
ಟಿ20 ವಿಶ್ವಕಪ್‌ನ ಸೆಮಿಫೈನಲ್‌ನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸುವ ಮೂಲಕ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಭಾರತ ತಂಡದ ಸೋಲಿಗೆ ಭಾರತದ ಆರಂಭಿಕರೇ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ 10 ಓವರ್‌ಗಳಲ್ಲಿ ಕೇವಲ 62 ರನ್ ಗಳಿಸಿದ್ದು ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ರನ್ ಗಳಿಸಲು ಮತ್ತೊಮ್ಮೆ ಪರದಾಡಿದರು.
ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದರೂ, ಅವರು ನಿಧಾನಗತಿಯಲ್ಲಿ ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮಾಡಿ 63 ರನ್ ಗಳಿಸುವ ಮೂಲಕ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಲು ಸಹಾಯ ಮಾಡಿದರು.
ಭಾರತದ ಅಗ್ರಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ, "ಭಾರತದ ಟಾಪ್ ಆರ್ಡರ್ ತುಂಬಾ ಸಾಂಪ್ರದಾಯಿಕವಾಗಿ ಬ್ಯಾಟಿಂಗ್ ಮಾಡಿತು. ಮೊದಲ 10 ಓವರ್‌ಗಳಲ್ಲಿ ಪ್ರತಿ ಓವರ್‌ಗೆ ಕೇವಲ 6.2 ರನ್ ಗಳಿಸಿದರು. ವಿಶ್ವದ ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಲೈನ್-ಅಪ್ ವಿರುದ್ಧ ಆಡುವಾಗ, ಈ ರನ್‌ಗಳು ಏನೇನೂ ಅಲ್ಲ, ಭಾರತದ ಇನ್ನಿಂಗ್ಸ್‌ನ ಮೊದಲ ಹತ್ತು ಓವರ್‌ಗಳು ಅವರ ಸೋಲಿಗೆ ಕಾರಣವಾಯಿತು" ಎಂದು ಹೇಳಿದರು.

ಭಾರತ ಉತ್ತಮವಾಗಿ ಬೌಲಿಂಗ್ ಮಾಡಿತು!
ಭಾರತ ನೀಡಿದ 169 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳಲದೆ ಅನಾಯಾಸವಾಗಿ ಚೇಸ್ ಮಾಡುವ ಮೂಲಕ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಭಾರತ ಬೌಲರ್ ಗಳಿಗೆ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ.
ಆದರೂ, ಭಾರತ ತಂಡ ಇಂಗ್ಲೆಂಡ್‌ಗಿಂತ ಉತ್ತಮವಾಗಿ ಬೌಲಿಂಗ್ ಮಾಡಿತು ಎಂದು ಬ್ರಾಡ್ ಹಾಗ್ ಹೇಳಿದ್ದಾರೆ. "ಭಾರತೀಯ ಬೌಲರ್‌ಗಳು ಇಂಗ್ಲಿಷ್ ಬೌಲರ್‌ಗಳಿಗಿಂತ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಭಾರತೀಯ ಬೌಲರ್ ಗಳು ಉತ್ತಮ ಲೆಂಗ್ತ್ ಲೈನ್‌ಗಳಲ್ಲಿ ಬೌಲ್ ಮಾಡಿದರು, ರನ್ ಗಳಿಸಲು ಇಂಗ್ಲೆಂಡ್ ಬ್ಯಾಟರ್ ಗಳು ಹೆಚ್ಚಿನ ಅಪಾಯಕಾರಿ ಹೊಡೆತಗಳನ್ನು ಆಡಿದರು. ಆದರೆ, ಭಾರತ ತಂಡ ಬೌಲಿಂಗ್‌ಗೆ ತಕ್ಕಂತೆ ಫೀಲ್ಡಿಂಗ್ ಸೆಟ್ ಮಾಡುವಲ್ಲಿ ಸೋತಿತು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ (ನವೆಂಬರ್ 13) ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್ ಮುಖಾಮುಖಿಯಾಗಲಿವೆ. 1992 ರ ವಿಶ್ವಕಪ್ ಫೈನಲ್‌ನಲ್ಲಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್‌ಗೆ ಅವಕಾಶವಿದೆ.