Andrew Symonds: ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆಂಡ್ರ್ಯೋ ಸೈಮಂಡ್ಸ್ ನಿಧನ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಂಡ್ರ್ಯೋ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಟೌನ್ಸ್‌ವಿಲ್ಲೆ ನಗರದ ಹೊರವಲದಯದಲ್ಲಿ ಭಾನುವಾರ ಈ ಭೀಕರ ಅಪಘಾತ ನಡೆದಿದ್ದು ಆಸಿಸ್ ಮಾಜಿ ಕ್ರಿಕೆಟಿಗ ಪ್ರಾಣ ಕಳೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಬಳಿ ಒಂದೇ ಕಾರು ಅಪಘಾತದಲ್ಲಿ ಆಂಡ್ರ್ಯೂ ಸೈಮಂಡ್ಸ್ ಮೃತಪಟ್ಟರು ಎಂದು ಪೊಲೀಸರ ಆರಂಭಿಕ ವರದಿಗಳು ವರದಿ ಮಾಡಿದೆ, ಅಲ್ಲಿ ಅವರು ಕ್ರಿಕೆಟ್ ನಿವೃತ್ತಿಯ ನಂತರ ವಾಸಿಸುತ್ತಿದ್ದರು.
ಕ್ವೀನ್ಸ್‌ಲ್ಯಾಂಡ್ ಪೊಲೀಸರು ಶನಿವಾರ ಸಂಜೆ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಹರ್ವೆ ರೇಂಜ್‌ನಲ್ಲಿ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ದೃಢಪಡಿಸಿದರು.

ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಹಾಗೂ 14 ಟಿ20 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ.
ಸೈಮಂಡ್ಸ್ ಈ ವರ್ಷ ನಿಧನರಾದ ಮೂರನೇ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆಯಾಗಿದ್ದಾರೆ. ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಇಬ್ಬರೂ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಕ್ರಿಕೆಟ್ ಆಸ್ಟ್ರೇಲಿಯ ಸಂತಾಪ
ವೇಲ್ ಆಂಡ್ರ್ಯೂ ಸೈಮಂಡ್ಸ್, 46ನೇ ವಯಸ್ಸಿನಲ್ಲಿ ದುರಂತವಾಗಿ ನಿಧನರಾದ ಪ್ರೀತಿಯ ಕ್ವೀನ್ಸ್‌ಲ್ಯಾಂಡರ್‌ನ ನಷ್ಟದಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications