ಬೆಂಗಳೂರು ಟ್ರಾಫಿಕ್ ಪೊಲೀಸರ ಕಣ್ಣಿಗೆ ಬಿದ್ದ ಅಂಪೈರ್ ಜಾನ್
ಬೆಂಗಳೂರು, ಜ. 20: ಕ್ಯಾನ್ ಬೆರಾದ ಮನುಕಾ ಒವಲ್ ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಪಂದ್ಯದಲ್ಲಿ ಉಭಯ ತಂಡದ ಬ್ಯಾಟ್ಸ್ ಮನ್ ಗಳು ಭರ್ಜರಿ ಆಟ ಪ್ರದರ್ಶಿಸಿದರು. ಇದರ ಜೊತೆಗೆ ಅಂಪೈರ್ ಜಾನ್ ವಾರ್ಡ್ ಎಲ್ಲರ ಗಮನ ಸೆಳೆದರು. ನಾಲ್ಕನೇ ಪಂದ್ಯದಲ್ಲಿ ಹೆಲ್ಮೆಟ್ ಧರಿಸಿ ನಿಂತ ಜಾನ್ ವಾರ್ಡ್ ಅವರನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಹಿಡಿದು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಜನವರಿ 20ರಿಂದ ವಾಹನ ಸವಾರರಿಗೆ(ಹಿಂಬದಿ ಕುಳಿತವರಿಗೂ ಸೇರಿ) ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ನಿಯಮ ಮೀರಿ ಸಿಕ್ಕಿಬಿದ್ದವರಿಗೆ ಮೊದಲ ಬಾರಿಗೆ 100 ರು ದಂಡ, ಎರಡನೇ ಬಾರಿಗೆ 500 ರು ದಂಡ ವಿಧಿಸಲಾಗುತ್ತದೆ. [ | ಪಂದ್ಯದ ವರದಿ]
ಈ ನಿಯಮಕ್ಕೆ ಹೇಗೆ ಅಂಪೈರ್ ಸೂಕ್ತವಾಗುತ್ತದೆಯೋ ಗೊತ್ತಿಲ್ಲ ಹೆಲ್ಮೆಟ್ ಧರಿಸಿದ್ದ 53 ವರ್ಷ ವಯಸ್ಸಿನ ಅಂಪೈರ್ ಜಾನ್ ವುಡ್ ಚಿತ್ರ ಬಳಸಿಕೊಂಡಿದ್ದಾರೆ.

ಈ ಹಿಂದೆ ತಮಿಳುನಾಡು ಹಾಗೂ ಪಂಜಾಬ್ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಪೈರ್ ಜಾನ್ ವುಡ್ ಅವರು ದಿಂಡಿಗಲ್ ನಲ್ಲಿ ಡಿಸೆಂಬರ್ 2015ರಂದು ಹಣೆಗೆ ಚೆಂಡು ಬಡಿದು ಸುಧಾರಿಸಿಕೊಂಡಿದ್ದಾರೆ. [ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ]
ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಈ ಬಗ್ಗೆ ತಿಳಿಸಿದ ಅಂಪೈರ್ ಜಾನ್, ಕಡಿಮೆ ತೂಕದ ಹೆಲ್ಮೆಟ್ ಗಳಿಗೆ ಬೇಡಿಕೆ ಇಟ್ಟು ತರಿಸಿಕೊಂಡು ಧರಿಸಿದ್ದಾರೆ.[ಹೆಲ್ಮೆಟ್ ಕಡ್ಡಾಯ ನಿಯಮಕ್ಕೆ ಬೆಂಗಳೂರು ಮೊದಲ ಚುಂಬನ]
ಸೆಹ್ವಾಗ್, ಗೇಲ್, ವಾರ್ನರ್ ರಂಥ ಸ್ಫೋಟಕ ಬ್ಯಾಟ್ಸ್ ಮನ್ ಗಳಿರುವಾಗ ಅಂಪೈರ್ ಗಳು ಹೆಲ್ಮೆಟ್ ಧರಿಸುವುದು ಸೂಕ್ತ ಎಂದು ಕಳೆದ ವರ್ಷ ಸೈಮನ್ ಟಫಲ್ ಹೇಳಿದ್ದರು. ಅದೀಗ ನಿಜವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications