ಆಸ್ಟ್ರೇಲಿಯಾ vs ಇಂಗ್ಲೆಂಡ್ ODI: 40 ವರ್ಷಗಳ ಬಳಿಕ ವಿಶೇಷ ದಾಖಲೆಗೆ ಇತ್ತಂಡಗಳು ಸಜ್ಜು

ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಸರಣಿಗೆ ಸಜ್ಜಾಗಿದೆ. ಮೂವರು ಏಕದಿನ ಪಂದ್ಯಗಳ ಸರಣಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿರುವ ಇಂಗ್ಲೆಂಡ್ ತವರು ಅಂಗಳದ ಬೆಂಬಲದೊಂದಿಗೆ ಈ ಸರಣಿಯ ಫೇವರೀಟ್ ತಂಡ ಎನಿಸಿಕೊಂಡಿದೆ.
ಏಕದಿನ ಸರಣಿಯನ್ನಾಡಲು ಎರಡೂ ತಂಡಗಳು ಕಣಕ್ಕಿಳಿಯುತ್ತಿದ್ದಂತೆಯೇ 40 ವರ್ಷಗಳ ಬಳಿಕ ವಿಶೇಷ ದಾಖಲೆಯೊಂದು ದಾಖಲಾಗಲಿದೆ. ಒಂದೇ ಕ್ರೀಡಾಂಗಣದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು ಈ ರೀತಿಯ ದೃಷ್ಠಾಂತ ಸುಮಾರು 40 ವರ್ಷಗಳಷ್ಟು ಹಿಂದೆ ನಡೆದಿತ್ತು.

ನಾಲ್ಕು ದಶಕದ ಹಿಂದೆ..
1979-80ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗಿದ್ದಾಗ ಸರಣಿಯ 3 ಪಂದ್ಯಗಳು ಒಂದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಆಗ ಸರಣಿಯ ಎಲ್ಲಾ ಪಂದ್ಯಗಳು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆದಿತ್ತು. ಸುಮಾರು ನಾಲ್ಕು ದಶಕದ ಬಳಿಕ ಮತ್ತೆ ಅದೇ ವಿಶೇಷ ಸಂದರ್ಭಕ್ಕೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸಾಕ್ಷಿಯಾಗುತ್ತಿದೆ.

ಆಸ್ಟ್ರೇಲಿಯಾ ಕಳಪೆ ಪ್ರದರ್ಶನ
ಇನ್ನು ಸುದೀರ್ಘ ಸಮಯದ ಬಳಿಕ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಇಷ್ಟವಾಗದ ಅಂಕಿಅಂಶವೂ ಈ ಸರಣಿಗೆ ಮುನ್ನ ಕಾಡುತ್ತಿದೆ. ಕಳೆದ ಏಕದಿನ ವಿಶ್ವಕಪ್‌ನ ಬಳಿಕ ಆಸ್ಟ್ರೇಲಿಯಾ ತಂಡ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಿದೆ. ಇದು ಆಸ್ಟ್ರೇಲಿಯಾ ತಂಡದ ನಿದ್ದೆಗೆಡಲು ಕಾರಣವಾಗಿದೆ.

3ನೇ ಕಳಪೆ ತಂಡ ಆಸಿಸ್!
ಏಕದಿನ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಲ್ಗೊಂಡ 7 ಏಕದಿನ ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಉಳಿದ 5 ಪಂದ್ಯಗಳಲ್ಲಿ ಸೋಲು ಕಂಡಿದೆ. ವಿಶ್ವಕಪ್ ಬಳಿಕ 5ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ ಪಾಲ್ಗೊಂಡ 14 ತಂಡಗಳ ಗೆಲುವಿನ ಸರಾಸರಿಯಲ್ಲಿ ಆಸ್ಟ್ರೇಲಿಯಾ 3ನೇ ಕಳಪೆ ತಂಡ ಎನಿಸಿಕೊಂಡಿದೆ.

ಇಂಗ್ಲೆಂಡ್ ಸಾಮರ್ಥ್ಯ ಹೊಗಳಿದ ಫಿಂಚ್
ಸರಣಿಗೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಆರೋನ್ ಫಿಂಚ್ ಮಾತನಾಡಿದರು. ಏಕದಿನ ಚಾಂಪಿಯನ್ ತಂಡವಾಗಿರುವ ಇಂಗ್ಲೆಂಡ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಸಾಕಷ್ಟು ಶಕ್ತಿಯುತವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅದ್ಭುತ ಆಟವನ್ನು ತೋರ್ಪಡಿಸಿದ್ದು ನಿರಂತರ ಆಕ್ರಮಣಕಾರಿ ಆಟದಿಂದ ವಿಶ್ವಕಪ್‌ಅನ್ನು ಕೂಡ ಗೆದ್ದುಕೊಂಡಿದ್ದಾರೆ ಎಂದು ಎದುರಾಳಿ ಇಂಗ್ಲೆಂಡ್ ತಂಡದ ಸಾಮರ್ಥ್ಯವನ್ನು ಹೊಗಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications