Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India vs Australia: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಉಚಿತವಾಗಿ ಎಲ್ಲಿ ವೀಕ್ಷಣೆ ಮಾಡಬಹುದು?

2023ರ ಏಷ್ಯಾ ಕಪ್ ಪಂದ್ಯಾವಳಿಯ ನಂತರ ಭಾರತ ಕ್ರಿಕೆಟ್ ತಂಡ ಮತ್ತೊಂದು ದ್ವಿಪಕ್ಷೀಯ ಏಕದಿನ ಸರಣಿಗೆ ಸಜ್ಜಾಗಲಿದೆ. ಭಾರತದಲ್ಲೇ ನಡೆಯುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಈ ಸರಣಿ ಅತ್ಯಂತ ಉತ್ತಮ ತಯಾರಿ ಎನಿಸಲಿದೆ.

ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಆತಿಥ್ಯ ವಹಿಸಲಿದೆ. ಅಕ್ಟೋಬರ್ 22ರಿಂದ ಏಕದಿನ ಸರಣಿ ಆರಂಭವಾಗಲಿದೆ.

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯನ್ನು ಭಾರತೀಯ ಮಾಧ್ಯಮ ಸಂಸ್ಥೆ Viacom18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ JioCinema ದಲ್ಲಿ ಉಚಿತವಾಗಿ ಲೈವ್-ಸ್ಟ್ರೀಮಿಂಗ್ ಮಾಡಲಾಗುತ್ತದೆ. ಮಾಧ್ಯಮ ಹಕ್ಕುಗಳ ಋತುವಿನಲ್ಲಿ, ಇದು ಅಂತಾರಾಷ್ಟ್ರೀಯ ಸರಣಿಯ ಮೊದಲ ಕವರೇಜ್ ಆಗಿರಲಿದೆ.

australia-tour-of-india

ಜಿಯೋಸಿನಿಮಾ (JioCinema) ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ಬೆಂಗಾಲಿ, ಭೋಜ್‌ಪುರಿ, ಪಂಜಾಬಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ದೇಶದ 11 ವಿವಿಧ ಭಾಷೆಗಳಲ್ಲಿ ಪಂದ್ಯಗಳನ್ನು ನೇರಪ್ರಸಾರ ಮಾಡಲಾಗುತ್ತದೆ.

ಎಕ್ಸ್‌ಫರ್ಟ್ ಪ್ಯಾನೆಲ್ ರಚಿಸುವ ಸಲುವಾಗಿ, JioCinema ಓಟಿಟಿ ಪ್ಲಾಟ್‌ಫಾರ್ಮ್ ಸುರೇಶ್ ರೈನಾ, ಕೇದಾರ್ ಜಾಧವ್, ಆಕಾಶ್ ಚೋಪ್ರಾ, ಅಮಿತ್ ಮಿಶ್ರಾ, ಹನುಮ ವಿಹಾರಿ, ಕಿರಣ್ ಮೋರೆ, ಅನಿರುದ್ಧ್ ಶ್ರೀಕಾಂತ್ ಮತ್ತು ಸರಣ್‌ದೀಪ್ ಸಿಂಗ್ ಅವರಂತಹ ಕ್ರಿಕೆಟ್ ಲೆಜೆಂಡ್‌ಗಳನ್ನು ಸಹ ನೇಮಿಸಿಕೊಂಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ Viacom18 ಮಾಧ್ಯಮ ಸಂಸ್ಥೆಗೆ ತವರಿನ ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳ ಮಾಧ್ಯಮ ಹಕ್ಕುಗಳನ್ನು ನೀಡಿದೆ.

ಈ ಒಪ್ಪಂದದ ಅವಧಿಯು ಸೆಪ್ಟೆಂಬರ್ 2023ರಿಂದ ಮಾರ್ಚ್ 2028ರವರೆಗೆ ಇರಲಿದೆ. Viacom18 ಭಾರತದ ಮಾಧ್ಯಮ ಹಕ್ಕುಗಳಿಗಾಗಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾವನ್ನು ಹಿಂದಿಕ್ಕಿದೆ. ಪ್ರತಿ ಪಂದ್ಯಕ್ಕೆ 67.8 ಕೋಟಿ ರೂಪಾಯಿ ಪಾವತಿಸಲಿದೆ. ಆದರೆ, ಡಿಸ್ನಿ+ ಸ್ಟಾರ್ ಬಿಡ್ಡಿಂಗ್‌ನಿಂದ ಹಿಂದೆ ಸರಿದಿತ್ತು ಎಂದು ವರದಿಯಾಗಿದೆ.

