ಕ್ರಿಕೆಟ್ ಜೀವನದಲ್ಲಿ ಆಸ್ಟ್ರೇಲಿಯಾದ ಪ್ರಭಾವ ಎಂತಹದ್ದು ಎಂಬುದನ್ನು ಬಹಿರಂಗ ಪಡಿಸಿರುವ ವಿರಾಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯ ಪರ್ತ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬೌಲಿಂಗ್ ಮಾಡಲು ಮುಂದಾಗಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಿದ್ದಾರೆ. ವಿರಾಟ್ ತಮ್ಮ ವೃತ್ತಿ ಜೀವನದಲ್ಲಿ ಆಸ್ಟ್ರೇಲಿಯಾದ ಪಾತ್ರ ಏನು ಎಂಬುದನ್ನು ಸಂದರ್ಶನದ ವೇಳೆ ಬಹಿರಂಗ ಪಡಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 7 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ವಿರಾಟ್ ತಮ್ಮ ನೆನಪಿನ ಬುತ್ತಿಯಿಂದ ಕೆಲವು ನೆನಪುಗಳನ್ನು ತೆರೆದಿಟ್ಟಿದ್ದಾರೆ. ಹೇಗೆ ಆಸ್ಟ್ರೇಲಿಯಾದ ಕ್ರಿಕೆಟ್ ವಾತಾವರಣವು ತಮ್ಮ ವೃತ್ತಿ ಜೀವನವನ್ನು ಹಾಗೂ ತಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ನಿರ್ಣಾಯಕವಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. ಇಲ್ಲಿನ ಸವಾಲಿನ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುವುದರಿಂದ ಮಾನಸಿಕ ಶಕ್ತಿ ಹೆಚ್ಚಿತು, ಕ್ರಿಕೆಟಿಗರಾಗಿ ಬೆಳೆಯಲು ಸಹಾಯವಾಯಿತು ಎಂದು ಕೊಹ್ಲಿ ತಿಳಿಸಿದ್ದಾರೆ.

ಬಾಲ್ಯದಲ್ಲಿ ಇಲ್ಲಿ ಟೆಸ್ಟ್ ಪಂದ್ಯಗಳು ನಡೆಯುತ್ತಿದ್ದಾಗವ ಆಸ್ಟ್ರೇಲಿಯಾದಲ್ಲಿನ ಪಂದ್ಯಗಳನ್ನು ವೀಕ್ಷಿಸಲು ಬೆಳಗ್ಗೆ ಎಳುತ್ತಿದ್ದೆ. ಈ ವೇಳೆ ಚೆಂಡಿನ ಬೌನ್ಸ್ ಹಾಗೂ ಆಕ್ರಮಣಶೀಲತೆಯನ್ನು ನೋಡುತ್ತಿದ್ದೇ. ಈ ಪರಿಸ್ಥಿತಿಗಳಲ್ಲಿ ಚೆನ್ನಾಗಿ ಆಡುವಲ್ಲಿ ಯಶಸ್ವಿಯಾದರೆ, ಅದು ನಮಗೆ ಹೆಮ್ಮೆ ಎಂದು ನಾನು ಭಾವಿಸಿದ್ದೆ. ಭಾರತದ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಆಟವನ್ನು ನೋಡುವುದೇ ಸ್ಪೂರ್ತಿ ಪಡೆದ ಎಂದಿದ್ದಾರೆ.
ಆಸೀಸ್ ವಾತಾವರಣದ ಬಗ್ಗೆ ಕೊಹ್ಲಿ ಹೇಳಿದ್ದೇನು?
ಈ ವಾತಾವರಣದಲ್ಲಿ ಆಡುವುದು ಕಷ್ಟ. ಪಂದ್ಯಗಳನ್ನು ಟಿವಿಯಲ್ಲಿ ನೋಡುವುದು ಸುಲಭ. ಆದರೆ ಇಲ್ಲಿ ಆಡುವುದರಿಂದ ಮಾನಸಿಕವಾಗಿ ಬಲಶಾಲಿಯಾಗಲು ಸಹಾಯ ಮಾಡಿತು. ಜನರನ್ನು ನಿಮ್ಮನ್ನು ಟೀಕಿಸಿದರೆ, ಈ ಸವಾಲನ್ನು ಸಹ ಮೆಟ್ಟಿನಿಲ್ಲುವುದೇ ದಿನವೂ ಹೊಸತಾಗಿತ್ತು ಎಂದಿದ್ದಾರೆ. ಇನ್ನು ಇಂಗ್ಲೆಂಡ್ ಮಾಜಿ ನಾಯಕ ಕೇವಿನ್ ಪೀಟರ್ಸನ್ ಅವರೊಂದಿಗೆ ಈ ಬಗ್ಗೆ ಹಲವು ಬಾರಿ ಚರ್ಚೆ ಮಾಡಿದ್ದೇನೆ ಎಂದು ಕೊಹ್ಲಿ ಬಹಿರಂಗ ಪಡಿಸಿದ್ದಾರೆ.

ಸವಾಲಿನ ಸಂದರ್ಭಗಳಲ್ಲಿ ಆಟದಲ್ಲಿ 120 ಪ್ರತಿಷತ ಪ್ರಯತ್ನ ನೀಡುವುದನ್ನು ಬಿಟ್ಟರೆ ಬೇರೆ ಯಾವುದೇ ದಾರಿ ಇರಲಿಲ್ಲ. ಈ ದೇಶದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡುವಂತೆ ಪರಿಸ್ಥಿತಿಗಳು ಸಹ ಒತ್ತಾಯಿಸಿದವು. ಇನ್ನು ಆಸ್ಟ್ರೇಲಿಯನ್ನರು ಹಾವ ಭಾವ ಅವರ ಮೇಲೆ ಗೌರವ ಬರುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಆಡುವುದು ನನಗೆ ಮೊದಲಿನಿಂದಲೂ ಖುಷಿ ನೀಡಿದೆ. ವೇಗದ ಮತ್ತು ಬೌನ್ಸಿ ವಿಕೆಟ್ ಪಿಚ್‌ಗಳು ಬ್ಯಾಟರ್‌ಗಳಿಗೂ ಸಹಾಯಕ. ಬ್ಯಾಟರ್ ಈ ಪಿಚ್‌ಗಳ ಮೇಲೆ ಸ್ಮರಣೀಯ ಇನಿಂಗ್ಸ್ ಆಡಿದರೆ, ಬಹು ದಿನಗಳ ಆ ನೆನಪು ಇರುತ್ತದೆ ಎಂಬ ಅರ್ಥದಲ್ಲಿ ವಿರಾಟ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications