Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧ ಕಳಪೆ ಬ್ಯಾಟಿಂಗ್‌ಗೆ ಸೋಲಿನ ಬೆಲೆತೆತ್ತ ಭಾರತ

Australia vs India, 1st Test: Australia won by 8 wickets

ಅಡಿಲೇಡ್: ಅಡಿಲೇಡ್‌ ಓವಲ್ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 19) ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲನೇ ಟೆಸ್ಟ್‌ (ಚೊಚ್ಚಲ ಪಿಂಕ್‌ಬಾಲ್ ಟೆಸ್ಟ್‌)ನಲ್ಲಿ ಆತಿಥೇಯ ಆಸ್ಟ್ರೇಲಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0ಯ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ಪೇರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 74, ಚೇತೇಶ್ವರ ಪೂಜಾರ 43, ಅಜಿಂಕ್ಯ ರಹಾನೆ 42 ರನ್ ಬಾರಿಸಿದ್ದೇ ಹೆಚ್ಚು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 72.1 ಓವರ್‌ಗೆ 191 ರನ್ ಗಳಿಸಿ 53 ರನ್ ಹಿನ್ನಡೆ ಅನುಭವಿಸಿತ್ತು.

1
48440

ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿತ್ತು. 21.2 ಓವರ್‌ಗೆ 9 ವಿಕೆಟ್ ಕಳೆದು 36 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ತಂಡದ ಯಾವುದೇ ಬ್ಯಾಟ್ಸ್‌ಮನ್‌ 10ಕ್ಕೂ ಹೆಚ್ಚು ರನ್ ಗಳಿಸಲಿಲ್ಲ. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜೋ ಬರ್ನ್ಸ್ 51, ಮ್ಯಾಥ್ಯೂ ವೇಡ್ 33 ರನ್‌ನೊಂದಿಗೆ 21 ಓವರ್‌ಗೆ 2 ವಿಕೆಟ್ ಕಳೆದು 93 ರನ್ ಬಾರಿಸಿತು.

ಭಾರತದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 4, ಪ್ಯಾಟ್ ಕಮಿನ್ಸ್ 4+3, ಜೋಶ್ ಹ್ಯಾಝಲ್ವುಡ್ 5+1, ನೇಥನ್ ಲಿಯಾನ್ 1 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಭಾರತದ ಉಮೇಶ್ ಯಾದವ್ 3, ಜಸ್‌ಪ್ರೀತ್ ಬೂಮ್ರಾ 2, ಆರ್‌ ಅಶ್ವಿನ್ 4+1 ವಿಕೆಟ್‌ ಪಡೆದರು.

Story first published: Saturday, December 19, 2020, 14:40 [IST]
Other articles published on Dec 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+