Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Melbourne Test:ಯುವ ಆಟಗಾರನಿಗೆ ಗೇಟ್‌ ಪಾಸ್‌?, ಆಸೀಸ್‌ ತಂಡದಲ್ಲಿ ಬದಲಾವಣೆ ಸಾಧ್ಯತೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಮೆಲ್ಬರ್ನ್‌ನಲ್ಲಿ ನಡೆಯಲಿದೆ. ಈ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯನ್ನು ಉಭಯ ತಂಡಗಳು ಹೊಂದಿವೆ. ಈಗಾಗಲೇ ಎರಡೂ ತಂಡಗಳು ತಲಾ ಒಂದೊಂದು ಟೆಸ್ಟ್‌ ಗೆದ್ದಿದ್ದರಿಂದ ಪಂದ್ಯ ರೋಚಕತೆ ಹೆಚ್ಚಿಸಿದೆ. ನಾಲ್ಕನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ತಂಡ, ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಹೊಂದಿದೆ. ಹೀಗಾಗಿ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸಿವೆ.

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ನಾಥನ್ ಮೆಕ್‌ಸ್ವೀನಿ ಈ ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ಪರದಾಟ ನಡೆಸುತ್ತಿದ್ದಾರೆ. ಆಸೀಸ್‌ನ 25 ವರ್ಷದ ಮೆಕ್‌ಸ್ವೀನಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕಾಂಗರೂ ಓಪನರ್ ಇಡೀ ಸರಣಿಯಲ್ಲಿ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ವಿರುದ್ಧ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಈ ಸರಣಿಯಲ್ಲಿ ನಾಲ್ಕು ಬಾರಿ ಔಟ್ ಮಾಡಿದ್ದಾರೆ.

Australia May Drop Nathan McSweeney After Struggles Against Bumrah in Border-Gavaskar Series

ಆರಂಭಿಕ ನಾಥನ್ ಮೆಕ್‌ಸ್ವೀನಿ ಅವರ ಅಂಕಿ ಅಂಶಗಳನ್ನು ಗಮನಿಸಿದರೆ, ನಾಲ್ಕನೇ ಟೆಸ್ಟ್‌ನಲ್ಲಿ ಅವಕಾಶ ಸಿಗುವುದು ಡೌಟ್ ಎಂದು ಹೇಳಲಾಗುತ್ತದೆ. ಪರ್ತ್‌ನಿಂದ ಹಿಡಿದು ಬ್ರಿಸ್ಬೇನ್‌ ವರೆಗೂ ಆಡಿದ ಮೂರು ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಆಡಿದ ಆರು ಇನಿಂಗ್ಸ್‌ಗಳಲ್ಲಿ ನಾಥನ್ ಮೆಕ್‌ಸ್ವೀನಿ ಕೇವಲ ಮೂರು ಬಾರಿ ಡಬಲ್‌ ಡಿಜಿಟ್‌ ಮುಟ್ಟಿದ್ದಾರೆ. ಇನ್ನುಳಿದ ಮೂರು ಇನಿಂಗ್ಸ್‌ಗಳಲ್ಲಿ ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದ್ದಾರೆ. ನಾಥನ್ ಮೆಕ್‌ಸ್ವೀನಿ ಅವರು ಈ ಸರಣಿಯಲ್ಲಿ 39 ರನ್‌ಗಳಿಸಿದ್ದೇ ದೊಡ್ಡ ಸಾಧನೆ. ಬುಮ್ರಾ ವಿರುದ್ಧದ ಅವರ ಪ್ರದರ್ಶನದ ನೋಡಿದ ಬಳಿಕ ಆಸ್ಟ್ರೇಲಿಯಾ ಆಯ್ಕೆ ಸಮಿ ಅವರನ್ನು ತಂಡದಿಂದ ಕೈ ಬಿಡಬಹುದು. ಇಲ್ಲವೇ ಬ್ಯಾಟಿಂಗ್ ಕ್ರಮಾಂಕದಲ್ಲಿ ವ್ಯತ್ಯಾಸ ಮಾಡಬಹುದು ಎಂದು ಹೇಳಲಾಗುತ್ತಿದೆ.

ನಾಥನ್ ಮೆಕ್‌ಸ್ವೀನಿ ಹೇಗೆ ಸ್ಥಾನ?

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಆಸೀಸ್‌ ಪರ ಇನಿಂಗ್ಸ್‌ ಆರಂಭಿಸುವುದು ಯಾರು ಎಂಬ ಪ್ರಶ್ನೆಗಳು ಬಂದಾಗ, ಆಯ್ಕೆ ಸಮಿತಿ ಇವರಿಗೆ ಮಣೆ ಹಾಕಿತು. ಈ ಮೊದಲು ಸ್ಟೀವನ್‌ ಸ್ಮಿತ್‌ ಆಸೀಸ್‌ ಪರ ಕೆಲವು ಇನಿಂಗ್ಸ್‌ಗಳನ್ನು ಆರಂಭಿಸಿದ್ದರು. ಅಲ್ಲದೆ ಈ ವೇಳೆ ಅವರು ರನ್‌ಗಳಿಸಲು ವಿಫಲರಾಗಿದ್ದರಿಂದ, ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸೂಚಿಸಲಾಯಿತು. ಈ ವರ್ಷದ ಆರಂಭದಲ್ಲಿ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ, ಉಸ್ಮಾನ ಖವಾಜ ಅವರೊಂದಿಗೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಆಯ್ಕೆ ಸಮಿತಿ ನಾಥನ್ ಮೆಕ್‌ಸ್ವೀನಿ ಅವರಿಗೆ ಸ್ಥಾನ ನಿಡಿತ್ತು.

Australia May Drop Nathan McSweeney After Struggles Against Bumrah in Border-Gavaskar Series

ಇಂಗ್ಲಿಸ್‌ಗೆ ಸ್ಥಾನ?

ಯುವ ಆಟಗಾರ ನಾಥನ್ ಮೆಕ್‌ಸ್ವೀನಿ ಅವರು ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಇವರ ಸ್ಥಾನಕ್ಕೆ ಬೇರೆ ಆಟಗಾರನ ಹುಡುಕಾಟ ನಡೆದಿದೆ. ಇವರ ಸ್ಥಾನವನ್ನು ಜೋಶ್‌ ಇಂಗ್ಲಿಸ್‌ ತುಂಬವ ಸಾಧ್ಯತೆ ಇದೆ. ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರಿಂದ ಇಂಗ್ಲಿಸ್‌ಗೆ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ.

Story first published: Thursday, December 19, 2024, 18:29 [IST]
Other articles published on Dec 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+