿಂಗ್‌ ಕಟ್ಟಲಿಲ್ಲ. ಓಮನ್ ತಂಡದ ಪರ ನಾಯಕ ಜತೀಂದರ್ ಸಿಂಗ್ 17, ಕರಣ್ ಸೋನಾವಾಲೆ 12, ಹಮ್ಮದ್ ಮಿರ್ಜಾ 16 ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ವಾಸಿಂ ಅಲಿ 4 ಬೌಂಡರಿ ನೆರವಿನಿಂದ 32 ರನ್‌ ಬಾರಿಸಿದರು. ಅಂತಿಮವಾಗಿ ಓಮನ್‌ 16.4 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಅಯಿತು.

ಜಂಪಾಗೆ 4 ವಿಕೆಟ್‌

ಆಸ್ಟ್ರೇಲಿಯಾ ಲೆಗ್ ಸ್ಪಿನ್ ಬೌಲರ್ ಆಡಂ ಜಂಪಾ 3.2 ಓವರ್‌ ಬೌಲ್ ಮಾಡಿ 21 ರನ್ ನೀಡಿ 4 ವಿಕೆಟ್‌ ಕಬಳಿಸಿದರು. ಜೇವಿಯರ್ ಬಾರ್ಟ್ಲೆಟ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ ತಲಾ 2 ವಿಕೆಟ್‌ ಉರುಳಿಸಿದರು.

ಭರ್ಜರಿ ಜೊತೆಯಾಟ

105 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭ ಭರ್ಜರಿಯಾಗಿತ್ತು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿ ತಂಡದತ್ತ ವಿಜಯಲಕ್ಷ್ಮಿ ವಾಲುವಂತೆ ಮಾಡಿದ್ದರು. ಈ ಜೋಡಿ 8.1 ಓವರ್‌ಗಳಲ್ಲಿ 93 ರನ್‌ ಸಿಡಿಸಿತು. ಈ ಹಂತದಲ್ಲಿ ಟ್ರಾವಿಸ್ ಹೆಡ್‌ 6 ಬೌಂಡರಿ ಸಹಾಯದಿಂದ 32 ರನ್‌ ಬಾರಿಸಿ ಔಟ್ ಆದರು. ನಾಯಕ ಮಿಚೆಲ್ ಮಾರ್ಷ್ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 64 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ಮಧ್ಯಮ ಕ್ರಮಾಂಕದ ಆಟಗಾರ ಜೋಸ್ ಇಂಗ್ಲಿಷ್‌ 2 ಬೌಂಡರಿ ಸಹಾಯದಿಂದ ಅಜೇಯ 12 ರನ್ ಬಾರಿಸಿದರು. ಓಮನ್‌ ಟೂರ್ನಿಯಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದೆ.

Story first published: Friday, February 20, 2026, 22:08 [IST]
Other articles published on Feb 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+