Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಹ್ಯಾಂಡ್‌ಶೇಕ್‌ ಬೇಕಿತ್ತಾ? ಆಟಗಾರರ ವಿಡಿಯೋ ಸಖತ್ ವೈರಲ್

ಇತ್ತೀಚಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮುಖಾಮುಖಿ ಆದವು. ಈ ವೇಳೆ ಉಭಯ ಆಟಗಾರರ ಪ್ರದರ್ಶನಕ್ಕಿಂತ ಹ್ಯಾಂಡ್‌ಶೇಕ್‌ ವಿವಾದ ಹುಟ್ಟಿಕೊಂಡಿತು. ಈಗ ಭಾರತ ತಂಡದ ಇದನ್ನೆಲ್ಲಾ ಮರೆತು ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದೆ. ಆದರೂ ಸಹ ಈ ಹ್ಯಾಂಡ್‌ ಶೇಕ್‌ ಮತ್ತೆ ಏಕೆ ಮುನ್ನೆಲೆಗೆ ಬಂದಿದೆ ಎಂಬ ಗೊಂದಲ ನಿಮ್ಮ ತಲೆಯಲ್ಲಿ ಇರಬಹುದು ಅದಕ್ಕೆ ಉತ್ತರ ಇಲ್ಲಿದೆ.

ಆಸ್ಟ್ರೇಲಿಯಾ ಆಟಗಾರರು ಮೊದಲಿನಿಂದಲೂ ತಮ್ಮ ಹರಿತ ಹೇಳಿಕೆಗಳಿಂದ, ಮೈದಾನಕ್ಕೆ ಇಳಿಯುವ ಮೊದಲೇ ಎದುರಾಳಿಗೆ ನಡುಕ ಹುಟ್ಟಿಸಬಲ್ಲ ಸ್ವಭಾವದವರು. ಆದರೆ ಈ ಬಾರಿ ಅವರು ಟೀಮ್ ಇಂಡಿಯಾವನ್ನು ಕೆಣಕಿದ್ದು, ಬೇರೆ ಯಾವುದೇ ಆಟಗಾರನ ಹೆಸರು, ಪ್ರದರ್ಶನದ ಮೇಲೆ ಅಲ್ಲ. ಅದರೆ ಈ ಬಾರಿ ಆಸೀಸ್ ತಂಡ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಹ್ಯಾಂಡ್‌ ಶೇಕ್ ಮಾಡದನ್ನೇ ಇಟ್ಟುಕೊಂಡು ಒಂದು ವಿಡಿಯೋ ಮಾಡಿದೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

Australia Players Mock India s Handshake Snub After Asia Cup T20 Viral Video Sparks Controversy

ವಿಡಿಯೋದಲ್ಲಿ ಆಸ್ಟ್ರೇಲಿಯಾ ಪುರುಷರ ತಂಡದ ಆಟಗಾರರು ಹಾಗೂ ಮಹಿಳಾ ತಂಡದ ಆಟಗಾರರು ಸಹ ಕಾಣಬಹುದಾಗಿದೆ. ನಾಯಕ ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹ್ಯಾಜಲ್‌ವುಡ್ ಮತ್ತು ಅಲಿಸಾ ಹೀಲಿ ಅವರಂತಹ ಆಟಗಾರರು ಹ್ಯಾಂಡ್‌ಶೇಕ್‌ ಹೆಸರಿನಲ್ಲಿ ವಿಚಿತ್ರ ಸನ್ನೆಗಳನ್ನು ಮಾಡುವ ಮೂಲಕ, ಟೀಮ್ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಡಿಯೋದಲ್ಲಿ ಇರುವುದು ಏನು?

ಹ್ಯಾಂಡ್‌ ಶೇಕ್‌ ವಿವಾದದ ಪೋಸ್ಟ್‌ನ್ನು ಆಸ್ಟ್ರೇಲಿಯಾದ ಕ್ರೀಡಾ ಚಾನೆಲ್‌ ಕಾಯೋ ಸ್ಪೋರ್ಟ್ಸ್ ಏಕ್ಸ್‌ (X) ನಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋ ಅಪ್‌ಲೋಡ್‌ ಮಾಡುತ್ತಿದ್ದಂತೆ ವಿವಾದ ಹುಟ್ಟಿಕೊಂಡಿತು. ಆಗ ಚಾನೆಲ್‌ ಈ ವಿಡಿಯೋವನ್ನು ತೆಗೆದಿದೆ. ಇದರಿಂದ ಟೀಮ್ ಇಂಡಿಯಾ ಅಭಿಮಾನಿಗಳು ಕೋಪ ಗೊಂಡು, ಆಸೀಸ್‌ ಆಟಗಾರರು ಮಾಡಿದ ಜೋಕ್‌ ಎಂದು ಕರೆದರು. ಭಾರತ ತಂಡ ಆಸ್ಟ್ರೇಲಿಯಾಗೆ ಬರಲಿದೆ ಎಂದು ಹೇಳುವ ಮೂಲಕ ವಿಡಿಯೋ ಆರಂಭ ಆಗುತ್ತದೆ. ಭಾರತ ಬಲಿಷ್ಠ ತಂಡ. ನಾವು ಅವರ ವೀಕ್ನೆಸ್‌ ಕಂಡು ಹಿಡಿದಿದ್ದೇವೆ ಎನ್ನುವ ಮೂಲಕ ವಿಡಿಯೋ ಆರಂಭವಾಗಲಿದೆ. ಬಳಿಕ ಮತ್ತೊಬ್ಬ ನಿರೂಪಕ ಅವರು ಸಾಂಪ್ರದಾಯಿಕ ಸಾಂಪ್ರದಾಯಿಕ ಶುಭಾಶಯ (ಹ್ಯಾಂಡ್‌ಶೇಕ್) ಇಷ್ಟಪಡುವುದಿಲ್ಲ ಎಂದು ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಆಟಗಾರರು ಹೇಗೆ ಸನ್ನೆಯ ಮೂಲಕ ಆಟಗಾರರನ್ನು ಸ್ವಾಗತಿಸಬೇಕೆಂದು ಚರ್ಚಿಸುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಏಕದಿನ ಪಂದ್ಯ ಅಕ್ಟೋಬರ್‌ 19 ರಂದು ಆರಂಭವಾಗಲಿದೆ. ಆ ಬಳಿಕ ಉಭಯ ದೇಶಗಳ ನಡುವೆ 5 ಟಿ20 ಸರಣಿಯ ಪಂದ್ಯ ನಡೆಯಲಿದೆ. ಏಕದಿನ ಪಂದ್ಯದಲ್ಲಿ ಆಡಲು ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಆಸೀಸ್ ಪ್ರವಾಸ ಬೆಳೆಸಿದ್ದಾರೆ.

Story first published: Thursday, October 16, 2025, 9:46 [IST]
Other articles published on Oct 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+