Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಗೋಲ್‌ಕೀಪರ್‌ಗೆ ಕೊರೊನಾ ವೈರಸ್

Australia Goalkeeper Mitchell Langerak Diagnosed With Covid-19

ಕೊರೊನಾ ವೈರಸ್ ಕ್ರೀಡಾಪಟುಗಳನ್ನು ಕಾಡುತ್ತಿದೆ. ಅದರಲ್ಲೂ ಫುಟ್ಬಾಲ್‌ನಲ್ಲಿ ಆನೇಕರು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಇದೀಗ ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಗೋಲ್ ಕೀಪರ್ ಮಿಚೆಲ್ ಲ್ಯಾಂಗೆರಕ್ ಗೆ ಕೋವಿಡ್-19 ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

ಆಸೀಸ್ ಫುಟ್ ಬಾಲ್ ಗೋಲ್ ಕೀಪರ್ ಮಿಚೆಲ್ ಜಪಾನ್ ನ ಜೆ ಲೀಗ್ ಪ್ರಥಮ ದರ್ಜೆ ಡಿವಿಷನ್ ಫುಟ್ಬಾಲ್ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಲೀಗ್‌ನ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಅವರು ಪ್ರತಿನಿಧಿಸಿದ್ದರು. ಈ ಸಂದರ್ಭದಲ್ಲಿ ಇವರಿಗೆ ಕೋವಿಡ್ 19 ಸೋಂಕು ತಗುಲಿದೆ ಎಂದು ಆಸೀಸ್ ಮಾಧ್ಯಮಗಳು ವರದಿ ಮಾಡಿದೆ.

ಈ ಪ್ರಕರಣದೊಂದಿಗೆ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ ಎರಡನೇ ಆಟಗಾರನಿಗೆ ಕೋವಿಡ್- 19 ಸೋಂಕು ತಗುಲಿದಂತಾಗಿದೆ. ಕಳೆದ ವಾರವಷ್ಟೇ ಅದೇ ತಂಡದ ಮತ್ತೋರ್ವ ಆಟಗಾರ ಮು ಕನಾಜಕಿಗೆ ಈ ವೈರಸ್‌ಗೆ ತುತ್ತಾಗಿದ್ದರು. ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಟಗಾರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು.

ಗೋಲ್‌ ಕೀಪರ್ ಮಿಚೆಲ್ ಲ್ಯಾಂಗೇರಕ್ ಕೊರೊನಾ ವೈರಸ್‌ಗೆ ತುತ್ತಾಗಿದ್ದರೂ, ಅವರಿಗೆ ಸೋಂಕಿನ ಯಾವುದೇ ಗುಣಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಲಾಗಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ.

ಆಸ್ಟ್ರೇಲಿಯಾದ ಪಕ್ಕದಲ್ಲಿರುವ ನ್ಯೂಜಿಲೆಂಡ್ ಈಗ ಕೊರೊನಾ ವೈರಸ್‌ನಿಂದ ಮುಕ್ತವಾಗಿರುವುದನ್ನು ಘೋಷಿಸಿದೆ. ಕಳೆದ ಎರಡು ವಾರಗಳ ಅವಧಿಯಲ್ಲಿ ನ್ಯೂಜಿಲೆನಡ್‌ನಲ್ಲಿ ಯಾವುದೇ ಹೊರ ಕೊರೊನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ಸಹಜ ಸ್ಥಿತಿಯತ್ತ ಮರಳಿದೆ.

Story first published: Tuesday, June 9, 2020, 17:27 [IST]
Other articles published on Jun 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+