Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ವಿರುದ್ಧ ಸೋತ ಗಾಯದ ಮೇಲೆ ಆಸ್ಟ್ರೇಲಿಯಾಕ್ಕೆ ದಂಡದ ಬರೆ

Australia fined 40 per cent of their match fee for maintaining a slow over-rate against India

ಮೆಲ್ಬರ್ನ್: ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡಿದ್ದ ಆಸ್ಟ್ರೇಲಿಯಾ ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿತ್ತು. ಆದರೆ ದ್ವಿತೀಯ ಟೆಸ್ಟ್‌ನಲ್ಲಿ 8 ವಿಕೆಟ್ ಜಯ ಗಳಿಸಿರುವ ಟೀಮ್ ಇಂಡಿಯಾ ಆತಿಥೇಯರಿಗೆ ತಿರುಗೇಟು ನೀಡಿದೆ. ಈ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾಕ್ಕೆ ದಂಡವೂ ಬಿದ್ದಿದೆ.

ಮೆಲ್ಬರ್ನ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 29) ಮುಕ್ತಾಯಗೊಂಡ ದ್ವಿತೀಯ ಟೆಸ್ಟ್‌ನಲ್ಲಿ ಸ್ಲೋ ಓವರ್‌ ರೇಟ್‌ಗಾಗಿ ಟಿಮ್ ಪೈನ್ ಬಳಗಕ್ಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯದ ಸಂಭಾವನೆಯ ಶೇಕಡಾ 40ರಷ್ಟು ದಂಡ ವಿಧಿಸಿದೆ.

ಐಸಿಸಿ ನಿಯಮದ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲಿಂಗ್ ತಂಡ ಗಂಟೆಗೆ ಕನಿಷ್ಠ 15 ಓವರ್‌ಗಳನ್ನು ಮುಗಿಸಿರಬೇಕು. 3.30 ಗಂಟೆಗಳಲ್ಲಿ ಕನಿಷ್ಠ 50 ಓವರ್‌ಗಳನ್ನು ಮುಗಿಸಿರಬೇಕು. ಇದನ್ನು ಪ್ರತೀ ಗಂಟೆಗಳಿಗೆ ವಿಂಗಡಿಸಿದರೆ ಗಂಟೆಗೆ 14.28 ಓವರ್‌ಗಳನ್ನು ಬೌಲಿಂಗ್ ತಂಡ ಮುಗಿಸಿರಬೇಕಾಗಿರುತ್ತದೆ. ತಪ್ಪಿದರೆ ಹೆಚ್ಚುವರಿ ಕಾಲಕ್ಕನುಸಾರ ದಂಡ ವಿಧಿಸಲಾಗುತ್ತದೆ.

ಆಸ್ಟ್ರೇಲಿಯಾಕ್ಕೆ ಬರೀ ದಂಡದ ಬರೆಯಷ್ಟೇ ಅಲ್ಲ, ಟೆಸ್ಟ್ ಚಾಂಪಿಯನ್‌ಷಿಪ್‌ ಅಂಕಗಳಲ್ಲಿ 4 ಅಂಕಗಳನ್ನು ಪೆನಾಲ್ಟಿ ಕೂಡ ಹಾಕಲಾಗಿದೆ. ಅಂತೂ ಭಾರತ ವಿರುದ್ಧ ದ್ವಿತೀಯ ಟೆಸ್ಟ್ ಅನ್ನು ಸುಲಭವಾಗಿ ಸೋತ ಬೇಸರದಲ್ಲಿರುವ ಕಾಂಗರೂ ಪಡೆಗೆ ದಂಡದ ಬರೆಯೂ ಬಿದ್ದಿದೆ.

Story first published: Tuesday, December 29, 2020, 16:36 [IST]
Other articles published on Dec 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+