Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಡ್ನಿ: ರೋಹಿತ್ ಹೋರಾಟ ವ್ಯರ್ಥ, ಆಸೀಸ್ ವಿರುದ್ಧ ಭಾರತಕ್ಕೆ ಮುಖಭಂಗ

Australia vs India, 1st ODI - Live Cricket Score

ಸಿಡ್ನಿ, ಜನವರಿ 12: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿರುವ ಟೀಮ್ ಇಂಡಿಯಾ ಶನಿವಾರ (ಜನವರಿ 12) ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 34 ರನ್ ಸೋಲನುಭವಿಸಿದೆ. ಇದರೊಂದಿಗೆ ರೋಹಿತ್ ಶರ್ಮಾ ಅವರ ಶತಕದ (133 ರನ್) ಹೋರಾಟ ವ್ಯರ್ಥವಾಯಿತಲ್ಲದೆ ಸರಣಿಯಲ್ಲಿ ಆಸೀಸ್ 1-0ಯ ಮುನ್ನಡೆ ಸಾಧಿಸಿದೆ.

ಆಸೀಸ್ ನೀಡಿದ್ದ 289 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತವಾಗಿತ್ತು. ಕಾರಣ ಶಿಖರ್ ಧವನ್ 0, ವಿರಾಟ್ ಕೊಹ್ಲಿ 3 ಮತ್ತು ಅಂಬಾಟಿ ರಾಯುಡು 0ಗೆ ವಿಕೆಟ್ ಒಪ್ಪಿಸಿದ್ದರು. ಇಂದಿನ ಪಂದ್ಯದ ಸೋಲಿಗೆ ತಂಡದ ಬ್ಯಾಟಿಂಗ್ ವೈಫಲ್ಯ ನೆಪವಾದಂತಾಗಿದೆ.

ಭಾರತ ಪರ ಹೋರಾಟ ನಡೆಸಿದ್ದು ರೋಹಿತ್ ಒಬ್ಬರೆ. ರೋಹಿತ್ ಭರ್ಜರಿ 133 ರನ್ ತಂಡಕ್ಕೆ ಸೇರಿಸಿದರು. ಅದು ಬಿಟ್ಟರೆ ಎಂಎಸ್ ಧೋನಿಯಿಂದ 51 ರನ್ ಕೊಡುಗೆ ಲಭಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43627

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ, ಉಸ್ಮಾನ್ ಖವಾಜಾ (59 ರನ್), ಶಾನ್ ಮಾರ್ಷ್ (54), ಪೀಟರ್ ಹ್ಯಾಂಡ್ಸ್‌ಕಾಂಬ್ (73) ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದು 288 ರನ್ ಪೇರಿಸಿತ್ತು. ಭಾರತ ಗೆಲ್ಲಲು 289 ರನ್‌ಗಳ ಅಗತ್ಯವಿತ್ತು.

ಆಸೀಸ್ ಇನ್ನಿಂಗ್ಸ್ ವೇಳೆ ಭಾರತದ ಭುವನೇಶ್ವರ್ ಕುಮಾರ್ 2, ಕುಲದೀಪ್ ಯಾದವ್ 2 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಎದುರಾಳಿಯ ರನ್ ಕದಿಯುವಿಕೆಗೆ ಬ್ರೇಕ್ ಒತ್ತಿದರು. ಆದರೂ ಭಾರತಕ್ಕೆ ಉತ್ತಮ ರನ್ ಗುರಿ ನೀಡುವಲ್ಲಿ ಆ್ಯರನ್ ಫಿಂಚ್ ಬಳಗ ಯಶಸ್ವಿಯಾಗಿತ್ತು.

ಟೆಸ್ಟ್ ಸರಣಿಯನ್ನು ಹಿಡಿದಿಟ್ಟುಕೊಳ್ಳಲು ಆಸೀಸ್ ಕೊಸರಾಟ ನಡೆಸಿತ್ತಾದರೂ ಭಾರತ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಟೆಸ್ಟ್ ಸರಣಿ ಸೋತಿರುವ ಆಸೀಸ್ ಏಕದಿನದಲ್ಲಾದರೂ ಮೇಲುಗೈ ಸಾಧಿಸುವ ಯೋಜನೆಯಲ್ಲಿತ್ತು. ಆಸೀಸ್ ಯೋಜನೆ ಸಫಲವಾಗಿದೆ. ಭಾರತದ ಇನ್ನಿಂಗ್ಸ್‌ ವೇಳೆ ಜಾಯ್ ರಿಚರ್ಡ್ಸನ್ 4, ಜೇಸನ್ ಬೆಹೆರೆನ್ಡಾಫ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 2 ವಿಕೆಟ್ ಉರುಳಿಸಿದರು. ರಿಚರ್ಡ್ಸನ್ ಪಂದ್ಯಶ್ರೇಷ್ಠರೆನಿಸಿದರು.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಅಲೆಕ್ಸ್ ಕ್ಯಾರಿ (ವಿಕೆ), ಉಸ್ಮಾನ್ ಖಜಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ನಾಥನ್ ಲಿಯಾನ್, ಪೀಟರ್ ಸಿಡ್ಲ್, ಜೀಯೆ ರಿಚರ್ಡ್ಸನ್, ಜಾಸನ್ ಬೆಹೆರೆನ್ಡಾಫ್.

ಭಾರತ ತಂಡ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ವಿಕೆ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ, ಕೆ ಖಲೀಲ್ ಅಹ್ಮದ್.

Story first published: Saturday, January 12, 2019, 16:36 [IST]
Other articles published on Jan 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+