ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಸೂಪರ್ ಓವರ್: ಇದ್ಯಾವ ತಂಡಗಳ ವಿರುದ್ಧ ಗೊತ್ತಾ !

ನ್ಯೂಜಿಲ್ಯಾಂಡ್ ಮತ್ತು ಟೀಮ್ ಇಂಡಿಯಾ ವಿರುದ್ಧ ಸತತ ಎರಡು ಪಂದ್ಯಗಳು ಸೂಪರ್ ಓವರ್‌ನಲ್ಲಿ ಅಂತ್ಯಗೊಂಡ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಪಂದ್ಯ ಸೂಪರ್ ಓವರ್‌ನಲ್ಲಿ ಫಲಿತಾಂಶ ಕಂಡಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ರಸದೌತಣ ಸಿಕ್ಕಿದೆ.
ಹೌದು ಈ ಸೂಪರ್ ಓವರ್ ಪಂದ್ಯ ನಡೆದಿದ್ದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವೆ. ಭಾರತದ ಮಹಿಳಾ ತಂಡವೂ ಪಾಲ್ಗೊಂಡಿರುವ ತ್ರಿಕೋನ ಟಿ20 ಸರಣಿಯಲ್ಲಿ ಈ ರೋಚಕ ಕಾದಾಟ ನಡೆದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 156 ರನ್‌ಗಳನ್ನು ಗಳಿಸಿತ್ತು. ಇಂಗ್ಲೆಂಡ್ ಪರವಾಗಿ ನೈಟ್ 78 ರನ್ ಬಾರಿಸಿ ಮಿಂಚಿದ್ದರೆ ವಿಲ್ಸನ್ ಅಜೇಯ 39 ರನ್ ಬಾರಿಸಿ ಮಿಂಚಿದ್ದರು.
ಇಂಗ್ಲೆಂಡ್ ತಂಡ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ 8 ವಿಕೆಟ್ನ್ನು ಕಳೆದುಕೊಂಡು 156 ರನ್‌ಗಳಿಸಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆಸ್ಟ್ರೇಲಿಯಾ ಪರವಾಗಿ ಮೂನಿ 65 ಮತ್ತು ಸುದರ್ಲಾಂಡ್ ಅಜೇಯ 22 ರನ್ ಗಳಿಸಿದರು. ಫಲಿತಾಂಶ ಟೈ ಆದ ಕಾರಣ ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ನಿರ್ಧರಿಸಲಾಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರು ಕೇವಲ 8 ರನ್ ಗಳಿಸಲಷ್ಟೇ ಶಕ್ತರಾದರು. ಗಾರ್ಡ್ನರ್ 5 ಮತ್ತು ಹ್ಯಾಲಿ 3 ರನ್ ಗಳಿಸಿದರು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರವಾಗಿ ನೈಟ್ 9 ರನ್ ಗಳಿಸಿದರೆ, ವ್ಯಾಟ್ 1 ರನ್‌ಗಳಿಸಿ ಭರ್ಜರಿಯಾಗಿ ಗೆಲ್ಲಿಸಿದರು. ಈ ಮೂಲಕ ಇಂಗ್ಲೆಂಡ್ ಸೂಪರ್ ಓವರ್‌ನಲ್ಲಿ ವಿಜಯಿಯಾಯಿತು. ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡವನ್ನು ಟೀಮ್ ಇಂಡಿಯಾ ವನಿತೆಯರು ಸೋಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications