ಪಂದ್ಯದ ವೇಳೆ ವಾಟರ್ ಬಾಯ್ ಆಗಿ ಮೈದಾನಕ್ಕಿಳಿದ ಆಸ್ಟ್ರೇಲಿಯಾ ಪ್ರಧಾನಿ!

ಕ್ಯಾನ್ಬೆರಾ, ಅಕ್ಟೋಬರ್ 25: ಕ್ರಿಕೆಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ವಾಟರ್ ಬಾಯ್ ಆಗಿ ಮೈದಾನಕ್ಕಿಳಿದು ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಗುರುವಾರ (ಅಕ್ಟೋಬರ್ 24) ನಡೆದ ಪ್ರೈಮ್ ಮಿನಿಸ್ಟರ್ XI ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಈ ಅಪರೂಪದ ದೃಶ್ಯ ಕಾಣ ಸಿಕ್ಕಿದೆ.
ಆಸ್ಟ್ರೇಲಿಯಾದ ಕ್ಯಾನ್ಬೆರಾದ ಮನುಕಾ ಓವಲ್‌ನಲ್ಲಿ ನಡೆದ ಇತ್ತಂಡಗಳ ಟಿ20ಐ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ ಮಾರಿಸನ್ ವಾಟರ್ ಬಾಯ್ ಆಗಿ ಮೈದಾನದಲ್ಲಿ ಓಡಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳ ಶ್ಲಾಘನೆಗೆ ಒಳಗಾಗಿದ್ದಾರೆ.
ಪಂದ್ಯದ ವೇಳೆ ಅಂದರೆ ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಮಾರಿಸನ್ ಪಾನೀಯ ಬಾಕ್ಸ್ ಕೈಯಲ್ಲಿಡಿದು ಮೈದಾನದಲ್ಲಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ದೇಶದ ಪ್ರಧಾನಿಯಾಗಿದ್ದರೂ ಕ್ರೀಡೆಯ ಬಗ್ಗೆ ಅಪಾರ ಪ್ರೀತಿಯಿಂದ ವಾಟರ್ ಬಾಯ್ ಆಗಿ ಕಾಣಿಸಿಕೊಂಡ ಮಾರಿಸನ್ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಂದ್ಹಾಗೆ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಶ್ರೀಲಂಕಾ ತಂಡ, ಭಾನುಕ ರಾಜಪಕ್ಷ 24, ಒಶಾದ ಫೆರ್ನಾಂಡೋ 38, ವಾನಿಂದು ಹಸರಂಗ 26 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 131 ರನ್ ಮಾಡಿತ್ತು. ಆಸೀಸ್ ತಂಡ, ಹೆನ್ರಿ ನಿಕೋಲ್ಸ್ 79, ಡೇನಿಯಲ್ ಕ್ರಿಸ್ಚಿಯನ್ 13 ರನ್‌ನೊಂದಿಗೆ 19.5ನೇ ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 132 ರನ್ ಪೇರಿಸಿ ಗೆಲುವನ್ನಾಚರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications