ಕೊರೊನಾ ವೈರಸ್ ಹಿನ್ನೆಲೆ ಆಸ್ಟ್ರೇಲಿಯಾ vs ಜಿಂಬಾಬ್ವೆ ಸರಣಿ ಮುಂದೂಡಿಕೆ

ಕೊರೊನಾ ವೈರಸ್‌ಗೆ ಮತ್ತೊಂದು ಕ್ರಿಕೆಟ್ ಸರಣಿ ಬಲಿಯಾಗಿದೆ. ಆಗಸ್ಟ್ ನಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯನ್ನು ಮುಂದೂಡಲಾಗಿದೆ. ಉಭಯ ದೇಶಗಳು ಚರ್ಚಿಸಿ ಈ ನಿರ್ಧಾರವನ್ನು ತೆಗದುಕೊಂಡಿದೆ ಎಂದು ವರದಿಯಾಗಿದೆ.
ಕೊರೊನಾ ವೈರಸ್‌ನ ಪ್ರಭಾವ ಇನ್ನೂ ಕಡಿಮೆಯಾಗದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಭಯ ದೇಶಗಳಿಗೂ ಬೇಸರವಾಗಿದೆ. ಆದರೆ ಆಟಗಾರರ, ಅಧಿಕಾರಿಗಳ, ಪ್ರೇಕ್ಷಕರ ಹಿತಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿಕೆ ನೀಡಿದ್ದಾರೆ.
ಜಿಂಬಾಬ್ವೆ ಆಸ್ಟ್ರೇಲಿಯಾಗೆ ಪ್ರಯಾಣವನ್ನು ಬೆಳೆಸಿ ಸರಣಿಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆಗಸ್ಟ್ 9ರಿಂದ 15ರವರೆಗೆ ಮೂರು ಏಕದಿನ ಪಂದ್ಯಗಳು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸದ್ಯ ಈ ಸರಣಿ ಮುಂದೂಡಿಕೆಯಾದ ಕಾರಣ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಸರಣಿ ಆಯೋಜನೆಗೆ ತೀರ್ಮಾನಿಸಲಾಗಿದೆ.
ಕೊರೊನಾ ವೈರಸ್ ತೀವ್ರ ರೂಪವನ್ನು ಪಡೆಯುವ ಮುನ್ನ ಆಸ್ಟ್ರೇಲಿಯಾ ಮಾರ್ಚ್ 13ರಂದು ತನ್ನ ಅಂತಿಮ ಏಕದಿನ ಪಂದ್ಯವಾಡಿತ್ತು. ನ್ಯೂಜಿಲೆಂಡ್ ವಿರುದ್ಧ ನಡೆದ ಆ ಪಂದ್ಯವನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು. ಅದಾದ ಬಳಿಕ ಕ್ರಿಕೆಟ್‌ನ ಎಲ್ಲಾ ಚಟುವಟಿಕೆಗಳು ಸ್ಥಬ್ಧವಾಗಿತ್ತು.
ಸದ್ಯ ಮತ್ತೆ ಕೆಲ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗುತ್ತಿದೆ. ಮುಂದಿನವಾರ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು ಕೊರೊನಾ ವೈರಸ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಪಂದ್ಯ ಇದಾಗಿರಲಿದೆ. ಮತ್ತೊಂದೆಡೆ ಪಾಕಿಸ್ತಾನ ಕೂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಹಾಗೂ ಟಿ20 ಸರಣಿಗೆ ಸಿದ್ದವಾಗಿದ್ದು ಇಂಗ್ಲೆಂಡ್‌ಗೆ ತಲುಪಿದೆ. ಆದರೆ ಆಸ್ಟ್ರೇಲಿಯಾ ಮುಂಜಾಗ್ರತಾ ಕ್ರಮವಾಗಿ ಇನ್ನೂ ಒಂದಷ್ಟು ಕಾಲ ಕಾದು ನೋಡಲು ಮುಂದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications