ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್)ಗೆ ಆಸ್ಟ್ರೇಲಿಯಾ ಕ್ರಿಕೆಟ್ ತನ್ನ ತಂಡವನ್ನು ಪ್ರಕಟಿಸಿದೆ. ಶೇನ್ ವ್ಯಾಟ್ಸನ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ಫೆಬ್ರವರಿ 24 ರಂದು ನವಿ ಮುಂಬೈನಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ವರದಿಗಳ ಪ್ರಕಾರ, ಈ ಲೀಗ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ಸಚಿನ್ ತೆಂಡೂಲ್ಕರ್, ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್, ಶ್ರೀಲಂಕಾದ ಕುಮಾರ್ ಸಂಗಕ್ಕಾರ ಮತ್ತು ಇಂಗ್ಲೆಂಡ್‌ನ ಇಯಾನ್ ಮಾರ್ಗನ್ ಸೇರಿದಂತೆ ದಿಗ್ಗಜ ಆಟಗಾರರ ತಂಡಗಳನ್ನು ಎದುರಿಸಲಿದೆ.
ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡವು ಶಾನ್ ಮಾರ್ಷ್, ಡ್ಯಾನ್ ಕ್ರಿಶ್ಚಿಯನ್, ಬೆನ್ ಕಟಿಂಗ್ ಮತ್ತು ಜೇಮ್ಸ್ ಪ್ಯಾಟಿನ್ಸನ್‌ರಂತಹ ಅನುಭವಿ ಆಟಗಾರರಿಂದ ತಂಡ ಕೂಡಿದೆ. ಅವರು ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಶಕ್ತಿಯಾಗಿದ್ದಾರೆ.

ನಾಯಕ ಶೇನ್ ವ್ಯಾಟ್ಸನ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. 'ಭಾರತಕ್ಕೆ ಹಿಂತಿರುಗುವುದು ಯಾವಾಗಲೂ ವಿಶೇಷವಾಗಿದೆ. ಇದು ನನಗೆ ಬಹಳಷ್ಟು ಉತ್ತಮ ನೆನಪುಗಳನ್ನು ಹೊಂದಿರುವ ಸ್ಥಳವಾಗಿದೆ. ಐಎಂಎಲ್‌ನಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ಅನ್ನು ಮುನ್ನಡೆಸುವುದು ಗೌರವ, ಮತ್ತು ಟ್ರೋಫಿಯನ್ನು ಎತ್ತುವುದು ನಮ್ಮ ಏಕೈಕ ಗುರಿಯಾಗಿದೆ ಎಂದು ಹೇಳಿದ್ದಾರೆ.
ಈ ಲೀಗ್ ಕ್ರಿಕೆಟ್ ಅಭಿಮಾನಿಗಳಿಗೆ ದಿಗ್ಗಜ ಆಟವನ್ನು ಮೆಲುಕು ಹಾಕಲು ಒಂದು ಸುವರ್ಣಾವಕಾಶವಾಗಿದೆ. ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವು ಸಚಿನ್ ತೆಂಡೂಲ್ಕರ್ ಅವರ ಕ್ಲಾಸಿಕ್ ಬ್ಯಾಟಿಂಗ್ ಮತ್ತು ಶೇನ್ ವ್ಯಾಟ್ಸನ್ ಅವರ ಮಾರಕ ಬೌಲಿಂಗ್ ನಡುವಿನ ಸ್ಪರ್ಧೆಯಾಗಲಿದೆ.
ಬ್ರಿಯಾನ್ ಲಾರಾ ಅವರ ಆಕ್ರಮಣಕಾರಿ ಬ್ಯಾಟಿಂಗ್ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ನಡುಕ ಹುಟ್ಟಿಸುವಂತಿದೆ. ಜಾಕ್ವೆಸ್ ಕಾಲಿಸ್ ಅವರ ಆಲ್‌ರೌಂಡರ್ ಶಕ್ತಿ ಪ್ರದರ್ಶನ ದಕ್ಷಿಣ ಆಫ್ರಿಕಾ ತಂಡವನ್ನು ಕಠಿಣ ಪ್ರತಿಸ್ಪರ್ಧಿಯನ್ನಾಗಿ ಮಾಡಿದೆ. ವಿಕೆಟ್ ಕೀಪರ್-ಬ್ಯಾಟರ್ ಆಗಿ ಕುಮಾರ್ ಸಂಗಕ್ಕಾರ ಅವರ ಅನುಭವವು ಶ್ರೀಲಂಕಾ ತಂಡಕ್ಕೆ ಪ್ರಮುಖ ಪಾತ್ರ ವಹಿಸಲಿದ್ದು, ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಕಠಿಣ ಹೋರಾಟ ನೀಡುವ ಗುರಿಯನ್ನು ಹೊಂದಿದೆ.
ಶೇನ್ ವ್ಯಾಟ್ಸನ್ (ನಾಯಕ), ಶಾನ್ ಮಾರ್ಷ್, ಡೇನಿಯಲ್ ಕ್ರಿಶ್ಚಿಯನ್, ಬೆನ್ ಕಟಿಂಗ್, ಜೇಮ್ಸ್ ಪ್ಯಾಟಿನ್ಸನ್, ಬೆನ್ ಹಿಲ್ಫೆನ್‌ಹೌಸ್, ಪೀಟರ್ ನೆವಿಲ್ಲೆ, ಬೆನ್ ಡಂಕ್, ನಾಥನ್ ರಿಯರ್ಡನ್, ಜೇಸನ್ ಕ್ರೆಜ್ಜಾ, ನಾಥನ್ ಕೌಲ್ಟರ್-ನೈಲ್, ಬೆನ್ ಲಾಫ್ಲಿನ್, ಕ್ಯಾಲಮ್ ಫರ್ಗುಸನ್, ಬ್ರೈಸ್ ಮೆಕ್‌ಗೈನ್ ಮತ್ತು ಕ್ಸೇವಿಯರ್ ಡೊಹೆರ್ಟಿ.
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಸೇರಿದಂತೆ ಒಟ್ಟು ಆರು ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸಲಿವೆ. ಈ ಲೀಗ್ ಫೆಬ್ರವರಿ 22, 2025 ರಂದು ಪ್ರಾರಂಭವಾಗಲಿದೆ.