Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸೀಸ್ ನ ವೇಗಿ ಶಾನ್ ಟೈಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ!

ಮೆಲ್ಬರ್ನ್‌, ಮಾರ್ಚ್ 28 : ವಿಶ್ವದ ಶ್ರೇಷ್ಠ ವೇಗದ ಬೌಲರ್‌ ಗಳ ಪಟ್ಟಿಯಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಶಾನ್ ಟೈಟ್ ಅವರು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.

ಇನ್ನಷ್ಟು ವರ್ಷ ಕ್ರಿಕೆಟ್ ಆಡುವ ಆಸೆಯಿತ್ತು. ಆದರೆ, ಪದೇ ಪದೇ ಗಾಯದ ಸಮಸ್ಯೆ ಕಾಡಿತು. ಮೈದಾನದಲ್ಲಿದ್ದಾಗ ಉತ್ತಮವಾಗಿ ಸಾಮರ್ಥ್ಯ ತೋರಿಸಲು ಸಾಧ್ಯವಾಗದೇ ಇದ್ದರೆ ಬೇಸರ ಕಾಡುತ್ತದೆ. ಆದ್ದರಿಂದ ನಿವೃತ್ತಿ ನಿರ್ಧಾರಕ್ಕೆ ಬಂದೆ' ಎಂದು ಟೈಟ್ ಹೇಳಿದ್ದಾರೆ.[ಆಸೀಸ್ ವೇಗಿ ಶಾನ್ ಹಾಗೂ ಭಾರತದ ನಂಟು 'ಟೈಟ್' ಆಯ್ತು!]

Australia quick Shaun Tait announces retirement from international cricket

34 ವರ್ಷದ ಶಾನ್ ಟೈಟ್ 2005ರಲ್ಲಿ ನಾಟಿಂಗ್ ಹ್ಯಾಮ್‌ ನಲ್ಲಿ ನಡೆದ ಇಂಗ್ಲೆಂಡ್‌ ಎದುರಿನ ಪಂದ್ಯ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

2010ರಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಗಂಟೆಗೆ 161.1 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. 2007ರಲ್ಲಿ ಇಂಗ್ಲೆಂಡ್‌ ಎದುರು ಮೊದಲ ಪಂದ್ಯವಾಡಿದ್ದ ಅವರು 2011ರಲ್ಲಿ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವಾಡಿದ್ದರು.

ಕಳೆದ ವರ್ಷ ಭಾರತ ವಿರುದ್ಧ ನಡೆದ ಟ್ವೆಂಟಿ-20 ಕ್ರಿಕೆಟ್‌ ಸರಣಿ ಅವರ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿದೆ. 2016-17ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೋಬರ್ಟ್ ಹರಿಕೇನ್ಸ್ ತಂಡದ ಪರ ಆಡಿರುವುದು ಟೈಟ್ ಅವರ ಕೊನೆಯ ಪಂದ್ಯವಾಗಿತ್ತು.

ಕಾಂಗರೂಗಳ ನಾಡಿನ ದೇಶಿ ಟೂರ್ನಿಯಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್, ಹೋಬರ್ಟ್ ಹರಿಕೇನ್ಸ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಚಿತ್ತಗಾಂಗ್ ಕಿಂಗ್ಸ್, ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ಹೀಗೆ ವಿವಿಧ ಟೂರ್ನಿಗಳಲ್ಲಿ ಟೈಟ್ ಆಡಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+