
ಕೊರೊನಾ ವೈರಸ್ ಕಾರಣದಿಂದಾಗಿ ಸ್ಥಗಿತವಾಗಿರುವ ಕ್ರೀಡಾಕೂಟಗಳು ನಿರ್ಧಾರಕ್ಕೆ ಆರಂಭವಾಗಲು ಪೂರಕ ವಾತಾವರಣ ಸಿದ್ದವಾಗುತ್ತಿದೆ. ಇಂಗ್ಲೆಂಡ್ ಈಗಾಗಲೇ ಸರಣಿಗೆ ಸಿದ್ಧತೆಯನ್ನು ನಡೆಸುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲೂ ಕೂಡ ಕ್ರೀಡಾಕೂಟ ಮರು ಆರಂಭಕ್ಕೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ.
ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ನಿರ್ಬಂಧಗಳನ್ನು ಸಡಿಸಗೊಳಿಸಲು ತೀರ್ಮಾನಿಸಲಾಗಿದೆ. ಆಸ್ಟ್ರೇಲಿಯಾ ಪ್ರದಾನಿ ಸ್ಕಾಟ್ ಮಾರಿಸನ್ ಈ ಬಗ್ಗೆ ಪ್ರಕಟಿಸಿದ್ದು ಮುಂದಿನ ತಿಂಗಳಿಸಿನಿಂದ 40 ಸಾವಿರ ಸಾಮರ್ಥ್ಯವಿರುವ ಕ್ರೀಡಾಂಗಣಗಳಲ್ಲಿ 10 ಸಾವಿರದಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವುದು ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
"ಆಯೋಜನೆ ಮಾಡುವ ಸ್ಥಳಗಳು ದೊಡ್ಡದಾದ, ಮುಕ್ತ ಪ್ರದೇಶವಾಗಿರಬೇಕು. ಸೂಕ್ತ ದೂರದಲ್ಲಿ ಆಸನಗಳು ಇರಬೇಕಾಗುತ್ತದೆ.ಆಯೋಜಕರು ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗದುಕೊಳ್ಳುವ ಜವಾಬ್ಧಾರಿ ಹೊಂದಿರುತ್ತಾರೆ. ಇದರಿಂದ ಆ ಕಾರ್ಯಕ್ರಮಕ್ಕೆ ಯಾರು ಹಾಜರಾಗಿದ್ದರು ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ "ಎಂದು ಮಾರಿಸನ್ ಹೇಳಿದರು.
"ಈ ಸ್ವಾಗತಾರ್ಹ ಬದಲಾವಣೆಯನ್ನು ನಾವು ಆನಂದಿಸುತ್ತೇವೆ ಎಂದು ನನಗೆ ಖಾತ್ರಿಯಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಹೇಳಿದ್ದಾರೆ. ಅಂತ್ಯಕ್ರಿಯೆ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೂ ಹೆಚ್ಚಿ ಜನರು ಸೇರಲು ಅವಕಾಶ ಸಿಕ್ಕಂತಾಗಿದೆ. ಹೊರಾಂಗಣ ಸ್ಥಳಗಳಾಗಿದ್ದರೆ, ಸರಿಯಾದ ಆಸನದೊಂದಿಗೆ ಅವರು ದೊಡ್ಡ ಕೂಟಗಳನ್ನು ಏರ್ಪಡಿಸಬಹುದು ಎಂದು ಮಾರಿಸನ್ ತಿಳಿಸಿದ್ದಾರೆ.
ಈ ಬೆಳವಣಿಗೆ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿಯ ಆಯೋಜನೆಗೆ ಅವಕಾಶ ಸಿಕ್ಕಂತಾಗಿದೆ. ಸದ್ಯ ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಳ್ಳಬೇಕಿದ್ದ ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಐಸಿಸಿ ತನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಇದನ್ನು ಹೊರತು ಪಡಿಸಿ ದ್ವಿಪಕ್ಷೀಯ ಸರಣಿಗಳ ಆಯೋಜನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಜ್ಜುಗೊಳ್ಳಲಿದೆ.