ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಡಿಲೇಡ್ ಮೊದಲ ಟೆಸ್ಟ್: ಆಸೀಸ್ ರನ್ ಕದಿಯುವಿಕೆಗೆ ತಡೆಯೊಡ್ಡಿದ ಭಾರತ

Australia vs India, 1st Test, Day 2, Live Cricket Score

ಅಡಿಲೇಡ್, ಡಿಸೆಂಬರ್ 7: ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕಿಳಿದಿದ್ದ ಭಾರತ ಗುರುವಾರ (ಡಿಸೆಂಬರ್ 6) ಮೊದಲ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ಮೊತ್ತ ಪೇರಿಸುವಲ್ಲಿ ಎಡವಿತ್ತು. ಆದರೆ ಮೊದಲ ಇನ್ನಿಂಗ್ಸ್‌ಗೆ ಇಳಿದಿರುವ ಆಸ್ಟ್ರೇಲಿಯವನ್ನೂ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಶುಕ್ರವಾರ (ಡಿಸೆಂಬರ್ 7) ಮೊದಲ ಇನ್ನಿಂಗ್ಸ್‌ಗೆ ಇಳಿದ ಆಸ್ಟ್ರೇಲಿಯಾ ದಿನದಾಂತ್ಯಕ್ಕೆ 88 ಓವರ್‌ಗಳಲ್ಲಿ 7 ವಿಕೆಟ್ ಕಳೆದು 191 ರನ್ ಪೇರಿಸಿದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43623

ಆಸ್ಟ್ರೇಲಿಯಾ ಪರ ಮಾರ್ಕಸ್ ಹ್ಯಾರಿಸ್ 26, ಉಸ್ಮಾನ್ ಖವಾಜಾ 28, ಪೀಟರ್ ಹ್ಯಾಂಡ್ಸ್ಕಾಂಬ್ 34, ಟ್ರಾವಿಸ್ ಹೆಡ್ 61 ರನ್ ಗಳಿಸಿ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು. ಶುಕ್ರವಾರ ದಿನದಾಟದ ಕೊನೆಗೆ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಕ್ರೀಸ್ ನಲ್ಲಿದ್ದರು. ಈ ವೇಳೆ ಭಾರತ ಪರ ಆರ್ ಅಶ್ವಿನ್ 3, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ತಲಾ 2 ವಿಕೆಟ್ ಕೆಡವಿ ಆಸೀಸ್ ರನ್ ಕದಿಯುವಿಕೆಗೆ ತಡೆಯೊಡ್ಡಿದರು.

ಗುರುವಾರ (ಡಿಸೆಂಬರ್ 6) ಟಾಸ್ ಗೆದ್ದು ಮೊದಲ ಟೆಸ್ಟ್ ನ ಮೊದಲ ದಿನದಾಟಕ್ಕಿಳಿದಿದ್ದ ಭಾರತ ದಿನದಾಂತ್ಯಕ್ಕೆ 87.5 ಓವರ್‌ಗಳಲ್ಲಿ 9 ವಿಕೆಟ್ ಕಳೆದು 250 ರನ್ ಪೇರಿಸಿತ್ತು. ಅದೂ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರ ಶತಕ (123 ರನ್) ಬೆಂಬಲ ದೊರೆತಿದ್ದರಿಂದ ಭಾರತ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿತ್ತು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಬೇಗನೆ ವಿಕೆಟ್ ಕಳೆದುಕೊಂಡಿತ್ತು. ಲೋಕೇಶ್ ರಾಹುಲ್ 2, ಮುರಳಿ ವಿಜಯ್ 11, ವಿರಾಟ್ ಕೊಹ್ಲಿ 3, ಅಜಿಂಕ್ಯ ರಹಾನೆ 13 ರನ್ ಪೇರಿಸಿ ವಿಕೆಟ್ ಒಪ್ಪಿಸಿದ್ದರು. ಇವು ತಂಡದ ಹಿನ್ನಡೆಗೆ ಕಾರಣವಾಗಿತ್ತು. ಗುರುವಾರ (ಡಿಸೆಂಬರ್ 6)ರ ದಿನದಾಂತ್ಯಕ್ಕೆ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ವಿಕೆಟ್ ಉಳಿದುಕೊಂಡಿತ್ತು.

ಆದರೆ ಶುಕ್ರವಾರ (ಡಿ.7) ಶಮಿ ಬೇಗ ಔಟ್ ಆಗಿದ್ದರಿಂದ ಎರಡನೇ ದಿನದಾಟದ ವೇಳೆ ಭಾರತದ ಖಾತೆಗೆ ಒಂದು ರನ್ ಕೂಡ ಲಭಿಸಲಿಲ್ಲ. ಇನ್ನು ಆದಷ್ಟು ಶೀಘ್ರ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಮುಗಿಸುವಂತೆ ನೋಡಿಕೊಂಡು, ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಹೆಚ್ಚು ರನ್ ಕಲೆ ಹಾಕಿದರೆ ಆರಂಭಿಕ ಪಂದ್ಯವನ್ನು ಗೆದ್ದುಕೊಳ್ಳಬಹುದು.

ಭಾರತ ತಂಡ: ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ ತಂಡ: ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಟಿಮ್ ಪೈನೆ (ಸಿ & ವಿ.ಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜ್ವುಡ್, ನಾಥನ್ ಲಿಯಾನ್.

Story first published: Friday, December 7, 2018, 15:35 [IST]
Other articles published on Dec 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X