Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shocking: ಬಿಸಿಲಿನ ಧಗೆಗೆ ಮೈದಾನದಲ್ಲೇ ಜೀವ ಕಳೆದುಕೊಂಡ ಪಾಕ್‌ ಕ್ರಿಕೆಟಿಗ!

ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ದೊಡ್ಡ ಅವಾಂತರ ಸಂಭವಿಸಿದೆ. ಪಾಕಿಸ್ತಾನ ಮೂಲದ ಕ್ರಿಕೆಟಿಗ ಮೈದಾನದಲ್ಲಿ ಹಠಾತ್ ಸಾವಿಗೀಡಾಗಿದ್ದಾರೆ. ಈ ಸಾವಿನ ಸುದ್ದಿಯಿಂದ ಕ್ರಿಕೆಟ್ ಜಗತ್ತಿನಲ್ಲಿ ಶೋಕದ ಅಲೆ ಹರಡಿದೆ. ಆಸ್ಟ್ರೇಲಿಯಾದ ಕಾನ್ಕಾರ್ಡಿಯಾ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ಲಬ್ ಮಟ್ಟದ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ ಮೂಲದ ಕ್ರಿಕೆಟಿಗ ಜುನೈದ್ ಜಾಫರ್ ಖಾನ್ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜುನೈದ್ ಜಾಫರ್ ಖಾನ್ ಸಾವಿಗೆ ಬಿಸಿಲಿನ ತೀವ್ರತೆ ಕಾರಣ ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಕಳೆದ ಶನಿವಾರ ಪ್ರಿನ್ಸ್ ಆಲ್ಫ್ರೆಡ್ ಓಲ್ಡ್ ಕಾಲೇಜಿಯನ್ಸ್ ವಿರುದ್ಧದ ಪಂದ್ಯದಲ್ಲಿ ಓಲ್ಡ್ ಕಾನ್ಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್ ಪರ 40 ವರ್ಷದ ಜುನೈದ್ ಆಡುತ್ತಿದ್ದರು. ಪಂದ್ಯದ ವೇಳೆ ಜುನೈದ್ 40 ಓವರ್‍‌ ಫೀಲ್ಡಿಂಗ್ ಮಾಡಿ, ಏಳು ಓವರ್‍‌ ಬ್ಯಾಟಿಂಗ್ ಮಾಡಿದ್ದರು. ಇದರಿಂದ ಸುಸ್ತಾಗಿದ್ದ ಜುನೈದ್, ಬಿಸಿಲಿನ ತಾಪವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಪ್ರಾಣ ಕಳೆದುಕೊಂಡಿದ್ದಾರೆ.

australia heatwave pakistan cricketer junaid zafar khan death news

ದಕ್ಷಿಣ ಆಸ್ಟ್ರೇಲಿಯಾದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಹವಾಮಾನ ವರದಿಗಳ ಪ್ರಕಾರ, ಜುನೈದ್ ಕ್ರಿಕೆಟ್ ಆಡುವಾಗ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿತ್ತು. ಅಡಿಲೇಡ್ ಟರ್ಫ್ ಕ್ರಿಕೆಟ್ ಅಸೋಸಿಯೇಷನ್ ನಿಯಮಗಳ ಪ್ರಕಾರ, ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಪಂದ್ಯಗಳನ್ನು ರದ್ದುಗೊಳಿಸಲಾಗುತ್ತದೆ. "ಇಂದು ಕಾನ್ಕಾರ್ಡಿಯಾ ಕಾಲೇಜ್ ಓವಲ್‌ನಲ್ಲಿ ಆಡುವಾಗ ಜುನೈದ್ ನಿಧನರಾಗಿರುವ ಸುದ್ದಿ ತಿಳಿದು ದುಃಖಿತರಾಗಿದ್ದೇವೆ. ವೈದ್ಯರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ಅವರು ಬದುಕುಳಿಯಲಿಲ್ಲ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ತಂಡದ ಸದಸ್ಯರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಎಂದು ಓಲ್ಡ್ ಕಾನ್ಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್‌ ತನ್ನ ಹೇಳಿಕೆ ಮೂಲಕ ಸಂತಾಪ ಸೂಚಿಸಿದೆ.

ಜುನೈದ್ 2013 ರಲ್ಲಿ ಐಟಿ ಉದ್ಯಮದಲ್ಲಿ ಕೆಲಸ ಮಾಡಲು ಪಾಕಿಸ್ತಾನದಿಂದ ಅಡಿಲೇಡ್‌ಗೆ ತೆರಳಿದರು. ಈಗ ಜುನೈದ್ ನಿಧನ ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳನ್ನು ಬೆಚ್ಚಿಬೀಳಿಸಿದೆ. ಬಿಸಿಲಿನ ಧಗೆಯಲ್ಲಿ ಕ್ರಿಕೆಟ್ ಆಡುವುದರಿಂದಾಗುವ ಅಪಾಯಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.

Story first published: Tuesday, March 18, 2025, 16:32 [IST]
Other articles published on Mar 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+