australia-tour-of-india

Viacom18 ಸ್ಪೋರ್ಟ್ಸ್‌ನ ಸಿಇಒ ಅನಿಲ್ ಜಯರಾಜ್, "ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಸಾಮರ್ಥ್ಯದೊಂದಿಗೆ ಸಾಂಪ್ರದಾಯಿಕ ಟಿವಿ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಕ್ರೀಡೆಗಳನ್ನು ಹೇಗೆ ಅನುಭವಿಸಲಾಗುತ್ತದೆ ಎಂಬುದನ್ನು ಕ್ರಾಂತಿಗೊಳಿಸುವುದು ಸಂಸ್ಥೆಯ ಬದ್ಧತೆಯಾಗಿದೆ," ಎಂದು ತಿಳಿಸಿದರು.

Viacom18 ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ತವರಿನ ಪಂದ್ಯಗಳ (ಪುರುಷ ಮತ್ತು ಮಹಿಳಾ ತಂಡಗಳೆರಡೂ) ಡಿಜಿಟಲ್ ಮತ್ತು ಟಿವಿ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

ಪಂದ್ಯಗಳು ಕಲರ್ಸ್ ತಮಿಳು (ತಮಿಳು), ಕಲರ್ಸ್ ಬಾಂಗ್ಲಾ ಸಿನಿಮಾ (ಬಂಗಾಳಿ), ಕಲರ್ಸ್ ಕನ್ನಡ ಸಿನಿಮಾ (ಕನ್ನಡ), ಕಲರ್ಸ್ ಸಿನೆಪ್ಲೆಕ್ಸ್ ಸೂಪರ್‌ಹಿಟ್ಸ್ (ಹಿಂದಿ), ಸ್ಪೋರ್ಟ್ಸ್ 18-1 ಎಸ್‌ಡಿ ಮತ್ತು ಸ್ಪೋರ್ಟ್ಸ್ 18-1 ಎಚ್‌ಡಿ (ಇಂಗ್ಲಿಷ್) ಸೇರಿದಂತೆ ಟಿವಿ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದೆ.

ಅಕ್ಟೋಬರ್ 5ರಂದು ಆರಂಭಗೊಳ್ಳುವ ಬಹು ನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಆಸ್ಟ್ರೇಲಿಯಾ ಮತ್ತು ಭಾರತ ತಯಾರಿ ನಡೆಸುತ್ತಿರುವಾಗ ಮೂರು ಪಂದ್ಯಗಳ ಏಕದಿನ ಸರಣಿಯು ನಿರ್ಣಾಯಕವೆನಿಸಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ ಸೆಪ್ಟೆಂಬರ್ 22ರಂದು ನಡೆಯಲಿದ್ದರೆ, ಉಳಿದೆರಡು ಪಂದ್ಯಗಳು ಕ್ರಮವಾಗಿ ಸೆಪ್ಟೆಂಬರ್ 24 ಮತ್ತು 27ರಂದು ನಡೆಯಲಿದೆ. ಮೊಹಾಲಿ, ಇಂದೋರ್ ಮತ್ತು ರಾಜ್‌ಕೋಟ್‌ನ ಮೈದಾನಗಳು ತಲಾ ಒಂದೊಂದು ಪಂದ್ಯಗಳನ್ನು ಆಯೋಜಿಸಲಿವೆ.

ವಿಶ್ವಕಪ್ ಪಂದ್ಯಾವಳಿ ಮುಂಚಿತವಾಗಿ ಭಾರತೀಯ ಪರಿಸ್ಥಿತಿ ಮತ್ತು ಪಿಚ್‌ಗಳಲ್ಲಿ ಈ ಸರಣಿಯ ನಿರ್ಣಾಯಕ ತಯಾರಿಯಿಂದ ಆಸ್ಟ್ರೇಲಿಯಾ ತಂಡ ಪ್ರಯೋಜನ ಪಡೆಯಲಿದೆ.

Story first published: Thursday, September 14, 2023, 15:53 [IST]
Other articles published on Sep 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+