ಭಾರತ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಸಿಡ್ನಿ, ಜನವರಿ 4: ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಪೀಟರ್ ಸಿಡ್ಲ್, ನಥಾನ್ ಲಿಯಾನ್ ಮತ್ತು ಉಸ್ಮಾನ್ ಖವಾಜಾ ಅವರನ್ನು ಮರಳಿ ಸೇರಿಸಿಕೊಳ್ಳಲಾಗಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ತಂಡದಲ್ಲಿದ್ದ ಕ್ರಿಸ್ ಲಿನ್, ಡಿಆರ್ಸಿ ಶಾರ್ಟ್, ಬೆನ್ ಮೆಕ್‌ಡರ್ಮೆಟ್, ಟ್ರಾವಿಸ್ ಹೆಡ್ ಮತ್ತು ಅಷ್ಟೋನ್ ಅಗರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ವೇಗಿ ನಥಾನ್ ಕೌಲ್ಟರ್ ನೈಲ್ ಗಾಯಗೊಂಡಿರುವ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಮುಖ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಜೆಯ್ ರಿಚರ್ಡ್ಸನ್, ಜೇಸನ್ ಬೆಹ್ರೆಂಡೊರ್ಫ್, ಪೀಟರ್ ಸಿಡ್ಲ್ ಮತ್ತು ಬಿಲ್ಲಿ ಸ್ಟಾನ್ಲೇಕ್ ವೇಗದ ಬೌಲಿಂಗ್ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.
ಪೀಟರ್ ಸಿಡ್ಲ್ ಎಂಟು ವರ್ಷದ ಬಳಿಕ ಮೊದಲ ಏಕದಿನ ಪಂದ್ಯವನ್ನು ಆಡುವ ನಿರೀಕ್ಷೆಯಿದೆ. 2010ರಲ್ಲಿ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಒಂದು ವೇಳೆ ಅವರು ಮೂರು ಪಂದ್ಯಗಳಲ್ಲಿ ಒಂದರಲ್ಲಿ ಆಡಿದರೂ, ಅತ್ಯಂತ ದೀರ್ಘಕಾಲದ ಅಂತರ ಬಳಿಕ ಏಕದಿನ ಪಂದ್ಯವನ್ನಾಡಿದ ಆಸ್ಟ್ರೇಲಿಯಾದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಟಿಮ್ ಜೋಹ್ರೆರ್ 6 ವರ್ಷ 282 ದಿನದ ಬಳಿಕ ತಂಡಕ್ಕೆ ಮರಳಿದ ದಾಖಲೆ ಹೊಂದಿದ್ದಾರೆ.
ತಂಡ ಹೀಗಿದೆ:
ಆರೋನ್ ಫಿಂಚ್ (ನಾಯಕ), ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ ಸ್ಕಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೆಯ್ ರಿಚರ್ಡ್ಸನ್, ಬಿಲ್ಲಿ ಸ್ಟಾನ್ಲೇಕ್, ಜೇಸನ್ ಬೆಹ್ರೆಂಡೊರ್ಫ್, ಪೀಟರ್ ಸಿಡ್ಲ್, ನಥಾನ್ ಲಿಯಾನ್ ಮತ್ತು ಆಡಂ ಜಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications