
ಬಿಸ್ಬೇನ್, ನವೆಂಬರ್ 22: ಪ್ರವಾಸಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ 14 ಮಂದಿ ಆಟಗಾರರ ಆಸ್ಟ್ರೇಲಿಯಾ ತಂಡವನ್ನು ಗುರುವಾರ(ನವೆಂಬರ್ 22) ದಂದು ಪ್ರಕಟಿಸಲಾಗಿದೆ. ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಪ್ರಕಟಿಸಿದ ತಂಡದಲ್ಲಿ ಮಾರ್ಕಸ್ ಮಾರಿಸ್ ಹೊಸ ಮುಖವಾಗಿದ್ದಾರೆ.
ಗ್ರೆಗ್ ಚಾಪೆಲ್, ಟ್ರೆವರ್ ಹೊನ್ಸ್ ಹಾಗೂ ಲ್ಯಾಂಗರ್ ಅವರಿದ್ದ ರಾಷ್ಟ್ರೀಯ ಆಯ್ಕೆ ಸಮಿತಿ ಸಭೆ ಸೇರಿ, ತಂಡವನ್ನು ಆಯ್ಕೆ ಮಾಡಿದ್ದಾರೆ.
ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಪಡೆಯು ಮೊದಲಿಗೆ 3 ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ನಂತರ 4 ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಲಿದೆ.
ನವೆಂಬರ್ 21ರಂದು ಬ್ರಿಸ್ಬೇನ್ ನಲ್ಲಿ ಮೊದಲ ಟಿ20ಐ ನಡೆಯಲಿದೆ. ಡಿಸೆಂಬರ್ 6 ರಿಂದ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್ ಒವಲ್ ನಲ್ಲಿ ಆರಂಭಗೊಳ್ಳಲಿದೆ. ಕೊನೆಯ ಪಂದ್ಯ ಜನವರಿ 03ರಂದು ನಡೆಯಲಿದೆ.
ಭಾರತ ತಂಡ : ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರೋಹಿತ್ ಶರ್ಮ, ರಿಷಬ್ ಪಂತ್, ಪಾರ್ಥೀವ್ ಪಟೇಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್.
ಆಸ್ಟ್ರೇಲಿಯಾ ತಂಡ : ಅರೋನ್ ಫಿಂಚ್, ಮಾರ್ಕಸ್ ಹ್ಯಾರೀ, ಉಸ್ಮಾನ್ ಖವಾಜ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ ಕಾಂಬ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್ ಪೈನ್ (ನಾಯಕ), ಪಾಟ್ ಕುಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹಜೇಲ್ ವುಡ್, ನಾಥನ್ ಲಯಾನ್, ಟ್ರೆಮೈನ್, ಪೀಟರ್ ಸಿಡ್ಲ್.
ಡೊಮೈನ್ ಟೆಸ್ಟ್ ಸರಣಿ ವೇಳಾಪಟ್ಟಿ
* ಡಿಸೆಂಬರ್ 6-10 : ಅಡಿಲೇಡ್ ಒವಲ್, 5.30 AM (IST)
* ಡಿಸೆಂಬರ್ 14-18 : ಆಪ್ಟಸ್ ಸ್ಟೇಡಿಯಂ, ಪರ್ತ್ 7.50 AM (IST)
* ಡಿಸೆಂಬರ್ 26-30 : ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್(ಎಂಸಿಜಿ). 5.00 AM IST
* ಜನವರಿ 3-7 : ಸಿಡ್ನಿ ಕ್ರಿಕೆಟ್ ಗ್ರೌಂಡ್(ಎಸ್ ಸಿಜಿ), 5.00 AM IST