Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್‌ ಜಗತ್ತಿನಲ್ಲಿ ಮತ್ತೊಂದು ಸಲಿಂಗಿ ಮದುವೆ!

 Australia’s Nicola Hancock and New Zealand’s Hayley Jensen enter the wedlock

ದಾಂಪತ್ಯಕ್ಕೆ ಕಾಲಿಟ್ಟ ಆಸೀಸ್‌-ಕಿವೀಸ್‌ ಮಹಿಳಾ ಕ್ರಿಕೆಟರ್ಸ್‌

ಮೆಲ್ಬೋರ್ನ್‌, ಏಪ್ರಿಲ್‌ 19: ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಹೇಲೇ ಜೆನ್ಸೆನ್‌ ಆಸ್ಟ್ರೇಲಿಯಾದ ಯುವ ಆಟಗಾರ್ತಿ ನಿಕೊಲಾ ಹ್ಯಾಂಡ್‌ಕಾಕ್‌ ಅವರನ್ನು ಮದುವೆಯಾಗಿದ್ದಾರೆ.

ಅಂದಹಾಗೆ ಕ್ರಿಕೆಟ್‌ ಜಗತ್ತಿನಲ್ಲಿ ಮಹಿಳಾ ಆಟಗಾರ್ತಿಯರು ವಿವಾಹವಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ನ್ಯೂಜಿಲೆಂಡ್‌ ತಂಡದ ಏಮಿ ಸ್ಯಾಟರ್ತ್‌ವೇಟ್‌ ಮತ್ತು ಲೀ ತಹೂಹು ಮದುವೆಯಾಗಿದ್ದರು. ಬಳಿಕ ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರಾದ ಡ್ಯಾನ್‌ ವ್ಯಾನ್‌ ನೀ ಕೆರ್ಕ್‌ ಮತ್ತು ಮರಿಝೇನ್‌ ಕಾಪ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕ್ರಿಕೆಟ್‌ ಜಗತ್ತಿನಲ್ಲಿ ಮಿಂಚಿನ ಸಂಚಲನವನ್ನುಂಟು ಮಾಡಿದ್ದರು.

Dane van Niekerk and Marizanne Kapp

ಇದೀಗ ಈ ಪಟ್ಟಿಗೆ 26 ವರ್ಷದ ಬೌಲರ್‌ ಹೇಲೇ ಜೆನ್ಸೆನ್‌ ಮತ್ತು ಇನ್ನು ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸದ 23 ವರ್ಷದ ಆಟಗಾರ್ತಿ ನಿಕೊಲಾ ಸೇರಿಕೊಂಡಿದ್ದಾರೆ. ಮಹಿಳಾ ಬಿಗ್‌ಬ್ಯಾಷ್‌ ಲೀಗ್‌ ಕ್ರಿಕೆಟ್‌ ಟೂರ್ನಿ ವೇಳೆ ಈ ಇಬ್ಬರೂ ಆಟಗಾರ್ತಿಯರು ಮೆಲ್ಬೋರ್ನ್‌ ಸ್ಟಾರ್ಸ್‌ ಪರ ಆಡಿದ್ದರು. ಬಳಿಕ 3ನೇ ಆವೃತ್ತಿಯ ಮಹಿಳಾ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಜೆನ್ಸೆನ್‌ ಮೆಲ್ಬೋರ್ನ್‌ ರೆನೆಗೇಡ್ಸ್‌ ತಂಡ ಸೇರಿಕೊಂಡರು.

"ನನ್ನ ಕನಸಿನ ಕನ್ಯೆಯನ್ನು ಮದುವೆಯಾಗಲೇ ಬೇಕಾಯಿತು. ಈ ದಿನ ಅತ್ಯಂತ ಸಂಭ್ರಮ, ಸಡಗರ ಹಾಗೂ ಖಂಡಿತವಾಗಿಯೂ ಬಹಳ ಪ್ರೀತಿಯಿಂದ ಕೂಡಿತ್ತು,'' ಎಂದು ಹ್ಯಾಂಡ್‌ಕಾಕ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈಗಾಗಲೇ ಸಲಿಂಗಿಗಳ ವಿವಾಹಕ್ಕೆ ಕಾನೂನಾತ್ಮಕವಾಗಿ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ.

Story first published: Friday, April 19, 2019, 12:38 [IST]
Other articles published on Apr 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+