For Quick Alerts
ALLOW NOTIFICATIONS  
For Daily Alerts
 

ಬೌಲರ್‌ಗಳಿಗೆ ಹತಾಶೆ ಮೂಡಿಸುವ ಆಟಗಾರ ರೋಹಿತ್ ಎಂದ ಆಸಿಸ್ ವೇಗಿ

Australia Quick Explains The Frustrations of Bowling To Rohit Sharma

ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಎದುರಾಳಿ ಬೌಲರ್‌ಗಳನ್ನು ನಿದ್ದೆಗೆಡಿಸಿದ ಆಟಗಾರ. ಕಳೆದ ವರ್ಷ ರೋಹಿತ್ ತಮ್ಮ ಅದ್ಭುತ ಫಾರ್ಮ್‌ನಲ್ಲಿ ಎದುರಾಳಿಗಳುಗೆ ಅಕ್ಷರಶಃ ಸಿಂಹಸ್ವಪ್ನರಾಗಿದ್ದರು. ಶಾರ್ಟ್‌ ಬಾಲ್‌ಗಳಿಗೆ ಸುಲಲಿತವಾಗಿ ರನ್ ಬಾರಿಸುವ ಚಾಕಚಕ್ಯತೆ ಹೊಂದಿರುವ ರೋಹಿತ್ ಶರ್ಮಾ ಬಗ್ಗೆ ಆಸಿಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಮಾತನಾಡಿದ್ದಾರೆ.

ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡುವುದು ತುಂಬಾ ಕಠಿಣ. ರೋಹಿತ್ ಶರ್ಮಾ ಬಳಿ ಬಹಳಷ್ಟು ಅಸ್ತ್ರಗಳಿವೆ. ಲೆಂತ್ ಎಸೆತ ಅಥವಾ ಶಾರ್ಟ್ ಎಸೆತಗಳಿಗೆ ರೋಹಿತ್ ಸುಲಭವಾಗಿ ಉತ್ತರವನ್ನು ನೀಡುತ್ತಾರೆ. ಅದು ಅವರ ವಿಶೇಷ ಸಾಮರ್ಥ್ಯ ಎಂದು ಜೋಶ್ ಹ್ಯಾಜಲ್‌ವುಡ್ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

ರೋಹಿತ್ ಶರ್ಮಾ ಯಾವಾಗಲೂ ಚೆಂಡನ್ನು ಬಗ್ಗುಬಡಿಯುವಂತೆ ಕಾಣಿಸುವುದಿಲ್ಲ. ಅವರದ್ದು ಪಕ್ಕಾ ಕ್ಲಾಸ್ ಆಟ. ವೈಟ್‌ ಬಾಲ್‌ನಲ್ಲಿ ರೋಹಿತ್ ಆಟ ನಿಜಕ್ಕೂ ಅಸಾಧಾರಣ ಎಂದು ಆಸ್ಟ್ರೇಲಿಯಾವ ವೇಗಿ ಟಿಮ್ ಇಂಡಿಯಾ ಆಟಗಾರನ ಸಾಮರ್ಥ್ಯದ ಬಗ್ಗೆ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮುಕ್ತ ಕಂಠದಿಂದ ಹೊಗಳಿದ್ದಾರೆ.

ರೋಹಿತ್ ಖಂಡಿತವಾಗಿಯೂ ನಮ್ಮ ಕಾಲದ ಶ್ರೇಷ್ಠ ಆಟಗಾರ. ಬೌಲರ್‌ಗಳಿಗೆ ಹತಾಶೆ ಮೂಡಿಸುವಂತಾ ಆಟಗಾರ ಆತ ಎಂದು ಹ್ಯಾಜಲ್‌ವುಡ್ ಹೇಳಿದ್ದಾರೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಅವರಂತಾ ವೇಗವಾಗಿ ಚೆಂಡೆಸೆಯುವ ಆಟಗಾರರು ಕೂಡ ವೇಗವಾಗಿ ಬೌಲಂಗ್ ಕಾಣಿಸದಂತೆ ರೋಹಿತ್ ಮಾಡುತ್ತಾರೆ ಎಂದು ಹೇಳಿದರು.

ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. 40 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 61.33ರ ಸರಾಸರಿಯಲ್ಲಿ 2208 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 8 ಶತಕ ಹಾಗೂ 8 ಅರ್ಥ ಶರಕ ಕೂಡ ಸೇರಿದೆ. ರೋಹಿತ್ ಶರ್ಮಾ ಬಾರಸಿರುವ ದಾಖಲೆಯ ಮೂರು ದ್ವಿಶತಕಗಳ ಪೈಕಿ ಮೊದಲ ದ್ವಿಶತಕ ಆಸ್ಟ್ರೇಲಿಯಾ ವಿರುದ್ಧವೇ ಬಂದಿದೆ. 2013ರಲ್ಲಿ ಬೆಂಗಳೂಇನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಹಿತ್ ಆಸ್ಟ್ರೇಲಿಯಾ ವಿರುದ್ಧ 209 ರನ್ ಬಾರಿಸಿದ್ದರು.

Story first published: Friday, July 10, 2020, 11:04 [IST]
Other articles published on Jul 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+