Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಪ್ರವಾಸ ಸರಣಿ ಸೆಪ್ಟೆಂಬರ್‌ 4ರಿಂದ ಆರಂಭ

Australia’s proposed tour of England to begin on September 4

ಸಿಡ್ನಿ, ಜುಲೈ 20: ಇಂಗ್ಲೆಂಡ್‌ಗೆ ಪ್ರವಾಸ ಹೊರಡಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅಲ್ಲಿ ಜೈವಿಕ ಸುರಕ್ಷಾ ತಾಣದಲ್ಲಿ 3 ಪಂದ್ಯಗಳ ಟಿ20ಐ ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇತ್ತಂಡಗಳ ಈ ಸರಣಿ ಸೆಪ್ಟೆಂಬರ್ 4ರಿಂದ ಆರಂಭಗೊಳ್ಳಲಿದೆ ಎಂದು ವರದಿ ಹೇಳಿದೆ.

ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾದ ಪ್ರವಾಸ ಸರಣಿಯ ಟಿ20 ಪಂದ್ಯಗಳು ಸೆಪ್ಟೆಂಬರ್ 4, 6 ಮತ್ತು 8ರಂದು ನಡೆಯಲಿದೆ. ಏಕದಿನ ಪಂದ್ಯಗಳು ಸೆಪ್ಟೆಂಬರ್ 10, 12 ಮತ್ತು 15ರಂದು ನಡೆಯಲಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. ಸದ್ಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ.

ವರದಿಯ ಪ್ರಕಾರ, ಆಸ್ಟ್ರೇಲಿಯಾ ತಂಡ ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಲಿದೆ. ಇಂಗ್ಲೆಂಡ್ vs ಆಸ್ಟ್ರೇಲಿಯಾ ನಡುವಿನ ಆರೂ ಪಂದ್ಯಗಳು ಸೌತಾಂಪ್ಟನ್ ಮತ್ತು ಮ್ಯಾನ್ಚೆಸ್ಟರ್‌ನಲ್ಲಿರುವ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ ಎನ್ನಲಾಗಿದೆ.

ಸೌತಾಂಪ್ಟನ್ ಮತ್ತು ಮ್ಯಾನ್ಚೆಸ್ಟರ್‌ನಲ್ಲಿ ಪಂದ್ಯ ನಡೆಯುವ ತಾಣದಲ್ಲೇ ಎರಡೂ ತಂಡಗಳ ಆಟಗಾರರಿಗೆ, ಪಂದ್ಯದ ಅಧಿಕಾರಿಗಳಿಗೆ ಮತ್ತು ಪ್ರಸಾರಕರಿಗೆ ತಂಗಲು ಹೋಟೆಲ್ ಇರಲಿದೆ. ಕಳೆದ ವಾರ ಇದೇ ಪ್ರವಾಸ ಸರಣಿಗೆ ಸಂಬಂಧಿಸಿ ಆಸ್ಟ್ರೇಲಿಯಾದಿಂದ 26 ಮಂದಿಯ ಪ್ರಾಥಮಿಕ ತಂಡ ಪ್ರಕಟಗೊಂಡಿತ್ತು.

Story first published: Tuesday, July 21, 2020, 9:39 [IST]
Other articles published on Jul 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+