For Quick Alerts
ALLOW NOTIFICATIONS  
For Daily Alerts
 

ವೇಗವಾಗಿ ಸಾವಿರ ರನ್‌ ಗಡಿ ಹಾಕಿದ ಟ್ರಾವಿಸ್ ಹೆಡ್‌, ಮ್ಯಾಕ್ಸ್‌ವೆಲ್‌, ವ್ಯಾಟ್ಸನ್‌ ದಾಖಲೆ ಉಡೀಸ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಇತ್ತೀಚಿಗೆ ವೇಗವಾಗಿ ಅರ್ಧಶತಕ ಬಾರಿಸಿ ಸುದ್ದಿಯಲ್ಲಿದ್ದರು. ಈಗ ಇವರ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸ್ಕಾಟ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಟ್ರಾವಿಸ್ ಹೆಡ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ಸ್ಕಾಟ್ಲೆಂಡ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ, ಆತಿಥೇಯ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಸ್ಕಾಟ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೂರನೇ ಟಿ20 ಪಂದ್ಯ ಶನಿವಾರ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 149 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸೀಸ್‌ 16.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 153 ರನ್‌ ಸೇರಿಸಿ ಜಯ ಸಾಧಿಸಿತು. ಪ್ರವಾಸಿ ತಂಡ ಸರಣಿಯನ್ನು 3-0ಯಿಂದ ಗೆದ್ದುಕೊಂಡಿತು.

Australia Sweeps Scotland 3-0 Travis Head Becomes 2nd Fastest Aussie to 1000 T20I Runs

ಆರ್‌ಸಿಬಿ ಪ್ಲೇಯರ್‌ ಆರ್ಭಟ

ಈ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯರ್‌ ಕ್ಯಾಮರೂನ್‌ ಗ್ರೀನ್‌ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಕೇವಲ 39 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ ಅಜೇಯ 62 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅಮೋಘ ದಾಖೆಯನ್ನು ಮಾಡಿದ್ದಾರೆ.

ಹೆಡ್ ಮುಡಿಗೆ ಮತ್ತೊಂದು ಗರಿ

ಟ್ರಾವಿಸ್‌ ಹೆಡ್ ಈ ಪಂದ್ಯದಲ್ಲಿ ಕೇವಲ 12 ರನ್ ಮಾತ್ರ ಸಿಡಿಸಿದರು. ಆದರೂ ಅವರು ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಹೆಡ್‌, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಶೇನ್ ವ್ಯಾಟ್ಸನ್ ಈ ಒಂದು ದಾಖಲೆಯನ್ನು ಹಿಂದಿಕ್ಕಿದ್ದಾರೆ. ಟ್ರಾವಿಸ್ ಹೆಡ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್‌ ಸಿಡಿಸಿದ ಆಸ್ಟ್ರೇಲಿಯಾದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ನಿರ್ಮಿಸಿದ್ದಾರೆ. ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟ್ರಾವಿಸ್ ಹೆಡ್‌ ಮೊದಲ ಪಂದ್ಯದಲ್ಲಿ 80 ರನ್‌ ಸಿಡಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು.

ಆಸ್ಟ್ರೇಲಿಯಾ ಪರ ಅತಿ ವೇಗವಾಗಿ ಸಾವಿರ ರನ್‌ಗಳ ಗಡಿ ದಾಟಿದ ಎರಡನೇ ಆಟಗಾರ ಟ್ರಾವಿಡ್‌ ಹೆಡ್. ಇವರು 35 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವೇಗವಾಗಿ ಸಾವಿರ ರನ್‌ಗಳನ್ನು ದಾಟಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಏರಾನ್ ಫಿಂಚ್ ಅವರು ಇದ್ದಾರೆ. ಈ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಶೇನ್ ವ್ಯಾಟ್ಸನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರುಗಳಿವೆ. ಇವರು 36 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್‌ಗಳ ಗಡಿ ದಾಟಿದವರ ಪಟ್ಟಿಯಲ್ಲಿ ಡೇವಿಡ್ ಮಲಾನ್‌ ಮೊದಲ ಸ್ಥಾನದಲ್ಲಿದ್ದು, ಇವರು 24 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Story first published: Saturday, September 7, 2024, 23:29 [IST]
Other articles published on Sep 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+